Advertisement

ತುಂಗಭದ್ರಾ ಪ್ರವಾಹದಿಂದ ಸಂಭವಿಸಿದ ಹಾನಿ ಪರಿಶೀಲನೆ

05:15 PM Aug 20, 2018 | Team Udayavani |

ಸಿದ್ದಾಪುರ: ತುಂಗಭದ್ರಾ ನದಿಯಿಂದ ಅಪಾರ ಪ್ರಮಾಣದ ನೀರು ನದಿಗೆ ಬಿಟ್ಟ ಪರಿಣಾಮ ನದಿ ನೀರಿನಿಂದ ಭತ್ತದ ಗದ್ದೆ ಮತ್ತು ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸಿದ ಸಿದ್ದಾಪುರ ಹೋಬಳಿ ವ್ಯಾಪ್ತಿಯ ಜಮಾಪುರ, ಉಳೇನೂರು, ಬೆನ್ನೂರು, ಶ್ಯಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ರವಿವಾರ ಕನಕಗಿರಿ ಶಾಸಕ ದಢೇಸೂಗುರು ಬಸವರಾಜ ಭೇಟಿ ನೀಡಿ ಪರಿಶೀಲಿಸಿದರು.

Advertisement

ನದಿದಂಡೆಯ ಜಮೀನುಗಳ ಹತ್ತಿರ ಕಾರು ಹೊಗದ ಹಿನ್ನೆಲೆಯಲ್ಲಿ ಶಾಸಕ ದಢೇಸುಗೂರು ಬಸವರಾಜ ಅವರು ಬೈಕ್‌ (ದ್ವಿಚಕ್ರ) ವಾಹನ ಮೂಲಕ ರೈತರ ಜಮೀನುಗಳಿಗೆ ಭೇಟಿ ನೀಡಿ. ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಪಂಪ್‌ ಸೆಟ್‌ಗಳು ಮತ್ತು ಹಾಳಾದ ಭತ್ತದ ಗದ್ದೆ ಪರಿಶೀಲಿಸಿ ನಷ್ಟ ಹೊಂದಿದ ರೈತರಿಂದ ಮಾಹಿತಿ ಪಡೆದುಕೊಂಡು ಆದಷ್ಟು ಬೇಗನೆ ಸರಕಾರದಿಂದ ಅಗತ್ಯ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.

ಸ್ಥಳದಲ್ಲಿದ್ದ ಗಂಗಾವತಿ ತಹಶೀಲ್ದಾರ್‌ ವೀರೇಶ ಅವರಿಗೆ ರೈತರ ಬೆಳೆ ಹಾನಿಯ ಕುರಿತು ಶೀಘ್ರದಲ್ಲೇ ಸರ್ವೇ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಶಾಸಕರು ಸೂಚಿಸಿದರು. ಇದೆ ವೇಳೆ ನೀರಿನ ರಭಸಕ್ಕೆ ಕೊಚ್ಚಿಹೊದ ವಿದ್ಯುತ್‌ ಕಂಬಗಳು ಮತ್ತು ಟ್ರಾನ್ಸ್‌ಪಾರ್ಮ್ಗಳಿಗೆ ನೀರು ನುಗ್ಗಿ ಹಾಳಾಗಿವೆ. ಅವುಗಳನ್ನೂ ಕೂಡಲೇ ಸರಿಪಡಿಸುವಂತೆ ದೂರವಾಣಿ ಮೂಲಕ ಕೆಇಬಿ ಅಧಿ ಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಗಂಗಾವತಿ ಎಪಿಎಂಸಿ ಅಧ್ಯಕ್ಷ ದುರ್ಗಾರಾವ್‌, ಬಿ. ಕಾಶಿವಿಶ್ವನಾಥ, ಕೆ.ಎನ್‌. ಪಾಟೀಲ, ಮಾಜಿ ತಾಪಂ ಉಪಾಧ್ಯಕ್ಷ ಶರಣಪ್ಪ ಸಾಹುಕಾರ, ಚಂದ್ರಶೇಖರ ಬೆನ್ನೂರು, ಶಿವಪುತ್ರಯ್ಯಸ್ವಾಮಿ, ಮಲ್ಲನಗೌಡ ಹೊಸಮನಿ, ಚಂದ್ರಶೇಖರ ಪಾಟೀಲ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next