Advertisement

ಸಂಚಾರ ನಿಯಮ ತಪ್ಪಿದರೆ ಜೋಕೆ

06:15 PM Mar 03, 2021 | Team Udayavani |

ಹುಬ್ಬಳ್ಳಿ: ದ್ವಿಚಕ್ರ ವಾಹನದ ಮೂಲಕ ದೇಶಾದ್ಯಂತ ಸಂಚರಿಸುವ 99 ಕೆನಾನ್ಸ್‌ ಮೋಟರ್‌ ಸೈಕಲ್‌ ಕ್ಲಬ್‌ ಸದಸ್ಯರು ಸದ್ದಿಲ್ಲದೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಕಾಲೇಜು ವಿದ್ಯಾರ್ಥಿಗಳು, ಅವರ ಪಾಲಕರು, ಉಪನ್ಯಾಸಕರು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದನ್ನು ಅವರಿಗೆ ತಿಳಿಯದಂತೆ ಚಿತ್ರೀಕರಿಸಿ ಅವರ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ರಸ್ತೆ ನಿಯಮ ಉಲ್ಲಂಘನೆ ಮಾಡುವರನ್ನು ಗುರುತಿಸಿ ಅವರಿಗೆ ಜೀವದ ಮೌಲ್ಯ, ಆ ಜೀವದಕಾಳಜಿ ಹೊಂದಿರುವ ಜೀವಗಳ ಕುರಿತು ಮನಮುಟ್ಟುವಂತೆ ತಿಳಿಸುವ ಕೆಲಸಕ್ಕೆ 99 ಕೆನಾನ್ಸ್‌ ಕ್ಲಬ್‌ ತಂಡಮುಂದಾಗಿದೆ. ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದನ್ನುಪತ್ತೆ ಹಚ್ಚಿ, ಅವರ ಕಾಲೇಜಿಗೆ ತೆರಳಿ ಎಲ್ಲರ ಮುಂದೆಯೇಅವರು ಮಾಡಿರುವ ತಪ್ಪು, ಪಾಲನೆ ಮಾಡಬೇಕಾದನಿಯಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆಮುಂದಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಪಾಲಕರು, ಆ ಕಾಲೇಜಿನ ಉಪನ್ಯಾಸಕರೂ ಹೊರತಾಗಿಲ್ಲ.

ಗೌಪ್ಯವಾಗಿ ಸಾಕ್ಷೀಕರಣ!: ನಿಯಮ ಉಲ್ಲಂಘನೆ ಆಗುತ್ತಿರುವ ಕಾಲೇಜುಗಳನ್ನು ಗುರುತಿಸಿ ಕಾಲೇಜಿನಮುಖ್ಯಸ್ಥರೊಂದಿಗೆ ಮಾತ್ರ ಚರ್ಚಿಸಿ ಸಂಚಾರನಿಯಮ ಉಲ್ಲಂಘನೆ ಮಾಡುತ್ತಿರುವ ವಿಷಯತಿಳಿಸುತ್ತಾರೆ. ಕಾಲೇಜು ಆರಂಭವಾಗುವ ಸಮಯದಲ್ಲಿಕ್ಲಬ್‌ ಸದಸ್ಯರು ನಿಯಮ ಉಲ್ಲಂಘಿಸುವ, ಪಾಲನೆಮಾಡುವುದನ್ನು ಗೌಪ್ಯವಾಗಿ ಸಂಪೂರ್ಣ ಚಿತ್ರೀಕರಣಮಾಡುತ್ತಾರೆ. ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆಮಾಹಿತಿ ನೀಡದೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಚಿತ್ರೀಕರಣ ಮಾಡಿದ ವಿಡಿಯೋವನ್ನು ಎಲ್ಲರ ಸಮ್ಮುಖದಲ್ಲಿ ತೋರಿಸುವ ಕೆಲಸ ಆಗುತ್ತದೆ.

