ನ್ನಗಿರಿ: ಖಾಲಿಯಿರುವ ಪ್ರಧಾನ ಸಿವಿಲ್ ನ್ಯಾಯಾಧೀಶರನ್ನು ನೇಮಕಗೊಳಿಸಬೇಕು. ಅಲ್ಲಿಯವರೆಗೆ ನ್ಯಾಯಲಯಗಳ ಕಾರ್ಯ
ಕಲಾಪಗಳಿಂದ ಹೊರಗುಳಿಯುವಂತೆ ಪ್ರತಿಭಟಿಸಲಾಗುವುದು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ವೈ.ಎಂ.
ರಾಮಚಂದ್ರರಾವ್ ತಿಳಿಸಿದರು.
ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಸಿವಿಲ್ ನ್ಯಾಯಾಧೀಶರು ವರ್ಗಾವಣೆಯಾಗಿ ಒಂದು ವರ್ಷ ಏಳು ತಿಂಗಳು ಕಳೆದಿದೆ. ಆದರೂ ಇಲ್ಲಿಯವರೆಗೂ ಯಾರೋಬ್ಬ ನ್ಯಾಯಾಧೀಶರನ್ನು ಕೂಡ ನೇಮಕ ಮಾಡಿಲ್ಲ. ಇದರಿಂದ ದೂರದ ದಾವಣಗೆರೆ ನ್ಯಾಯಾಲಯಗಳ ಕಲಾಪಗಳಿಗೆ ಹೋಗಿ ಬರಲು ವಕೀಲರು ಮತ್ತು ಕಕ್ಷಿಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ವರ್ಗಾವಣೆಯಾಗಿರುವ ಸ್ಥಾನಕ್ಕೆ ತಕ್ಷಣ ನ್ಯಾಯಾಧೀಶರನ್ನು ನೇಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಲು ಮುಂದಗಾಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಜಿಲ್ಲಾ ನ್ಯಾಯಾಧಿಶರು, ಜಿಲ್ಲಾ ಆಡಳಿತ ನ್ಯಾಯಾಧೀಶರು ಹಾಗೂ ಉಚ್ಚ-ನ್ಯಾಯಲಯದ ಮುಖ್ಯ ನ್ಯಾಯಾಧೀಶರಿಗೆ ಕಳೆದ ಒಂದೂವರೆ ವರ್ಷಗಳಿಂದಲೂ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಲಾಗಿದೆ. ಯಾರು ಕೂಡ ನ್ಯಾಯಾಧೀಶರ ನೇಮಕ ಮಾಡದ ಹಿನ್ನೆಲೆ ಸಾಕಷ್ಟು ಸಿವಿಲ್ ಪ್ರಕರಣಗಳು ನನೆಗುದ್ದಿಗೆ ಬಿದ್ದಿವೆ. ಇದರಿಂದ ಕಾಕ್ಷಿದಾರರು ಪರದಾಡುವಂತಾಗಿದೆ. ಸಂಘದ ಎಲ್ಲಾ ಸದಸ್ಯರು ಸಭೆಯ ಮೂಲಕ ಚರ್ಚಿಸಿದ್ದು, ಪ್ರಧಾನ ಸಿವಿಲ್ ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವ ತನಕ ನ್ಯಾಯಲಯಗಳ ಕಲಾಪಕ್ಕೆ ಹಾಜರಾಗಬಾರದು ಎಂದು ತಿರ್ಮಾನಿಸಲಾಗಿದೆ ಹಾಗೂ ನ್ಯಾಯಾಶರನ್ನು ನೇಮಕ ಮಾಡುವವರೆಗೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಜಿ.ಎಸ್. ರುದ್ರಪ್ಪ, ಮಲ್ಲಿಕಾರ್ಜುನ್, ದಾನ್ಯಕುಮಾರ್, ವೈ.ಡಿ. ಸುರೇಶ್, ಎಚ್. ಮೋಹನ್, ಡಿ.ಆರ್. ಜಗದೀಶ್, ಬಸವರಾಜಪ್ಪ, ಲಿಂಗಮೂರ್ತಿ, ರಾಜಪ್ಪ ಇದ್ದರು.