Advertisement

ರಾಜ್ಯದಲ್ಲಿ ಇನ್ನೊವೇಟಿವ್‌ ಅಥಾರಿಟಿ: ಡಾ|ಅಶ್ವತ್ಥನಾರಾಯಣ

12:27 AM Nov 01, 2019 | Team Udayavani |

ಮಂಗಳೂರು: ಅನುಶೋಧನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಅನುಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇನ್ನೊವೇಟಿವ್‌ ಅಥಾರಿಟಿ ಆರಂಭಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಡಾ| ಅಶ್ವತ್ಥನಾರಾಯಣ ಹೇಳಿದರು.

Advertisement

ಗುರುವಾರ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲೇ ಮೊತ್ತಮೊದಲ ಅನುಶೋಧನೆ ಪ್ರಾಧಿಕಾರ ಇದಾಗಿದೆ ಎಂದರು.

ರಾಜ್ಯ ಐಎಂಎ ಅಧ್ಯಕ್ಷ ಡಾ| ಮಧುಸೂದನ ಕರಿಗನೂರು ಅಧ್ಯಕ್ಷತೆ ವಹಿಸಿದ್ದರು. ಐಎಂಎ ನೂತನ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್‌ ಮುಂದಿನ ಕಾರ್ಯಯೋಜನೆಯ ರೂಪುರೇಷೆ ವಿವರಿಸಿದರು. ಡಾ| ಭಾಸ್ಕರ ಶೆಟ್ಟಿಯವರು ಐಎಂಎಯ ಬೇಡಿಕೆಗಳನ್ನು ಮಂಡಿಸಿದರು. ಡಾ| ಎ.ಜೆ. ಶೆಟ್ಟಿ, ಮಣಿಪಾಲ ಡಾ| ಎಚ್‌.ಎಸ್‌. ಬಲ್ಲಾಳ್‌, ಡಾ| ಸತೀಶ್‌ ಭಂಡಾರಿ, ಡಾ| ಕೆ.ವಿ. ಚಿದಾನಂದ, ಡಾ| ರಘುವೀರ, ಡಾ| ಯು.ಕೆ. ಮೋನು, ಡಾ| ವೆಂಕಟಾಚಲಪತಿ ವಿಶೇಷ ಅತಿಥಿಗಳಾಗಿದ್ದರು.

ಡಾ| ರಶ್ಮಿ ಕುಂದಾಪುರ, ಡಾ| ಜಿ.ಕೆ. ಭಟ್‌ ಸಂಕಬಿತ್ತಿಲು, ಡಾ| ಸುಧೀಂದ್ರ ರಾವ್‌, ವಿನಯ ಕುಮಾರ್‌ ಉಪಸ್ಥಿತರಿದ್ದರು. ಡಾ| ಬಿ. ಸಚ್ಚಿದಾನಂದ ರೈ ಸ್ವಾಗತಿಸಿದರು. ಡಾ| ಕೆ.ವಿ. ದೇವಾಡಿಗ ಐಎಂಎ ಇತಿಹಾಸ ಪರಿಚಯಿಸಿದರು.

ಐಸ್‌ಕ್ರೀಂ ಸವಿದ ಡಿಸಿಎಂ
ಸಚಿವರು ಗುರುವಾರ ಸಂಜೆ ನಗರದ ಐಡಿಯಲ್‌ ಐಸ್‌ಕ್ರೀಂ ಪಾರ್ಲರ್‌ಗೆ ತೆರಳಿ ಐಸ್‌ಕ್ರೀಂ ಸವಿದು ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಶಾಸಕರಾದ ರಾಜೇಶ್‌ ನಾೖಕ್‌, ಡಾ| ಭರತ್‌ ಶೆಟ್ಟಿ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಜತೆಯಾಗಿದ್ದರು. ಸುದ್ದಿಗಾರರ ಜತೆ ಮಾತನಾಡಿದ ಸಚಿವರು, 1988ರಿಂದ 1994ರ ವರೆಗೆ ಕೆಎಂಸಿ ವಿದ್ಯಾರ್ಥಿಯಾಗಿದ್ದಾಗ ಇಲ್ಲಿಗೆ ಬಂದು ಐಸ್‌ಕ್ರೀಂ ಸವಿಯುತ್ತಿದ್ದೆ. ಬಳಿಕ ರಾಜಕಾರಣದಲ್ಲಿ ಸಕ್ರಿಯನಾದರೂ ಇಲ್ಲಿನ ನೆನಪು ಮಾಸಿಲ್ಲ ಎಂದರು.

Advertisement

ವೈದ್ಯಕೀಯ ಶಿಕ್ಷಣ ಮತ್ತು ವೈದ್ಯ ವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಾಶಿ ಎನಿಸಿದೆ. ನಾನು ಜೀವನದ ತಿರುವು, ವ್ಯಕ್ತಿತ್ವ, ಗೌರವ ಪಡೆದುಕೊಂಡದ್ದು ಮಂಗಳೂರಿನಿಂದ. ಮಂಗಳೂರಿಗೆ ಬರುವುದೆಂದರೆ ನನಗೆ ಆನಂದ ವಿಚಾರ ಎಂದು ಡಾ| ಅಶ್ವತ್ಥನಾರಾಯಣ ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next