ಬೋಧಕರೂ ತಪ್ಪುದಾರಿಯಲಿ :

ಇತ್ತೀಚೆಗೆ ವಿದ್ಯಾನಗರದಲ್ಲಿರುವ ದೊಡ್ಡ ಕಾಲೇಜೊಂದರ ವಿದ್ಯಾರ್ಥಿಗಳು ಸಂಚಾರ ನಿಯಮ ಉಲ್ಲಂಘನೆಮಾಡುತ್ತಿರುವ ಚಿತ್ರೀಕರಣ ಮಾಡಲಾಗಿದೆ. ರಾಂಗ್‌ಸೈಡ್‌ ಸಂಚಾರ, ಹೆಲ್ಮೆಟ್‌ ರಹಿತ ಚಾಲನೆ, ತ್ರಿಬಲ್‌ ರೈಡ್‌,ಕಾಲೇಜಿನಿಂದ ರಸ್ತೆಗೆ ದಿಢೀರ್‌ ನುಗ್ಗುವಂತಹ ಘಟನೆಗಳು ಸೆರೆ ಸಿಕ್ಕಿವೆ. ಉಪನ್ಯಾಸಕರು ಸಹ ರಾಂಗ್‌ ಸೈಡ್‌ನ‌ಲ್ಲಿ ಬರುವುದು, ಹೆಲ್ಮೆಟ್‌ ಧರಿಸದಿರುವುದು, ಹೆಲ್ಮೆಟ್‌ ಇದ್ದರೂಟ್ಯಾಂಕ್‌ ಮೇಲೆ ಇಟ್ಟುಕೊಂಡು ಬರುವುದು ಪೊಲೀಸರುಕಂಡರೆ ಮಾತ್ರ ಧರಿಸುವ ಪ್ರವೃತ್ತಿಗಳು ಸೆರೆಸಿಕ್ಕಿವೆ.ವಿದ್ಯಾರ್ಥಿಗಳ ಪಾಲಕರೂ ರಾಂಗ್‌ ಸೈಡಿನಲ್ಲಿ ಬರುವುದು, ತ್ರಿಬಲ್‌ ಚಾಲನೆಯಂತಹ ಘಟನೆಗಳ ಚಿತ್ರೀಕರಣವಾಗಿದೆ

Advertisement

ಜೀವದ ಮೌಲ್ಯ ಪಾಠ :

ಸಂಚಾರಿ ನಿಯಮ ಉಲ್ಲಂಘನೆಯಿಂದ ಆಗುವ ಅವಘಡಗಳ ಬಗ್ಗೆ ತಿಳಿಸಲಾಗುತ್ತದೆ. ಪ್ರತಿಯೊಬ್ಬರಿಗೆಮನಮುಟ್ಟುವಂತೆ ಸಂಪನ್ಮೂಲ ವ್ಯಕ್ತಿಗಳಿಂದ ಜೀವದ ಮೌಲ್ಯ, ಸಂಚಾರಿ ನಿಯಮಗಳ ಪಾಲನೆ ಮಾಡುವಕುರಿತು ಜಾಗೃತಿ ಮೂಡಿಸಲಾಗುತ್ತದೆ. ಇನ್ನೂ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆ, ಉಪನ್ಯಾಸಕರಪಾತ್ರದ ಬಗ್ಗೆ ಅರಿವು ಹಾಗೂ ಕಾನೂನಾತ್ಮಕವಾಗಿ ರಸ್ತೆ ಸುರಕ್ಷತಾ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯದ ಬಗ್ಗೆ ತಿಳಿಸುವ ಕಾರ್ಯ ಆಗುತ್ತದೆ.

