ಮದ್ದೂರು: ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸದ ವೇಳೆ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಉನ್ನತೀಕರಣ ಕಾಮಗಾರಿಗಳ ಸಂಬಂಧ ಪರಿಶೀಲಿಸಿದ್ದೇವೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ವಲಯದ ವಿವಿಧ ಕಾರ್ಖಾನೆಗಳಿಗೆ ಭೇಟಿನೀಡಿ, ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆಚರ್ಚಿಸಿದರು. ಈ ವೇಳೆ ಮಾತನಾಡಿ,ರಾಜ್ಯದ ಗಾರ್ಮೆಂಟ್ಸ್‌ಗಳ ನೌಕರರ ಹಿತ ಕಾಪಾಡುವ ಜತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಕುರಿತಾಗಿ ಕಾರ್ಖಾನೆ ಮತ್ತು ಕೈಗಾರಿಕಾ ಇಲಾಖೆಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಅಗತ್ಯಸೌಲಭ್ಯಗಳ ಕುರಿತಾಗಿ ಸಿಬ್ಬಂದಿ ನೀಡಿರುವಮನವಿಯನ್ನು ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದರು.
ಜನರ ಹಿತ ಕಾಪಾಡುವ ಭರವಸೆ: ಸಚಿವಕೆ.ಸಿ.ನಾರಾಯಣಗೌಡ ಮಾತನಾಡಿ, ಪಾಂಡವಪುರ ಸಕ್ಕರೆ ಕಾರ್ಖಾನೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಈಗಾಗಲೇ ಚಾಲನೆಗೊಳಿಸಿದ್ದು, ಮೈಷುಗರ್ ಆರಂಭದ ವಿಚಾರದಲ್ಲಿ ಸ್ಥಳೀಯರ ಪ್ರತಿರೋಧದ ಹಿನ್ನೆಲೆಯಲ್ಲಿ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಕೈಗಾರಿಕೆಗಳೂ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ಬಜೆಟ್‌ನಲ್ಲಿಅನುದಾನ ಪ್ರಕಟಿಸುವ ನಿರೀಕ್ಷೆಯಿದೆ. ಈ ಕುರಿತು ಸಿಎಂ ಜಿಲ್ಲೆಯ ಜನರ ಹಿತ ಕಾಪಾಡುವ ಭರವಸೆ ಇದೆ ಎಂದರು.
ಸಚಿವರ ಭೇಟಿ ವೇಳೆ ಗೆಜ್ಜಲಗೆರೆ ಕೈಗಾರಿಕಾ ವಲಯದಲ್ಲಿ ಸಾವಿರಾರು ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿರುವ ಸಾಯಿ ಸಿದ್ಧ ಉಡುಪು ಕಾರ್ಖಾನೆ ಆಡಳಿತ ಮಂಡಳಿ, ಮಾಧ್ಯಮ,ಸ್ಥಳೀಯ ಮುಖಂಡರನ್ನು ಸಚಿವರ ಸಮ್ಮುಖದಲ್ಲೇ ಹೊರಗಿಡುವ ಹುನ್ನಾರಕ್ಕೆ ಮುಂದಾದವೇಳೆ ವೃತ್ತ ನಿರೀಕ್ಷಕ ಕೆ.ಆರ್. ಪ್ರಸಾದ್ ಮಧ್ಯಪ್ರವೇಶಿಸಿ, ಕಾರ್ಖಾನೆ ಒಳ ಆವರಣ ಪ್ರವೇಶಿಸಲು ಅನುವು ಮಾಡಿಕೊಟ್ಟರು.
ಅನುದಾನ ಬಿಡುಗಡೆಗೆ ಮನವಿ: ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ರನ್ನು ಶಾಸಕ ಡಿ.ಸಿ. ತಮ್ಮಣ್ಣ ಅಭಿನಂದಿಸಿ,ಗೆಜ್ಜಲಗೆರೆ, ಸೋಮನಹಳ್ಳಿ ಕೈಗಾರಿಕಾ ಪ್ರದೇಶ ಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಹಾಗೂ ಇನ್ನಿತರೆಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವಂತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿದರು.
ಶಾಸಕ ಅಪ್ಪಾಜೀಗೌಡ, ಜಿಲ್ಲಾಧಿಕಾರಿ ಡಾ.ಅಶ್ವಥಿ, ಮಂಡ್ಯ ಉಪವಿಭಾಗಾಧಿಕಾರಿಶಿವಾನಂದಮೂರ್ತಿ, ತಹಶೀಲ್ದಾರ್ ವಿಜಯಕುಮಾರ್, ಕೆಐಡಿಬಿಎಲ್ ಅಧಿಕಾರಿ ಶಿವಲಿಂಗಯ್ಯ, ಎಪಿಎಂಸಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷ ಹರೀಶ್, ಬಿಜೆಪಿಜಿಲ್ಲಾಧ್ಯಕ್ಷ ವಿಜಯಕುಮಾರ್, ತಾಲೂಕು ಘಟಕದ ಅಧ್ಯಕ್ಷ ಪಣ್ಣೇದೊಡ್ಡಿ ರಘು ಹಾಗೂ ಪದಾಧಿಕಾರಿಗಳು ಹಾಜರಿದ್ದರು.