Advertisement

ಕಾಯಿ ಅಡಿಕೆಯನ್ನು ’ಮಾರಲು ಸಿದ್ಧ’ವಾಗಿಸಿ ಕೊಡುವ ಉಕ ಸೊಸೈಟಿ

07:28 PM Feb 19, 2022 | Team Udayavani |

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಳಗೋಳ ಗ್ರೂಪ್ ಗ್ರಾಮಗಳ ಸಹಕಾರಿ ಸಂಘ ( ಭೈರುಂಬೆ) ತನ್ನ ’ತೋಟಕಾಶಿ ರೈತೋತ್ಪಾದಕ ಕಂಪೆನಿಯ ಮೂಲಕ ಈ ವರ್ಷ ಮೊದಲ ಬಾರಿಗೆ ವಿನೂತನ, ಕೃಷಿಕಪರ ಸೇವೆ ಆರಂಭಿಸಿ ಗಮನ ಸೆಳೆದಿದೆ.

Advertisement

ಸೇವೆ ಬೇಕಾದ ಸದಸ್ಯರ ಮನೆಯಿಂದ ಒಟ್ಟು 35 ಟನ್ ಕಾಯಿ ಅಡಿಕೆ ತಂದು, ಸುಲಿದು ಬೇಯಿಸಿ ಅವರ ಮನೆ ಬಾಗಿಲಿಗೇ ಪ್ರಾಮಾಣಿಕವಾಗಿ ತಲುಪಿಸಿ ಕೊಟ್ಟಿದ್ದಾರೆ. ನೀಡಗೋಡ, ಬೊಮ್ನಳ್ಳಿ, ಹುಳಗೋಳಗಳಲ್ಲಿ ತಲಾ ಹತ್ತು ಕಾರ್ಮಿಕರ ಮೂಲಕ ಅಡಿಕೆ ಸುಲಿಸಿ ಬೇಯಿಸಿ ಒಣಗಿಸಿ ಕೊಟ್ಟಿದ್ದಾರೆ. ಆಯಾ ಕೃಷಿಕರು, ಬೇಕಿದ್ದರೆ ಇದನ್ನು ನೇರ ಮಾರಬಹುದಾಗಿದೆ.

ಈ ಸೇವೆಗೆ ತೋಟಕಾಶಿ ಕ್ವಿಂಟಾಲ್ ಅಡಿಕೆಗೆ 4,500 ಶುಲ್ಕ ವಿಧಿಸಿದೆ. ಮಾನವಶಕ್ತಿಯಿಂದ ಅಡಿಕೆ ಸುಲಿದದ್ದಕ್ಕೆ ಕಿಲೋಗೆ 12 – 13 ರೂ ತಗಲಿದೆ. ನಮ್ಮ ಸೇವಾ ಶುಲ್ಕದಲ್ಲಿ ಇದುವೇ ಗಣನೀಯ ಖರ್ಚಿನ ಘಟಕ ಆಗಿದ್ದು, ಸುಲಿತದ ಯಾಂತ್ರೀಕರಣದತ್ತ ಚಿಂತಿಸುತ್ತಿದ್ದೇವೆ ಎನ್ನುತ್ತಾರೆ  ಸಂಸ್ಥೆಯ ಪದಾಧಿಕಾರಿಗಳು. ಇದೊಂದು‌ ಮಾದರಿ ಪ್ರಯೋಗ ಆಗಿದೆ ಎಂದು ಹಿರಿಯ ಪತ್ರಕರ್ತ ಶ್ರೀ ಪಡ್ರೆ  ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next