Advertisement

ಸೌಲಭ್ಯ ಕಲ್ಪಿಸಲು ಒತ್ತಾಯ

03:53 PM Aug 31, 2017 | Team Udayavani |

ಲಿಂಗಸುಗೂರು: ಸ್ಥಳೀಯ 7ನೇ ವಾರ್ಡಿನ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಅಗತ್ಯ ಸೌಲಭ್ಯ ಇಲ್ಲದೇ ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಕೂಡಲೇ ಸಮಸ್ಯೆ ಪರಿಹಾರ ಮಾಡುವಂತೆ ಆಗ್ರಹಿಸಿ ನಿವಾಸಿಗಳು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜನತಾ ಕಾಲೋನಿಯಲ್ಲಿ ಕಳೆದ ಹಲವು ದಶಕಗಳಿಂದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ತಗ್ಗು ಗುಂಡಿಗಳು ನಿರ್ಮಾಣಗೊಂಡು ಕಲುಷಿತ ನೀರು ನಿಂತು ರೋಗಗಳ ಭೀತಿ ಎದುರಾಗಿದೆ. ಅಲ್ಲದೆ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿ ಮಕ್ಕಳು, ವಯೋವೃದ್ಧರು, ಮಹಿಳೆಯರು ಸಂಚರಿಸಲು ತೊಂದರೆ ಎದುರಿಸಬೇಕಾಗುತ್ತದೆ.
ಕಾಲೋನಿಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಮಹಿಳೆಯರಿಗೆ ತೊಂದರೆಯಾಗಿದೆ. ಕಾಲೋನಿಯಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ಕತ್ತಲಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ವಿಷಜಂತುಗಳ ಆತಂಕದಲ್ಲಿ ತಿರುಗಾಡುವ ಪರಿಸ್ಥಿತಿ ಬಂದಿದೆ. ಹಲವು ಬಾರಿ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷಿಸಲಾಗಿದೆ. ರಸ್ತೆ, ಚರಂಡಿ, ಶೌಚಾಲಯ, ಬೀದಿದೀಪ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಮುಂದಾದರೆ ಮಾತ್ರ ಕಚೇರಿಯಿಂದ
ತೆರಳುತ್ತೇವೆಂದು ನಿವಾಸಿಗಳು ಪಟ್ಟು ಹಿಡಿದರು.

ನಿವಾಸಿಗಳಾದ ಪಾರ್ವತೆಮ್ಮ, ತಿಮ್ಮಣ್ಣ, ವೀರಭದ್ರ, ಹಂಪಮ್ಮ, ನೇಹಾ, ಬಸವರಾಜ, ಶರಣಬಸಪ್ಪ, ಲಕ್ಷ್ಮೀಬಾಯಿ, ಮಹಾಂತೇಶ, ಶಿವರಾಜ, ರೇಣುಕಾ, ಶಮೀಮಬಾನು, ಇಮಾಮಸಾಬ, ಹಂಪಮ್ಮ, ಬಸಮ್ಮ, ಸುನಂದಾ, ಅಂಬಿಕಾ, ಜಯಶ್ರೀ, ಚಾಂದಬೀ, ಶೈಲಾ, ರಜಿಯಾ, ನಿರ್ಮಲಾ,
ದೇವಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next