Advertisement
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿ ಇಎಂ) ವತಿಯಿಂದ ಶನಿವಾರ ನಡೆದ ಮಂಗಳೂರು ಟೆಕ್ನೋವಾಂಜಾದ ದ್ವಿತೀಯ ದಿನದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಿಯೋನಿಕ್ಸ್ ನೇತೃತ್ವದಲ್ಲಿ 2 ಲಕ್ಷ ಚದರ ಅಡಿ ವಿಸ್ತಾರದ ಮಂಗಳೂರು ಇನ್ನೋವೇಶನ್ ಹಬ್ ಸ್ಥಾಪಿಸಲಾಗುವುದು. ಇಲ್ಲಿನ ನವೋದ್ಯಮಿಗಳ ನೆರವಿಗಾಗಿ ಮಂಗಳೂರು ಜತೆಗೆ ಮಂಗಳೂರು ಔದ್ಯಮಿಕ ಕ್ಲಸ್ಟರ್‌ಗೆ 25 ಕೋ.ರೂ.ಗಳ ಕ್ಲಸ್ಟರ್ ನಿಧಿ ಸ್ಥಾಪಿಸಲಾಗಿದೆ ಎಂದರು.
ದ.ಕ. ಭಾಗವು ಮೊದಲಿನಿಂದಲೂ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಹೆಸರಾಗಿದೆ. ಅದಕ್ಕೆ ಪೂರಕವಾದ ಕಾರ್ಯ ಪರಿಸರ ಇಲ್ಲಿದೆ. ಇದನ್ನು ಗಮನ ದಲ್ಲಿರಿಸಿಕೊಂಡು ಮಂಗಳೂರು ವಲಯವನ್ನು ಫಿನ್‌ಟೆಕ್ ಹಬ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು, ಮಂಗಳೂರು ಕ್ಲಸ್ಟರ್‌ನಲ್ಲಿ 50 ಫಿನ್‌ಟೆಕ್ ಕಂಪೆನಿಗಳನ್ನು ಸ್ಥಾಪಿಸಬೇಕು ಎನ್ನುವುದು ಸರಕಾರದ ಗುರಿ ಆಗಿದೆ. ಈ ಮೂಲಕ 2025ರ ವೇಳೆಗೆ ರಾಜ್ಯದ 500 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿಯಲ್ಲಿ ಅರ್ಧದಷ್ಟು ಕೊಡುಗೆ ಈ ಭಾಗದ ಉದ್ದಿಮೆಗಳಿಂದಲೇ ಬರುವಂತೆ ಆಗಬೇಕು ಎಂದು ವಿವರಿಸಿದರು.
Related Articles
Advertisement
ಭಾರತದ “ಸಿಲಿಕಾನ್ ಬೀಚ್’ಬೆಂಗಳೂರು ನಗರವು ದೇಶದ ಸಿಲಿಕಾನ್ ವ್ಯಾಲಿ ಎಂದು ಹೆಸರಾ ಗಿರುವಂತೆ ಮಂಗಳೂರು ನಗರವು ದೇಶದ “ಸಿಲಿಕಾನ್ ಬೀಚ್’ ಎಂದು ಹೆಸರಾಗ ಬೇಕು, ಈ ಮೂಲಕ ಪ್ರವಾ ಸೋದ್ಯಮ ಹಾಗೂ ಐಟಿ ಉದ್ದಿಮೆ ಗಳನ್ನು ಆಕರ್ಷಿಸು ವಂತಾ ಗಲಿ ಎಂದೂ ಹಾರೈಸಿದರು. ಇದೇ ಸಂದರ್ಭ ಸರಕಾರವು ವಿವಿಧ ಕಂಪೆನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿತು. ಫಿನ್‌ಟೆಕ್ ಕಾರ್ಯ ಪಡೆಯು ಸಿದ್ಧಪಡಿಸಿರುವ ವರದಿ ಯನ್ನು ಸರಕಾರಕ್ಕೆ ಹಸ್ತಾಂತರಿಸ ಲಾಯಿತು.
ಸಂಸದ ನಳಿನ್ ಕುಮಾರ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಐಟಿ-ಬಿಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಮೋಹನ್‌ದಾಸ್ ಪೈ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ರಾಜ್ಯ ಸರಕಾರದ ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಐಟಿ ನಿರ್ದೇಶಕ ಡಾ| ಶಿವಶಂಕರ್, ಬ್ರಿಟಿಷ್ ಹೈಕಮಿಷನರ್ ಕೆ.ಟಿ. ರಾಜನ್, ಕಿಂಡ್ರಿಲ್ ಇಂಡಿಯಾದ ಅಧ್ಯಕ್ಷ ಲಿಂಗರಾಜು ಸೌಕಾರ್, ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತ ಹಾಜರಿದ್ದರು. ನೊವಿಗೊ ಸೊಲ್ಯೂಷನ್ಸ್ ಸ್ಥಾಪಕ ಪ್ರವೀಣ್ ಕಲಾºವಿ ಅವರು ಸ್ವಾಗತಿಸಿದರು.