Advertisement

ಮೀಸಲಾತಿ ಜಾರಿಗೊಳಿಸಲು ಒತ್ತಾಯ

07:53 PM Nov 01, 2020 | Suhan S |

ಅಜ್ಜಂಪುರ: “ರಾಮಾಯಣ’ ಗ್ರಂಥ ಸಾಹಿತ್ಯದ ಮೂಲಕ ರಾಮ ರಾಜ್ಯದ, ಸುಖೀ ರಾಜ್ಯದ ಪರಿಕಲ್ಪನೆಯನ್ನು ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಶಂಭೈನೂರು ಆನಂದಪ್ಪ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಾಲ್ಮೀಕಿ ಸಮಾಜ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿದೆ. ಜನಸಂಖ್ಯೆಯಲ್ಲಿ ಹೆಚ್ಚಿರುವ ಸಮಾಜದ ಸದೃಢತೆಗೆ ಅರ್ಹವಾಗಿ ದಕ್ಕಬೇಕಿರುವ ಶೇ 7.5 ಮೀಸಲಾತಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ಸಮಾಜ ಮುಖಂಡ ಚಿಕ್ಕನಾವಂಗಲ ಬಸವರಾಜು ಒತ್ತಾಯಿಸಿದರು.

ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷ ಕೆ.ಕೃಷ್ಣಪ್ಪ, ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ತಾಲೂಕು ಆಡಳಿತ ಲಘುವಾಗಿ ಪರಿಗಣಿಸಿದೆ. ತಹಶೀಲ್ದಾರ್‌ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇದನ್ನು ವಾಲ್ಮೀಕಿ ಸಮಾಜ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪತಹಶೀಲ್ದಾರ್‌ ರೇಣುಕಮ್ಮ, ಶಿರಸ್ತೇದಾರ ರಾಜೇಂದ್ರ, ಸಮಾಜಕಲ್ಯಾಣ ಇಲಾಖೆಯ ಯೋಗೀಶ್‌, ಗೋಪಾಲ್‌, ವಾಲ್ಮೀಕಿ ಸಮಾಜ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ್‌, ಮುಖಂಡ ಅಣ್ಣಪ್ಪ ಮತ್ತಿತರರಿದ್ದರು.

Advertisement

ಮಹನೀಯರ ಜೀವನ ದಾರಿದೀಪವಾಗಲಿ :

ಚಿಕ್ಕಮಗಳೂರು: ಗಣ್ಯರ, ಮಹನೀಯರ ಜಯಂತ್ಯೋತ್ಸವ ಸಮಾಜದ ಪರಿವರ್ತನೆಗೆ ದಾರಿದೀಪವಾಗಬೇಕೆಂದು ವಿಧಾನ ಪರಿಷತ್‌ ಉಪಸಭಾಪತಿ ಎಸ್‌. ಎಲ್‌. ಧರ್ಮೇಗೌಡ ಹೇಳಿದರು.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹನೀಯರ ಜಯಂತಿ ಆಚರಣೆ, ಮೌಲ್ಯ-ಸಿದ್ಧಾಂತಗಳು ಸಮಾಜದ ಪರಿವರ್ತನೆಗೆ ದಾರಿದೀಪವಾಗುವಮೂಲಕ ಯುವಪೀಳಿಗೆಯಲ್ಲಿಬದಲಾವಣೆ ತರುವಂತಾಗಬೇಕು ಎಂದರು.

ಇದೇ ವೇಳೆ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರ ಜಯಂತಿಯ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರು ಏಕತಾ ಪ್ರತಿಜ್ಞಾ ವಿದಿ ಬೋಧಿಸಿದರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಪಂ ಉಪಾಧ್ಯಕ್ಷ ಸೋಮಶೇಖರ್‌, ತಾಪಂ ಅಧ್ಯಕ್ಷೆ ಶಾರದಾ ಶಶಿಧರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌, ತಾಪಂ

ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್‌, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ಎಸ್‌. ಪೂವಿತಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ, ತಾಪಂ ಸಿಇಒ ಎಚ್‌.ಡಿ. ರೇವಣ್ಣ, ಐ.ಟಿ.ಡಿ.ಪಿ. ಹಟ್ಯಪ್ಪ, ಭೀಮಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next