Advertisement

ಎಡದಂಡೆ ನಾಲೆ ಕಾಮಗಾರಿ ಪರಿಶೀಲನೆ

04:38 PM Jul 08, 2020 | Suhan S |

ಕಾರಟಗಿ: ಸಮೀಪದ ಸೋಮನಾಳ ಬಳಿಯ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನಡೆಯುತ್ತಿರುವ ಲೈನಿಂಗ್‌ ಕಾಮಗಾರಿ ಸ್ಥಳಕ್ಕೆ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ಬಸವರಾಜ ದಢೇಸುಗೂರ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

Advertisement

ಈ ವೇಳೆ ಮಾತನಾಡಿದ ಸಂಸದ ಕರಡಿ ಸಂಗಣ್ಣ, 63 ಕೋಟಿ ರೂ. ವೆಚ್ಚದಲ್ಲಿ ಎಡದಂಡೆ ಲೈನಿಂಗ್‌ ಮತ್ತು ಕಾಲುವೆ ಅಧುನೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಕೊರೊನಾ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಕಾಮಗಾರಿಗೆ ಕಡಿಮೆ ಸಮಯವಿದ್ದರಿಂದ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ.

ಅಲ್ಲದೆ ರೈತರು ಭತ್ತ ನಾಟಿ ಕಾರ್ಯ ಆರಂಭದ ಹಂತದಲ್ಲಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ತೊಂದರೆಯಾಗದಂತೆ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಬೇಕು. ಅಲ್ಲದೆ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಹರಿಸುವ ಕಾರ್ಯವಾಗಬೇಕು. ಕಳೆದ ಬಾರಿಯಂತೆ ನೀರು ಹರಿಸುವುದು ವಿಳಂಬವಾಗಬಾರದು. ಕಾಲುವೆ ಅಧುನೀಕರಣಕ್ಕೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದದೇಸುಗೂರು ಹೆಚ್ಚಿನ ಶ್ರಮವಹಿಸಿ ಹಣ ತಂದಿದ್ದಾರೆ. ಇದರ ಜತೆಗೆ ಗಂಗಾವತಿ ಶಾಸಕರು ಕೂಡ ಪ್ರಯತ್ನಿಸಿದ್ದಾರೆ ಎಂದರು.

ನೀರಾವರಿ ಇಲಾಖೆಯ ಸೂಗಪ್ಪ, ರಮೇಶ ವಲ್ಯಾಪೂರ, ವಿರೂಪಾಕ್ಷಿ, ಮಂಜುನಾಥ, ಧನಂಜಯ ಹಾಗೂ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಪುರಸಭೆ ಸದಸ್ಯ ಜಿ. ತಿಮ್ಮನಗೌಡ, ಎಪಿಎಂಸಿ ಸದಸ್ಯ ನಾಗರಾಜ ಅರಳಿ, ಎಪಿಎಂಸಿ ಸದಸ್ಯ ಸಣ್ಣೆಪ್ಪ, ಪ್ರಮುಖರಾದ ನಾಗರಾಜ ಬಿಲ್ಗಾರ, ಹಿರೇಬಸಪ್ಪ ಸಜ್ಜನ, ಚನ್ನಬಸವ ಸುಂಕದ, ಶಿವಶರಣೆಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next