ಮುದ್ದಾದ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಅಧಿಕ ಮಂದಿ ತಮ್ಮ ಮಾನಸಿಕ ಒತ್ತಡ ನಿವಾರಣೆಗಾಗಿ ಇಂತಹ ವಿಡಿಯೋಗಳನ್ನು ನೋಡಲಿಚ್ಚಿಸುತ್ತಾರೆ. ಇಂತಹ ಸಾಲಿಗೆ ಈ ಮುದ್ದಾದ ಬಾತುಕೋಳಿಯ ವೀಡಿಯೋ ಸೇರುತ್ತದೆ.
ಅಮೇರಿಕಾ – ಫೆನ್ಸಿಲ್ವೇನಿಯಾದ ಮಿಲ್ಫೋರ್ಡ್ ಪ್ರದೇಶದ ಮಂಚ್ಕಿನ್ ಎಂಬ ಹೆಸರಿನ ಈ ಬಾತುಕೋಳಿ ಟಿಕ್‌ಟಾಕ್ ನಲ್ಲಿ 2.7 ಮಿಲಿಯನ್ ಹಿಂಬಾಲಕರನ್ನು ಹೊಂದಿತ್ತು. ಕೃಸ್ಸಿ ಎಲ್ಲೀಸ್ ಈ ಬಾತುವಿನ ಒಡತಿ. ಆಕೆ ಬಯಸಿದಂತೆ ಚಿತ್ರಿಕರಿಸಲು ಕ್ಯಾಮರಾ ಮುಂದೆ ನಿಲ್ಲುತ್ತಿದ್ದ ಆ ಬಾತಕೋಳಿಯನ್ನು ಆಕೆ ʼ ವರ್ಲ್ಡ್ ಮೋಸ್ಟ್ ಸ್ಪಾಯಿಲ್ಡ್ ಡಕ್ʼ ಎಂದು ಕರೆಯುತ್ತಿದ್ದಳು. ಈಕೆ ಈ ಬಾತುಕೋಳಿಯನ್ನು ತನ್ನ ಬಾಲ್ಯದಿಂದಲೂ ಸಾಕುತ್ತಿದ್ದಳು..
ಸಾಮಾಜಿಕ ಜಾಲತಾಣದಲ್ಲಿ ಆಕೆ ಮತ್ತು ಬಾತುಕೋಳಿಗೆ “ಡಂಕಿನ್ ಡಕ್”ಎಂಬ ಹೆಸರಿನ ಒಂದೇ ಖಾತೆ ತೆರೆದಿದ್ದಳು. ಈ ಹೆಸರು ಆಕೆಯು ಬಾಲ್ಯದಲ್ಲಿ ಫಾಸ್ಟ್ ಫುಡ್‌ಗಾಗಿ ಹೊರ ಹೋಗುತ್ತಿದ್ದ ”ಡಂಕಿನ್ ಡೋನಟ್ಸ್” ಎಂಬ ನಗರದ ಹೆಸರಿಂದ ಪ್ರಭಾವಿತವಾಗಿತ್ತು. ಇವರ ಇನ್ಟಾಗ್ರಾಂ ಖಾತೆಯು 2,45,000 ಹಿಂಬಾಲಕರನ್ನು ಹೊಂದಿತ್ತು.
ಇದನ್ನೂ ಓದಿ:- ಉತ್ತರ ಕರ್ನಾಟಕದಲ್ಲಿ ಪ್ರತಿಭೆ ಇದೆ, ಆದರೆ ಅವಕಾಶದ ಕೊರತೆಯಿದೆ: ಸಿಎಂ ಬೊಮ್ಮಾಯಿ
ಒಡತಿ ಕೃಸ್ಸಿಗೆ ತಿಂಗಳಿಗೆ ಇನ್ಸ್ ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಿಂದ 4,500 ಡಾಲರ್ ಅಂದರೆ ಸುಮಾರು 3,34,363.05 ರೂಪಾಯಿಗಳಷ್ಟು ಸಂಪಾದನೆಯಾಗುತ್ತಿತ್ತು. ಈಕೆಯ ಮೂಲ ಆದಾಯ ʼಟಿಕ್‌ಟಾಕ್ ಕ್ರೀಯೇಟರ್ ಫಂಡ್ʼನಿಂದ ದೊರೆಯುತ್ತಿತ್ತು. ಆಕೆ ಬಳಸಿದ ಕಳೆದೊಂದು ತಿಂಗಳಿನಲ್ಲೇ ಈ ಚೀನಾ ಮೂಲದ ಆ್ಯಪ್ ಕನಿಷ್ಠ1ಲಕ್ಷ ಅಧಿಕೃತ ವೀಕ್ಷಕರನ್ನು ಹೊಂದಿತ್ತು. ಇನ್ಟಾಗ್ರಾಂನಲ್ಲಿ ಪ್ರಾಯೋಜಿತ ವಿಷಯಗಳ ಜಾಹೀರಾತುಗಳು ಕೂಡ ಈಕೆಯ ಆದಾಯದ ಮೂಲವಾಗಿದೆ. ನ್ಯೂಯಾರ್ಕ್ ಪೋಸ್ಟ್ ರಿಪೋರ್ಟ್ ಎಂಬ ಸುದ್ಧಿ ಸಂಸ್ಥೆ ಹೇಳುವಂತೆ ಈಕೆಯ ಈ ಬಾತುಕೋಳಿ ಅಮೂರ್ತ ಚಿತ್ರಗಳನ್ನು ಮಾಡುವ ಮೂಲಕವೂ ಈಕೆಯ ಸಂಪಾದನೆಗೆ ಸಹಾಯ ಮಾಡುತ್ತಿತ್ತು.
ಈಕೆಯ 16ನೇ ವಯಸ್ಸಿನಲ್ಲಿ ಈ ಬಾತುಕೋಳಿಯನ್ನು ದತ್ತು ಪಡೆದಿದ್ದಳು ಮತ್ತು ಆರಂಭದಲ್ಲಿ ಇದರ ಜೊತೆಗಿನ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಜುಲೈ 2018ರ ನಂತರ ʼಡಕ್ಕಿಂನ್ ಡಕ್ʼ ಇನ್ಟಾಗ್ರಾಂ ಫೇಜ್ 5000 ಹಿಂಬಾಲಕರನ್ನು ಪಡೆದಿತ್ತು. ಇಂತಹದ್ದೇ ಆಸಕ್ತಿ ಮತ್ತು ಹವ್ಯಾಸವುಳ್ಳವರು ಆಕೆಗೆ ಪರಿಚಯವಾಗುತ್ತಿದ್ದಂತೆ ಆಕೆ ಈ ಫೇಜ್‌ಗಳನ್ನು ಹಣ ಸಂಪಾದನೆಗೆ ಬಳಸಲು ನಿರ್ಧರಿಸಿದಳು.
ಪ್ರಸ್ತುತ ಆಕೆ ಒಂದು ದಿನಸಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ, ಆದರೆ, ಆಕೆಯ ತಿಂಗಳ ಸಂಬಳಕ್ಕಿಂತ ಹೆಚ್ಚು ಆಕೆ ಈ ಜಾಲತಾಣಗಳ ವೀಡಿಯೋಗಳಿಂದಲೇ ಸಂಪಾದಿಸುತ್ತಿದ್ದಾಳೆ ಎಂದು ವರದಿಯಾಗಿತ್ತು.