ದೇರಳಕಟ್ಟೆ: ಗ್ರಾಮೀಣ ಪ್ರದೇಶದ ಬಡ ಜನರ ಸಮಸ್ಯೆ ಆಲಿಸಿದಾಗ ಹೊಸ ಯೋಜನೆಗೆ ಪ್ರೇರಣೆಯಾಗಿದ್ದು, ಟೀಕೆ ಟಿಪ್ಪಣಿಗಳಿದ್ದರೂ ಅದನ್ನು ಎದುರಿಸಿ ಮುಂದೆ ನಡೆಯುವುದೇ ನಮ್ಮ ಕರ್ತವ್ಯವಾಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ದೇರಳಕಟ್ಟೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ನೀಡಿ ಮಾತನಾಡಿದರು.
ರಾಜಕೀಯ ಜೀವನದಲ್ಲಿ ಕಷ್ಟ, ಪ್ರತಿಭಟನೆ, ಟೀಕೆ, ಸಮಸ್ಯೆ ಎಲ್ಲವನ್ನೂ ಎದುರಿಸಿ ನಮ್ಮ ವಿರುದ್ಧ ಯಾರು ಷಡ್ಯಂತ್ರ ರೂಪಿಸಿದರೂ ಅವರ ವಿರುದ್ಧ ಸೇಡಿಗೆ ಮುಂದಾಗದೆ ಮುಗುಳ್ನಕ್ಕು ಮುನ್ನಡೆಯುವ ತಾಳ್ಮೆ ಇದ್ದಲ್ಲಿ ಮಾತ್ರ ಜೀವನ ಯಶಸ್ಸಿನತ್ತ ಸಾಗುತ್ತದೆ. ತಾನೂ ಇಂತಹ ಎಲ್ಲ ಸಮಸ್ಯೆಗಳನ್ನು ಎದುರಿಸಿ ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಜನವರಿಯಲ್ಲಿ ಸ್ವಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್
ಕೂಲಿ ಕಾರ್ಮಿಕರು, ಬಡವರು, ದುಡಿಯುವ ಜನರ ಪರವಾಗಿ ಇಂದಿರಾ ಗಾಂಧಿ ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದರೆ, ಈಗಿನ ಕಾಂಗ್ರೆಸ್ ಸರಕಾರ ಇಂದಿರಾ ಕ್ಯಾಂಟೀನ್ ಮುಖಾಂತರ ಆಹಾರ ನೀಡುವ ಯೋಜನೆ ಜಾರಿಗೆ ತಂದಿದೆ. ಜನವರಿ ಮೊದಲ ವಾರದಿಂದ ಉಳ್ಳಾಲದ ವಿವಿಧೆಡೆ ಕ್ಯಾಂಟೀನ್ ಆರಂಭಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಶಶಿಪ್ರಭಾ ಶೆಟ್ಟಿ, ಪದ್ಮಾವತಿ ಪೂಜಾರಿ, ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಅಬ್ದುಲ್ ಜಬ್ಟಾರ್ ಬೋಳಿಯಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಶೆಟ್ಟಿ, ಅಲ್ಪ ಸಂಕ್ಯಾತ ಅಧ್ಯಕ್ಷ ಎನ್.ಎಸ್, ಕರೀಂ, ಉಳ್ಳಾಲ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಳ್ಳಾಲ ನಗರಸಭಾ ಅಧ್ಯಕ್ಷ ಇಸ್ಮಾಯಿಲ್ ಕುಂಞಿಮೋನು, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ರವೂಫ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟಿಗೋಳಿ, ಕೊಣಾಜೆ ಗ್ರಾ.ಪಂ.ಅಧ್ಯಕ್ಷ ಶೌಕತ್ ಅಲಿ, ಅಂಬ್ಲಿಮೊಗರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ರಫಿಕ್, ಬೆಳ್ಮ ಗ್ರಾ.ಪಂ.ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಕಿನ್ಯ ಗ್ರಾ.ಪಂ.ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಯೂಸುಫ್ ಬಾವಾ, ಅಬ್ದುಲ್ ಕಬೀರ್ ಡಿ., ಆಹಾರ ಜಾಗೃತ ನಿಗಮದ ನಿರ್ದೇಶಕ ಟಿ.ಎಸ್. ಅಬ್ದುಲ್ಲ, ಮೈಸೂರು ಬಾವಾ, ಸಮೀರ್ ಪಜೀರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆ ದೇವಕಿ ರಾಘವ ಉಪಸ್ಥಿತರಿದ್ದರು.
ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ದುಲ್ ಸತ್ತಾರ್ ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯ ತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ಎಂ.ಟಿ. ನಿಸಾರ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.