Advertisement
ಮನಪಾದ ಕಸ ವಿಂಗಡಣೆ ಹಾಗೂ ನಗರ ಸುಂದರೀಕರಣ ಕ್ಷೇತ್ರದಲ್ಲಿ ಮಾಹಿತಿ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿತ್ತು. ಇದೀಗ ತಂಡವು ಮತದಾನ ಜಾಗೃತಿಗಾಗಿ ‘ನಿಮ್ಮ ಬೆರಳಿಗೆ ಶಾಯಿ’ ಶೀರ್ಷಿಕೆಯಡಿ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದೆ. ತಂಡವು ಬುಧವಾರ ಮಂಗಳೂರು ವಿವಿ ಕಾಲೇಜಿಗೆ ಭೇಟಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯವನ್ನು ಮಾಡಿದೆ.
ಜಾಗೃತಿ ಕಾರ್ಯದ ಹಿನ್ನೆಲೆಯಲ್ಲಿ ಎ. 6ರಂದು ನಗರದ ಮನಪಾ ಕಚೇರಿಯ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರ ಮೊಬೈಲ್ ಟಾರ್ಚ್ ಮೂಲಕ ಜಾಗೃತಿ ಕಾರ್ಯ ನಡೆಯಲಿದ್ದು, ಅದು ಎಲ್ಲಿ ನಡೆಯುತ್ತದೆ ಮತ್ತು ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮುಂದಿನ ಹಂತದಲ್ಲಿ ಬ್ಯಾಕಥಾನ್ (ಹಿಮ್ಮುಖವಾಗಿ ನಡೆದು ಕೊಂಡು ಹೋಗುವುದು) ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುವುದು.
Related Articles
Advertisement
ಎಪಿಡಿಯ ನಿಮ್ಮ ಬೆರಳಿಗೆ ಶಾಯಿ ಕಾರ್ಯಕ್ರಮವು ಹೇಗೆ ಮತದಾನ ಮಾಡಬೇಕು, ಮತಗಟ್ಟೆಗಳ ಅವಧಿ, ಅವುಗಳು ಇರುವ ಸ್ಥಳ ಇತ್ಯಾದಿ ವಿಷಯಗಳ ಕುರಿತು ಮತದಾರರನ್ನು ಸುಶಿಕ್ಷಿತರನ್ನಾಗಿಸಲಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರಿಕರ ಪವಿತ್ರ ಕರ್ತವ್ಯ ಎಂಬ ಸಂವೇದನೆಯನ್ನು ಮೂಡಿಸಲಿದೆ. ಸಾಮಾಜಿಕ ಜಾಲತಾಣಗಳಲ್ಲೂ ಮತದಾನ ಜಾಗೃತಿ ಕಾರ್ಯ ಆಯೋಜನೆಗೊಂಡಿದೆ.
ಸರಣಿ ಕಾರ್ಯಕ್ರಮಸಾರ್ವಜನಿಕ ಶಿಕ್ಷಣ ಹಾಗೂ ಸಮುದಾಯದ ಭಾಗವಹಿಸುವಿಕೆ ಎಂಬ ಉದ್ದೇಶದಿಂದ ಒಂದು ತಿಂಗಳ ಕಾಲ ಸರಣಿ ಕಾರ್ಯಕ್ರಮ ಆಯೋಜನೆಗೊಂಡಿದೆ. ವಸತಿ ಪ್ರದೇಶಗಳು, ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳು, ಮಾಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಆವ ರಣಗಳು, ಸರಕಾರಿ ಕಚೇರಿಗಳು, ಸಭಾಂಗಣಗಳು, ಮದುವೆ ಛತ್ರಗಳು, ಉದ್ಯಾನವನಗಳು, ಕಡಲ ಕಿನಾರೆಗಳು ಮತ್ತು ಇತರ ಮನೋರಂಜನ ತಾಣಗಳು ಇತ್ಯಾದಿ ಪ್ರದೇಶಗಳಲ್ಲಿ ಜಾಗೃತಿ ಕಾರ್ಯ ನಡೆಯಲಿದೆ. ಚಟುವಟಿಕೆ ಆರಂಭ
ಮಂಗಳೂರಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮತ ಚಲಾವಣೆಯ ಜಾಗೃತಿ ಕಾರ್ಯ ನಡೆಯಲಿದೆ. ಈಗಾಗಲೇ ಬೆಂಗಳೂರಿನಿಂದ 15 ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಆಗಮಿಸಲಿದ್ದು, ಈಗಾಗಲೇ ಕಾರ್ಯ ಚಟುವಟಿಕೆ ಆರಂಭಗೊಂಡಿದೆ. ಮಾನವ ಸರಪಳಿ, ಮೊಬೈಲ್ ಟಾರ್ಚ್ ನಂತಹ ವಿಭಿನ್ನ ಕಾರ್ಯಗಳ ಮೂಲಕ ಜಾಗೃತಿ ಕಾರ್ಯ ನಡೆಯಲಿದೆ.
– ಅಬ್ದುಲ್ಲಾ ರೆಹ್ಮಾನ್,
ಸ್ಥಾಪಕರು, ಎಪಿಡಿ ಫೌಂಡೇಶನ್