Advertisement

ಈಶ ಫೌಂಡೇಷನ್‌ನಿಂದ ಇನ್ನರ್‌ ಇಂಜಿನಿಯರಿಂಗ್‌

03:15 PM Apr 11, 2021 | Team Udayavani |

ಚಾಮರಾಜನಗರ: ಸದ್ಗುರು ಜಗ್ಗಿ ವಾಸುದೇವ್‌ ಅವರ ಈಶ ಫೌಂಡೇಷನ್‌ನಿಂದ ಇನ್ನರ್‌ಇಂಜಿನಿಯರಿಂಗ್‌ ಎಂಬ 7 ದಿನದ ತರಬೇತಿಯನ್ನುಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಾರಂಭ ಮಾಡಲಿದ್ದು, ಪ್ರಪ್ರಥಮವಾಗಿ ನಗರದಲ್ಲಿ ಆಯೋಜಿಸಲಾಗಿದೆ.

Advertisement

ಇನ್ನರ್‌ ಎಂಜಿನಿಯರಿಂಗ್‌-ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿರುವ ಈಶಫೌಂಡೇಷನ್ನಿನ ಪ್ರಮುಖ ಕಾರ್ಯಕ್ರಮವಾಗಿದ್ದು,ಪ್ರಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಏ.14ರಿಂದ ಏಪ್ರಿಲ್‌ 20 ರವರೆಗೆ ನಡೆಸಲಾಗುತ್ತಿದೆ. ಶಾಂಭವಿ ಮಹಾಮುದ್ರ ಕ್ರಿಯೆಯನ್ನು ಒಳಗೊಂಡಿರುವ ಈ ಕಾರ್ಯಕ್ರಮವನ್ನು ತರಬೇತಿ ಪಡೆದ ಈಶ ಶಿಕ್ಷಕರು ಸಂಪೂರ್ಣವಾಗಿ ಕನ್ನಡದಲ್ಲಿನಡೆಸಲಿದ್ದಾರೆ. ಶಾಂಭವಿ ಮಹಾಮುದ್ರ ಕ್ರಿಯೆಯು ಪುರಾತನ ಮತ್ತು ಶಕ್ತಿಯುತ ಯೋಗವಿಧಾನವಾಗಿದ್ದು, ಇದು ವರ್ಧಿತ ಶಕ್ತಿ ಮಟ್ಟ, ಹೆಚ್ಚಿನಭಾವಾನಾತ್ಮಕ ಸಂತುಲನೆ ಮತ್ತು ಆರೋಗ್ಯದಸುಧಾರಣೆಯಿಂದ ಅಂತರಂಗದ ಯೋಗಕ್ಷೇಮವನ್ನುಉತ್ತೇಜಿಸುತ್ತದೆ. 15 ವರ್ಷ ಹಾಗೂ ಹೆಚ್ಚಿನ ವಯಸ್ಸಿನಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬಹುದು ಎಂದು ಈಶ ಫೌಂಡೇಶನ್‌ನ ಸ್ವಯಂ ಸೇವಕ ವೃಷಭ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶರೀರ, ಮನಸ್ಸು ಮತ್ತು ಪ್ರಾಣಶಕ್ತಿಯನ್ನುಸಂತುಲನಗೊಳಿಸಿ, ಅವುಗಳು ಸಾಮರಸ್ಯದಿಂದ ಕಾರ್ಯಗೈಯುವಂತೆ ಮಾಡಲು ಈಶ ಫೌಂಡೇಷನ್ನಿನಸಂಸ್ಥಾಪಕ ಸದ್ಗುರು ಈ ಇನ್ನರ್‌ ಎಂಜಿನಿಯರಿಂಗ್‌ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನುಜಗತ್ತಿನಾದ್ಯಂತ ಲಕ್ಷಾಂತರ ಈಶ ಸಾಧಕರುಅಭ್ಯಾಸಿಸುವರು. ದೈನಂದಿನ ಅಭ್ಯಾಸದಿಂದ ದೊರಕುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿಗೆ ಅನೇಕ ಸಾಧಕರು ಪುಷ್ಟಿ ನೀಡಿದಾರೆ ಎಂದರು.

7 ದಿನದ ಕಾರ್ಯಕ್ರಮವನ್ನು ನಗರದಶಂಕರಪುರದಲ್ಲಿರುವ ಸೇವಾಭಾರತಿ ಕಾಲೇಜುಕ್ಯಾಂಪಸ್‌ನಲ್ಲಿ ಬೆಳಗ್ಗೆ 6 ರಿಂದ 9 ರವರೆಗೆ, ಸಂಜೆ 6ರಿಂದ 9 ರವರೆಗೆ ನಡೆಸಲಾಗುವುದು. ಭಾಗವಹಿಸಲು ಇಚ್ಛಿಸುವವರು ಮೊಬೈಲ್‌ ಸಂಖ್ಯೆ 9886627666ಹಾಗೂ 9739376108 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಸ್ವಯಂ ಸೇವಕ ನಕುಲ್‌ ಇತರರಿದ್ದರು

ಅಂತರಂಗದ ಯೋಗಕ್ಷೇಮ :

Advertisement

ಯೋಗ ಶಿಕ್ಷಕ ಮನು ಮಾತನಾಡಿ, ಇನ್ನರ್‌ಎಂಜಿನಿಯರಿಂಗ್‌ ಯೋಗದ ಪುರಾತನ ವಿಜ್ಞಾನದಿಂದಪಡೆದ ವಿಧಾನವಾಗಿದ್ದು, ಅಂತರಂಗದಯೋಗಕ್ಷೇಮಕ್ಕಾಗಿ ನಮ್ಮನ್ನು ನಾವು ಎಂಜಿನಿಯರ್‌ ಮಾಡಿಕೊಳ್ಳುವ ಸಾಧನಗಳನ್ನು ನೀಡುತ್ತದೆ. ಇದುಜೀವನದ ಎಲ್ಲ ಆಯಾಮಗಳಿಗೆ ಒಳಗಿನ ಅಡಿಪಾಯಮತ್ತು ಮುಂಗಾಣೆRಯನ್ನು (ವಿಷನ್‌) ಸ್ಥಾಪಿಸಲುಸಹಾಯ ಮಾಡುತ್ತದೆ. ಇಂದು ಎಲ್ಲರೂ ಒತ್ತಡದಜೀವನದಲ್ಲಿದ್ದೇವೆ. ಈ ಒತ್ತಡವನ್ನು ನಿವಾರಿಸಿಕೊಂಡುಜೀವನದಲ್ಲಿ ಶಾಂತಿ, ಪರಮಾನಂದ ಪಡೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next