Advertisement

INS ಅರಿಘಾತ್‌;ಭಾರತದ 2ನೇ ಪರಮಾಣು ಸಬ್‌ಮರೀನ್‌ ನಿಯೋಜನೆ:ವಿಶೇಷತೆಗಳೇನು?

12:25 AM Aug 30, 2024 | Team Udayavani |

ಹೊಸದಿಲ್ಲಿ: ಭಾರತದ 2ನೇ ಅಣ್ವಸ್ತ್ರ ಸಜ್ಜಿತ ಐಎನ್‌ಎಸ್‌ ಅರಿಘಾತ್‌ ಜಲಾಂತರ್ಗಾಮಿಯನ್ನು ಗುರುವಾರ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಿಯೋ ಜಿಸಲಾಯಿತು. ಐಎನ್‌ಎಸ್‌ ಅರಿಹಂತ ವರ್ಗಕ್ಕೆ ಸೇರಿರುವ ಜಲಾಂತರ್ಗಾ ಮಿಯು ಭಾರತದ ಮೂರೂ ಸೇನೆಗಳ ಪರಮಾಣು ಬಲವನ್ನು ಹೆಚ್ಚಿಸಲಿದೆ.

Advertisement

ಐಎನ್‌ಎಸ್‌ ಅರಿಘಾತ್‌ ಸಂಭಾವ್ಯ ಅಣುದಾಳಿ ತಡೆಯುವಿಕೆ, ಕಾರ್ಯತಂ ತ್ರದ ಸಮತೋಲನ ಮತ್ತು ಪ್ರಾದೇಶಿಕ ಶಾಂತಿಸ್ಥಾಪನೆ ಹಾಗೂ ದೇಶದ ಭದ್ರತೆ ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ರಕ್ಷಣ ಇಲಾಖೆ ಹೇಳಿದೆ.
ನಿಯೋಜನೆ ಸಮಾರಂಭದಲ್ಲಿ ಪಾಲ್ಗೊಂಡ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಆತ್ಮನಿರ್ಭರ ಭಾರತ ಹಾಗೂ ರಾಷ್ಟ್ರದ ಸಾಧನೆಯಲ್ಲಿ ಇದೊಂದು ಮೈಲುಗಲ್ಲು ಎಂದು ಬಣ್ಣಿಸಿದರು.

ವಿಶೇಷತೆಗಳು
ಅರಿಘಾತ್‌, ಐಎನ್‌ಎಸ್‌ ಅರಿಹಂತ ಕ್ಕಿಂತಲೂ ಅತ್ಯಾಧುನಿಕ ಜಲಾಂತ ರ್ಗಾಮಿ. ಇದು ಭಾರತೀಯ ವಿಜ್ಞಾನಿಗಳು, ಉದ್ಯಮ ಮತ್ತು ನೌಕಾ ಸಿಬಂದಿ ಪರಿಕಲ್ಪನೆಯ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ದೇಶಿ ವ್ಯವಸ್ಥೆಗಳು ಮತ್ತು ಉಪಕರ ಣಗಳನ್ನು ಹೊಂದಿರುವುದು ವಿಶೇಷ. ಸುರಕ್ಷತೆಯಲ್ಲಿ ಇದು ಮಹತ್ವದ ಸ್ಥಾನ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next