Advertisement

ಮಾಜಿ ಟಿಕ್ ಟಾಕ್ ಸ್ಟಾರ್ ಗಳೇ ನಿಮಗೊಂದು ಗುಡ್ ನ್ಯೂಸ್, ಬಂದಿದೆ REELS!

08:41 PM Jul 08, 2020 | Hari Prasad |

ನವದೆಹಲಿ: ಟಿಕ್ ಟಾಕ್ ಇಲ್ಲದೆ ಬಹಳ ಬೇಜಾರುಪಟ್ಟುಕೊಂಡಿರುವ ನಮ್ಮ ಟಿಕ್ ಟಾಕ್ ಸ್ಟಾರ್ ಗಳಿಗೆಲ್ಲಾ ಒಂದು ಗುಡ್ ನ್ಯೂಸ್ ಇಲ್ಲಿದೆ.

Advertisement

ಈ ಚೈನೀಸ್ ಆ್ಯಪ್ ನಮ್ಮ ದೇಶದಿಂದ ಬ್ಯಾನ್ ಆಗಿ ಸರಿಸುಮಾರು ಒಂದು ವಾರಗಳ ಬಳಿಕ ಫೇಸ್ಬುಕ್ ಒಡೆತನದ ಇನ್ ಸ್ಟಾಗ್ರಾಂ ತನ್ನಲ್ಲಿ ಟಿಕ್ ಟಾಕನ್ನೇ ಹೋಲುವ ಹೊಸ ಫೀಚರ್ ಒಂದನ್ನು ಪ್ರಾರಂಭಿಸಿದೆ, ಅದುವೇ ರೀಲ್ಸ್.

ಭಾರತದಲ್ಲಿ ಇನ್ ಸ್ಟಾ ಪ್ರಾರಂಭಿಸಲು ಉದ್ದೇಶಿಸಿರುವ ಈ ಹೊಸ ಫೀಚರ್ ನ ಪ್ರಾಯೋಗಿಕ ಲಾಂಚಿಂಗ್ ಇಂದು ಆರಂಭಗೊಂಡಿದೆ. ಈ ಹೊಸ ಫೀಚರ್ ನಲ್ಲಿ ಬಳಕೆದಾರರು 15 ಸೆಕೆಂಡ್ ಗಳ ವಿಡಿಯೋವನ್ನು ಅಪ್ಲೋಡ್ ಮಾಡಲು ಅವಕಾಶವಿದೆ.

ಟಿಕ್ ಟಾಕ್ ಮತ್ತು ಯೂಟ್ಯೂಬ್ ನಲ್ಲಿ ಈಗಾಗಲೇ ತಮ್ಮ ವೈವಿಧ್ಯಮಯ ವಿಡಿಯೋಗಳ ಮೂಲಕ ಸ್ಟಾರ್ ಪಟ್ಟಕ್ಕೇರಿರುವ ವ್ಯಕ್ತಿಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡು ತನ್ನ ಈ ಹೊಸ ಫೀಚರನ್ನು ಶೀಘ್ರವೇ ದೇಶದಲ್ಲಿ ಜನಪ್ರಿಯಗೊಳಿಸುವ ಗುರಿಯನ್ನೂ ಸಹ ಇನ್ ಸ್ಟಾಗ್ರಾಂ ಹೊಂದಿದೆ ಎಂದು ಸಂಸ್ಥೆ ಈಗಾಗಲೇ ಪ್ರಕಟಿಸಿದೆ.

ಇನ್ನೊಂದು ವಿಶೇಷತೆಯೆಂದರೆ ಈ ರೀಲ್ಸ್ ಫೀಚರ್ ಇದುವರೆಗೆ ಕೇವಲ 3 ದೇಶಗಳಲ್ಲಿ ಮಾತ್ರವೇ ಪರಿಚಯಗೊಂಡಿತ್ತು, ಅವುಗಳೆಂದರೆ, ಬ್ರಝಿಲ್, ಫ್ರಾನ್ಸ್ ಹಾಗೂ ಜರ್ಮನಿ. ಹಾಗಾಗಿ ಇನ್ ಸ್ಟಾಗ್ರಾಂನ ಈ ಹೊಸ ಶಾರ್ಟ್ ವಿಡಿಯೋ ಪ್ಲ್ಯಾಟ್ ಫಾರಂ ಪರಿಚಯಿಸಲ್ಪಡುತ್ತಿರುವ ಜಗತ್ತಿನ ನಾಲ್ಕನೇ ದೇಶ ಭಾರತವಾಗಿದೆ.

Advertisement

ಇಲ್ಲಿರುವ ಯುವ ಜನತೆಯನ್ನೇ ಟಾರ್ಗೆಟ್ ಮಾಡಿಕೊಂಡು ಹೊರಬರುತ್ತಿರುವ ಈ ಹೊಸ ಫೀಚರ್ ನಲ್ಲಿ ನಿಮ್ಮ ವಿಡಿಯೋ ಮಾಡಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿರುವ ಇನ್ ಸ್ಟಾಗ್ರಾಂ ಆ್ಯಪ್ ನಲ್ಲಿ ಕೆಮರಾ ಆಯ್ಕೆಗೆ ಕ್ಲಿಕ್ ಮಾಡಬೇಕು.

ಅಲ್ಲಿ ಸ್ಕ್ರೀನ್ ನ ಕೆಳಭಾಗದಲ್ಲಿ ಕಾಣಿಸುವ REEL ಆಯ್ಕೆಯನ್ನು ಬಳಕೆದಾರರು ಕ್ಲಿಕ್ ಮಾಡಿದ ಸಂದರ್ಭದಲ್ಲಿ ಹಲವಾರು ಆಯ್ಕೆಗಳು ನಿಮಗೆ ಕಾಣಿಸುತ್ತವೆ ಮತ್ತು ಈ ಬಳಕೆದಾರ ಸ್ನೇಹಿ ಆಯ್ಕೆಗಳ ಮೂಲಕ ನೀವು 15 ಸೆಕೆಂಡ್ ಗಳ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅಪ್ಲೋಡ್ ಮಾಡಬಹುದಾಗಿರುತ್ತದೆ.

ಪ್ರಾರಂಭದಲ್ಲಿ ಇನ್ ಸ್ಟಾ ತನ್ನ ಈ ಹೊಸ ಫೀಚರ್ ನಲ್ಲಿ ರಾಧಿಕಾ ಬಂಗಿಯಾ, ಜಾಹ್ನವಿ ದಾಸೆಟ್ಟಿ, ಇಂದ್ರಾಣಿ ಬಿಸ್ವಾಸ್, ಅಮ್ಮಿ ವಿರ್ಕ್ ಹಾಗೂ ಇನ್ನಿತರರ ಮನರಂಜನಾ ವಿಡಿಯೋಗಳನ್ನು ವೀಕ್ಷಕರಿಗೆ ಲಭ್ಯವಾಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next