Advertisement
ನಂದಿಕೂರ ಗ್ರಾಪಂ ಸದಸ್ಯ ಪವನಕುಮಾರ ವಳಕೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಘನತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿ ರಸ್ತೆ ಕಿರಿದಾಗಿದ್ದು, ವಾಹನ ಸಂಚಾರ ದಟ್ಟವಾಗಿದೆ. ಇದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಿದರು. ಘನತ್ಯಾಜ್ಯ ಘಟಕದಿಂದ ಗ್ರಾಮಸ್ಥರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ತ್ಯಾಜ್ಯ ಸಂಗ್ರಹಿಸುವ ಸ್ಥಳ ಮತ್ತು ಸೀತನೂರ, ನಂದಿಕೂರ, ಪಾಣೆಗಾಂವ ಗ್ರಾಮಗಳ ಸುತ್ತಮುತ್ತಸಾಂಕ್ರಾಮಿಕ ರೋಗಹರಡದಂತೆ ಔಷಧಿ ಸಿಂಪಡಿಸಬೇಕು. ಗ್ರಾಮದ ಮಲ್ಲಿಕಾರ್ಜುನ ಮೂಲಗೆ ಅವರ ಜಮೀನಿಗೆ ಬೆಂಕಿ ಕಿಡಿ ಬಿದ್ದು ಲಕ್ಷಂತಾರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದು, ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶರಣಬಸಪ್ಪ ಡಿ.ಮೂಲಗೆ, ಮುಖಂಡರಾದ ಶಿವರಾಜ ಪೊಲೀಸ್ ಪಾಟೀಲ, ಜಗದೇವಿ ಕುಮಾರ, ಶಾಂತಾ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಮಾಲಿಪಾಟೀಲ, ಹಣಮಂತ ಚವ್ಹಾಣ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.