ನವದೆಹಲಿ: ಇನ್‌ಸ್ಟಾಗ್ರಾಮ್ ನ ಹಲವಾರು ಖಾತೆಗಳನ್ನು ಅಚಾನಕ್ ಆಗಿ ಸ್ಥಗಿತಗೊಳಿಸಿದ ನಂತರ ಸೋಮವಾರ (ಅಕ್ಟೋಬರ್ 31) ಮೈಕ್ರೋಬ್ಲಾಗಿಂಗ್ ಸೈಟ್ ಮತ್ತು ಟ್ವಿಟ್ಟರ್ ಗಳು ಮೀಮ್‌ಗಳಿಂದ ತುಂಬಿತ್ತು.
ಟ್ವಿಟ್ಟರ್ ನಲ್ಲಿ ತಮ್ಮ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳುವ ಇನ್ಟಾಗ್ರಾಂ ಸಂದೇಶಗಳನ್ನು ತೋರಿಸುವ ಸ್ಕ್ರೀನ್ ಛಾಯಾಚಿತ್ರಗಳ ಪೋಸ್ಟ್‌ಗಳನ್ನು ಹಲವರು ಹಂಚಿಕೊಂಡಿದ್ದಾರೆ. ಜೊತೆಗೆ ಇನ್ಟಾಗ್ರಾಂ ಅಪ್ಲಿಕೇಶನ್ ಡೌನ್ ಆಗಿರುವಾಗ ಜನರು ಇತರ ಬಳಕೆದಾರರು ಅದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಸಂಬಂಧಿತ ವಿಷಯದ ಬಗ್ಗೆ ಮೀಮ್ ಚಿತ್ರಗಳ ಮೂಲಕ ವ್ಯಂಗ್ಯವಾಗಿ ಪೋಸ್ಟ್ ಮಾಡಲು ಟ್ವಿಟ್ಟರ್ ಗೆ ಧಾವಿಸಿದ್ದಾರೆ.
ಇನ್ಟಾಗ್ರಾಂ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಸಮಸ್ಯೆಗಳಿವೆ ಮತ್ತು ಇನ್ಟಾಗ್ರಾಂನ ತಂಡವು ಇದನ್ನು ಪರಿಶೀಲಿಸುತ್ತಿದೆ ಎಂಬ ವಿಷಯವನ್ನು ಇನ್ಸ್ ಸ್ಟಾ ಗ್ರಾಮ್ ಸ್ವತಃ ಟ್ವಿಟರ್‌ನಲ್ಲಿ ದೃಢಪಡಿಸಿದೆ. ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ.
“ನಿಮ್ಮಲ್ಲಿ ಕೆಲವರು ನಿಮ್ಮ ಇನ್ಸ್ ಸ್ಟಾ ಗ್ರಾಮ್ ಖಾತೆಯನ್ನು ಪ್ರವೇಶಿಸಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ” ಎಂದು ಇನ್ಸ್ ಸ್ಟಾಗ್ರಾಮ್ ತನ್ನ ಸಂದೇಶದಲ್ಲಿ ಹೇಳಿಕೊಂಡಿದೆ.