Advertisement

ಇನ್ಸ್‌ಸ್ಪೆಕ್ಟರ್‌ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರ ಪ್ರಶಂಸೆ

11:35 AM Mar 17, 2017 | |

ಬೆಂಗಳೂರು: ತಪಾಸಣೆ ವೇಳೆ ಮದ್ಯ ಸೇವಿಸಿದ ಶಾಲಾ ವಾಹನ ಚಾಲಕನನ್ನು ಬಂಧಿಸಿದ ಬಸವನಗುಡಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ವಿಜಯಕುಮಾರ್‌, ಬಳಿಕ ವಿದ್ಯಾರ್ಥಿಗಳನ್ನು ತಮ್ಮ ವಾಹನದಲ್ಲೇ ಶಾಲೆಗೆ ತಲುಪಿಸಿ ಸಾರ್ವಜನಿಕರು ಹಾಗೂ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಸವನಗುಡಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ವಿಜಯಕುಮಾರ್‌ ಮತ್ತು ಸಿಬ್ಬಂದಿ ಇಲ್ಲಿನ ರಾಮಕೃಷ್ಣ ಆಶ್ರಮ ಬಳಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಶ್ರೀರಾಮ ವಿದ್ಯಾಲಯ ಶಾಲಾ ವಾಹನ ಚಾಲಕ ಅಡ್ಡಾದಿಡ್ಡಿ ವಾಹನ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡ ಸಂಚಾರ ಪೊಲೀಸರು, ವಾಹನವನ್ನು ತಡೆದು ನಿಲ್ಲಿಸಿದ್ದಾರೆ.

ಬಳಿಕ ಆಲ್ಕೋಮೀಟರ್‌ ಮೂಲಕ ಚಾಲಕನನ್ನು ತಪಾಸಣೆಗೊಳಪಡಿಸಿದಾಗ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಕೂಡಲೇ ಆರೋಪಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಾಹನವನ್ನು ಜಪ್ತಿ ಮಾಡಿದ್ದರು. ಅಲ್ಲದೇ ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಶಾಲಾ ವಾಹನದಲ್ಲಿದ್ದ 6 ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದು ಇನ್‌ಸ್ಪೆಕ್ಟರ್‌ಗೆ ತಿಳಿದಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಡವಾಗುತ್ತದೆ ಎಂದು ತಿಳಿದ ವಿಜಯಕುಮಾರ್‌ ಎಲ್ಲ ವಿದ್ಯಾರ್ಥಿಗಳನ್ನು ತಮ್ಮ ವಾಹನದಲ್ಲೇ ಕೂರಿಸಿಕೊಂಡು ಜಯನಗರದಲ್ಲಿರುವ ಶಾಲೆಗೆ ತಲುಪಿಸಿದ್ದಾರೆ. ವಿಜಯಕುಮಾರ್‌ ಕರ್ತವ್ಯ ಪ್ರಜ್ಞೆಗೆ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಮೆಚುrಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next