99 ಕೆನಾನ್ಸ್‌ ಕ್ಲಬ್‌ ಸದಸ್ಯರು ಸಂಚಾರ ನಿಯಮಗಳ ಪಾಲನೆ ಕುರಿತು ವಿನೂತನ ಕಾರ್ಯಕ್ರಮ ಕೈಗೊಂಡಿದ್ದಾರೆ. ಸಂಚಾರನಿಯಮ ಪಾಲನೆ, ಚಾಲನಾ ಪ್ರಮಾಣಪತ್ರ, ಅಗತ್ಯ ದಾಖಲೆಗಳನ್ನು ಹೊಂದಿರುವ ಕುರಿತುಪರಿಶೀಲಿಸುವ ಕಾರ್ಯ ಕಾಲೇಜುಗಳಿಂದ ಆಗಬೇಕು. ಇದು ಅವರ ಹೊಣೆಗಾರಿಕೆ ಕೂಡ.ಇಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಕಾಲೇಜಿನ ಮುಖ್ಯಸ್ಥರಿಗೆ ತಿಳಿಸಲಾಗುತ್ತಿದೆ. –ಅಪ್ಪಯ್ಯ ನಾಲತ್ವಾಡಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ ಪೂರ್ವ

ರಸ್ತೆ ಅಪಘಾತದಲ್ಲಿ ಮೃತ ಹಾಗೂ ಗಾಯಗೊಂಡವರ ಕುಟುಂಬದ ಸದಸ್ಯರ ನೋವು ಕಣ್ಣಾರೆ ಕಂಡಿದ್ದೇನೆ.ಸಂಚಾರ ನಿಯಮಗಳ ಉಲ್ಲಂಘನೆಯಿಂದಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳನ್ನುಗುರಿಯಾಗಿಸಿಕೊಂಡು ಕ್ಲಬ್‌ ಸದಸ್ಯರುಕೂಡಿಕೊಂಡು ಈ ಕಾರ್ಯಕ್ಕೆ ಮುಂದಾಗಿದ್ದೇವೆ.ಉತ್ತಮ ಸ್ಪಂದನೆ ವ್ಯಕ್ತವಾಗಿದೆ.  –ಸಂಜೀವ ಭಾಟಿಯಾ, 99 ಕೆನಾನ್ಸ್‌ ಕ್ಲಬ್‌

ನಗೆ ಜತೆ ಗಂಭೀರತೆ :

ಚಿತ್ರೀಕರಿಸಿದ ದೃಶ್ಯಗಳನ್ನು ನೋಡುವಾಗ ಹಲವರಿಗೆನಗುವಿನ ವಿಷಯ ಎನ್ನಿಸಿದರೆನಿಯಮ ಉಲ್ಲಂಘಿಸಿದವರಿಗೆಮುಜುಗರದ ಸಂಗತಿ. ಉಲ್ಲಂಘಿ ಸಿದವರಿಂದ ಮುಂದೆ ಇಂತಹತಪ್ಪು ಮಾಡುವುದಿಲ್ಲ ಎಂದುಪ್ರಮಾಣ ಮಾಡಿಸಲಾಗುತ್ತಿದೆ.ಇನ್ನೂ ನಿಯಮಗಳನ್ನು ಪಾಲನೆ ಮಾಡಿದವರನ್ನು ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಚಾಲನಾಪರವಾನಗಿ ಸೇರಿದಂತೆ ಸಮರ್ಪಕದಾಖಲೆಗಳನ್ನು ಹೊಂದಿದ ವಿದ್ಯಾರ್ಥಿ ಯನ್ನಷ್ಟೇ ಕಾಲೇಜಿನಆವರಣಕ್ಕೆ ದ್ವಿಚಕ್ರ ವಾಹನ ತರಲುಅನುಮತಿ ಕಡ್ಡಾಯಗೊಳಿಸುವುದು,ಕಾಲಕಾಲಕ್ಕೆ ಕಾಲೇಜಿನಲ್ಲಿ ದಾಖಲೆ ಪರಿಶೀಲಿಸುವುದು ಸೇರಿದಂತೆಇತರೆ ನಿಯಮಗಳನ್ನು ಕಾಲೇಜಿನಮುಖ್ಯಸ್ಥರು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next