Advertisement

ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ

05:55 PM Apr 20, 2022 | Team Udayavani |

ಕುರುಗೋಡು: ಭತ್ತ ಖರೀದಿ ಕೇಂದ್ರ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ರೈತರು ಎಪಿಎಂಸಿ ಮುಂದುಗಡೆಯಿಂದ ಮುಖ್ಯ ವೃತ್ತದವರೆಗೆ ಬಂಡಿ, ಟ್ರ್ಯಾಕ್ಟರ್‌ ಮೂಲಕ ಆಗಮಿಸಿ ಮುಖ್ಯ ವೃತ್ತದಲ್ಲಿ ರಸ್ತೆಗೆ ಭತ್ತ ಸುರಿದು ಪ್ರತಿಭಟಿಸಿದರು.

Advertisement

ರಾಜ್ಯ ಸಮಿತಿ ಅಧ್ಯಕ್ಷರಾದ ಶರಣಪ್ಪ ಹಾಗೂ ಉಪಾಧ್ಯಕ್ಷ ಅಮರೇಶ ಮಾತನಾಡಿ, ರಾಜ್ಯ ಸರ್ಕಾರವು ಬೆಲೆ ನಿಗದಿ ಮಾಡುವಂತೆ ನಾವುಗಳು ಕೂಡಾ ಬೆಲೆ ನಿಗದಿ ಕಾರ್ಯ ಮಾಡುತ್ತೇವೆ. ಬ್ಯಾಂಕ್‌ ಕೊಟ್ಟ ಸಾಲಕ್ಕೆ ಬೆಳೆದ ಬೆಳೆಯನ್ನು ಬ್ಯಾಂಕ್‌ ಮುಂದೆ ಹಾಕುವ ಕೆಲಸ ಮಾಡುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಕೃಷಿ ವಿಜ್ಞಾನಿಗಳಿದ್ದು, ಈ ತಿಂಗಳಲ್ಲಿ ಬಿತ್ತನೆ ಮಾಡಬೇಕು, ಈ ಔಷ ಧಿಯನ್ನು ಸಿಂಪಡಿಸಬೇಕೆಂದು ಹೇಳುತ್ತಾರೆ ಹೊರತು ಯಾವುದೇ ರೀತಿಯಿಂದ ರೈತರಿಗೆ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಯಾವೊಬ್ಬ ರೈತರು ಕೃಷಿ ವಿಜ್ಞಾನಿಗಳನ್ನು ನೋಡಿಲ್ಲ. ವಿಜ್ಞಾನಿಗಳು ಸಂಬಳ ತೆಗೆದುಕೊಂಡು ರೈತರಿಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಎಸಿ ರೂಂನಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಸಮಿತಿ ಅಧ್ಯಕ್ಷ ಕೆ. ಕಲ್ಗುಡೆಪ್ಪ ಮಾತನಾಡಿ, ಕುರುಗೋಡಿನಲ್ಲಿ ಆದಷ್ಟು ಬೇಗನೆ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕೆಂದರು.

ಪ್ರತಿಭಟನೆಯಲ್ಲಿ ನವಕರ್ನಾಟಕ ಯುವಶಕ್ತಿಯ ವಿರುಪಾಕ್ಷಿ, ನಾರಾಯಣಿ ಯಡಿಗಿರಿ, ಕುರುಗೋಡಿನ ಮುಖಂಡ ಚಾನಾಳ್‌ ಅಮರೇಶ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ರಾಮಚಂದ್ರ, ಹನುಮಂತಪ್ಪ ನಾಯಕ, ತಾಲೂಕು ಸಮಿತಿ ಉಪ ಗೌರವಾಧ್ಯಕ್ಷರಾದ ಪಿ.ಮರಿಬಸಪ್ಪ, ಉಪಾಧ್ಯಕ್ಷ ಎಸ್‌. ಗುರು, ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್‌ ಗೌಡ, ಸಹಕಾರ್ಯದರ್ಶಿ ಎ. ಕರಿಬಸಪ್ಪ, ಖಜಾಂಚಿ ಎಂ. ಗಾದಿಲಿಂಗಪ್ಪ, ಕುರುಗೋಡು ತಾಲೂಕು ಯುವ ಘಟಕದ ಅಧ್ಯಕ್ಷ ಎಚ್‌. ಬಸವರಾಜ, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎಸ್‌.ದೇವೇಂದ್ರಪ್ಪ, ವದ್ದಟ್ಟಿ ಗ್ರಾಮ ಘಟಕದ ಅಧ್ಯಕ್ಷ ಎಂ. ರಾಜಶೇಖರ, ಉಪಾಧ್ಯಕ್ಷರಾದ ಜಿ.ನಾಗರಾಜ, ಬಾದನಹಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಕುಮಾರಗೌಡ, ಉಪಾಧ್ಯಕ್ಷರಾದ ಚಿದಾನಂದ, ಕಾರ್ಯದರ್ಶಿ ಜೀರು ಮಲ್ಲಪ್ಪ, ಸಹಕಾರ್ಯದರ್ಶಿ ನಾಯಕರ ರುದ್ರಪ್ಪ, ಸದಸ್ಯರಾದ ಎಸ್‌.ಬಸವ, ಎ. ಚಿದಾನಂದ, ಗೂಳ್ಯದ ಶಿವರಾಜ, ವಿಘ್ನೇಶ್ವರ, ಸೋಮೇಶ, ಹೂಗಾರ್‌ ತಿಮ್ಮಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next