Advertisement

ಸರ್‌ ಎಂವಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಒತ್ತಾಯ

11:47 AM Sep 19, 2017 | |

ಕೆಂಗೇರಿ: ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಕುರಿತ ಸಮಗ್ರ ಅಧ್ಯಯನಕ್ಕೆ ಪ್ರತ್ಯೇಕ ಅಧ್ಯಯನ ಕೇಂದ್ರ ಸ್ಥಾಪಿಸಿ ಮುಂದಿನ ಪೀಳಿಗೆಗೆ ಅವರ ವಿಚಾರಧಾರೆ ಕೊಂಡೊಯ್ಯುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಮಾಜಿ ಜಂಟಿ ನಿರ್ದೇಶಕ ಡಾ.ಕೆ.ಎನ್‌.ವೆಂಕಟಕೃಷ್ಣರಾವ್‌ ಒತ್ತಾಯಿಸಿದರು.

Advertisement

ಮೈಸೂರು ಬೆಂಗಳೂರು ಮುಖ್ಯರಸ್ತೆಯ ಕುಂಬಳಗೋಡು ಡಾನ್‌ ಬಾಸ್ಕೋ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶಿಕ್ಷಕರ ಹಾಗೂ ಇಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್‌ ಎಂ.ವಿ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಹಾಗೂ ಚಿಂತನೆಯ ಫ‌ಲವಾಗಿ ರಾಜ್ಯದಲ್ಲಿ ಶಿಕ್ಷಣ, ವಿದ್ಯುತ್‌, ಕೃಷಿ, ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳ ಪ್ರಗತಿ ಸಾಧ್ಯವಾಗಿದೆ ಎಂದರು.

ಉತ್ತಮ ಸಾಧನೆ ತೋರಿದ ಉಪನ್ಯಾಸಕರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಡಾನ್‌ ಬಾಸ್ಕೋ ತಾಂತ್ರಿಕ ಮಹಾ ವಿದ್ಯಾಲಯದ ನಿರ್ದೇಶಕ ಡಾ.ಆರ್‌.ಕೃಷ್ಣ, ಪ್ರಾಂಶುಪಾಲ ಡಾ.ಎಂ.ಮುರಳಿಧರ ರಾವ್‌, ಉಪನ್ಯಾಸಕಾರಾದ ಡಾ.ಆರ್‌.ಪ್ರಕಾಶ್‌, ಶರ್ಮಿಳಾ ಆರ್‌.ಎಸ್‌, ನಂದಿನಿ ಸುಧೀರ್‌, ರಫೀಕ್‌ ಅಹಮದ್‌, ರೂಪಾ ಬಿ.ಎಸ್‌. ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next