Advertisement

ಸೀಲ್‌ಡೌನ್‌ ಪ್ರದೇಶದ ಜನರ ಆರೋಗ್ಯ ತಪಾಸಣೆ

02:11 PM Apr 30, 2020 | Suhan S |

ಜಮಖಂಡಿ: ನಗರದ ಖಾಟಿಕ್‌ ಗಲ್ಲಿ ಸೀಲ್‌ ಡೌನ್‌ ಪ್ರದೇಶದಲ್ಲಿನ ಸೋಂಕಿತ ವ್ಯಕ್ತಿ ಕೋವಿಡ್‌ -456 ಜೊತೆಗೆ ಸಂಪರ್ಕ ಹೊಂದಿದ್ದ ಜನರ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕ್ಯಾಪ್ಟನ್‌ ರಾಜೇಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ಹೇಳಿದರು.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಗರದ ಖಾಟಿಕ್‌ ಗಲ್ಲಿಗೆ ಭೇಟಿ ನೀಡಿ ಸ್ವಚ್ಛತೆ, ಭದ್ರತೆ ವ್ಯವಸ್ಥೆ ಹೆಚ್ಚಿಸಲಾಗಿದೆ. ಕೋವಿಡ್‌ ವೈರಸ್‌ ಸೋಂಕಿತ ಕೋವಿಡ್‌-456 ಈತನ ಸಂಬಂಧಿಕರು, ಅಕ್ಕಪಕ್ಕದ ಜನರು, ಸ್ನೇಹಿತರು ಸಹಿತ ಅಂದಾಜು 186 ಜನರ ಗಂಟಲದ್ರವ ತೆಗೆದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಜಮಖಂಡಿ ನಗರದ 105 ಜನರನ್ನು ಕ್ವಾರಂಟೈನ್‌ ನಲ್ಲಿ ಇಡಲಾಗಿದ್ದು, ಖಾಟಿಕ್‌ಗಲ್ಲಿನ 750 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ ಎಂದರು.

ತಹಶೀಲ್ದಾರ್‌ ಎಸ್‌.ಬಿ.ಇಂಗಳೆ, ಡಿವೈಎಸ್ಪಿ ಆರ್‌.ಕೆ.ಪಾಟೀಲ, ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ವೈದ್ಯಾಧಿಕಾರಿ ಡಾ| ಗೈಬುಸಾಬ ಗಲಗಲಿ, ಠಾಣಾ ಧಿಕಾರಿಗಳಾದ ಬಸವರಾಜ ಅವಟಿ, ಗೋವಿಂದಗೌಡ ಪಾಟೀಲ, ಆರೋಗ್ಯ ಇಲಾಖೆ ಎಂ.ಎಚ್‌. ಕಡ್ಲಿಮಟ್ಟಿ, ಉಮೇಶ ಜೋಶಿ, ನಗರಸಭೆ ಅಭಿಯಂತರ ವಿಠಲ ಮಾಶ್ಯಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next