Advertisement
ಯೋಜನೆ ವಿಳಂಬಕ್ಕೂ ಕಾರಣವಾಗುತ್ತಿದೆ. ನಿರ್ಣಾಯಕ ಹುದ್ದೆಗಳಲ್ಲಿ ಇರುವವರ ಪೈಕಿ ಶೇ. 60ಕ್ಕೂ ಹೆಚ್ಚು ಮಂದಿಗೆ ಮೆಟ್ರೋ ವ್ಯವಸ್ಥೆ ಹೊಸದು. ದೆಹಲಿ, ಮುಂಬೈ, ಕೊಲ್ಕತ್ತ ಮೆಟ್ರೋಗಳಲ್ಲಿ ಕಾರ್ಯನಿರ್ವಹಿಸಿದವರು ಸೇರಿದಂತೆ “ನಮ್ಮ ಮೆಟ್ರೋ’ ಆರಂಭದಿಂದ ಸೇವೆಗೆ ಮುಕ್ತಗೊಳಿಸುವವರೆಗೂ ಇದ್ದವರನ್ನು ಬದಿಗೊತ್ತಿ, ಅನನುಭವಿಗಳಿಗೆ ಮಣೆಹಾಕಲಾಗಿದೆ.
Related Articles
Advertisement
2ನೇ ಹಂತದಿಂದ ಹಳೇ ಗುತ್ತಿಗೆದಾರರು ದೂರ: ಮೊದಲ ಹಂತದಲ್ಲಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಾರೂ ಎರಡನೇ ಹಂತದಲ್ಲಿ ಭಾಗವಹಿಸಿಲ್ಲ (ತುಮಕೂರು ರಸ್ತೆ ವಿಸ್ತರಿಸಿದ ಮಾರ್ಗ ಮತ್ತು ಬನ್ನೇರುಘಟ್ಟ ರಸ್ತೆ ಒಂದು ಪ್ಯಾಕೇಜ್ ಹೊರತುಪಡಿಸಿ). 2012ರ ನಂತರ ಸಾಕಷ್ಟು ಬಾರಿ ನಕ್ಷೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಎರಡನೇ ಹಂತದಲ್ಲಿ ವಿಳಂಬವಾಯಿತು. ಇದರ ತೊಂದರೆ ಸಾರ್ವಜನಿಕರಿಗಾಯಿತು.
ಇನ್ನು ಮತ್ತೂಂದೆಡೆ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಮೇಲ್ಪಟ್ಟವರೆಲ್ಲರೂ ನಿರ್ಣಾಯಕ ಪಾತ್ರ ವಹಿಸುವವರಾಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಸಂಪೂರ್ಣ ಅಟೋಮೆಟಿಕ್ ಆಗಿರುವ ಮೆಟ್ರೋ ನಿರ್ವಹಣೆ ಕಬ್ಬಿಣದ ಕಡಲೆ. ಆದ್ದರಿಂದ ತಳಮಟ್ಟದ ಸಿಬ್ಬಂದಿ ನೀಡುವ ಮಾಹಿತಿಯನ್ನೇ ಕಣ್ಮುಚ್ಚಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಾಂತ್ರಿಕ ದೋಷಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲಾಗಿದ್ದಾರೆ.
ಅಧಿಕಾರಶಾಹಿಗಿಂತ ತಂತ್ರಜ್ಞರು ಸೂಕ್ತ: ರೈಲ್ವೆ ಮತ್ತು ಮೆಟ್ರೋ ರೈಲ್ವೆ ನಡುವೆ ಸಾಕಷ್ಟು ವ್ಯತ್ಯಾಸ ಇಲ್ಲದಿರಬಹುದು. ಆದರೆ, ರೈಲ್ವೆ ಮಾನವ ಅವಲಂಬಿತ ಮತ್ತು ಮೆಟ್ರೋ ಸ್ವಯಂಚಾಲಿತ. ಹಾಗಾಗಿ, ಮೆಟ್ರೋ ಮುನ್ನಡೆಸಲು ಅಧಿಕಾರಶಾಹಿಗಿಂತ ತಂತ್ರಜ್ಞರ ಅವಶ್ಯಕತೆ ಇದೆ. “ಮೆಟ್ರೋ ಮ್ಯಾನ್’ ಇ. ಶ್ರೀಧರನ್ ಕೂಡ ನಿರ್ಣಾಯಕ ಹುದ್ದೆಗಳಿಗೆ ತಂತ್ರಜ್ಞರ ನೇಮಕ ಹೆಚ್ಚು ಸೂಕ್ತ ಎಂದು ಈ ಹಿಂದೆ ಅಭಿಪ್ರಾಯಪಟ್ಟಿದ್ದನ್ನು ಸ್ಮರಿಸಬಹುದು ಎಂದು ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಎಂಜಿನಿಯರೊಬ್ಬರು ತಿಳಿಸಿದರು.
ಅನಿವಾರ್ಯತೆ ಏನಿದೆ?: ಅನನುಭವಿಗಳನ್ನು ತಂದು ಕೂರಿಸುವುದು ನಿಯಮ ಬಾಹಿರ ಅಲ್ಲದಿರಬಹುದು. ಆದರೆ, ಇದು ಅಂತಿಮವಾಗಿ ಯೋಜನೆ ಮತ್ತು ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ವಿನಾಕಾರಣ ಇದಕ್ಕೆ ಅವಕಾಶ ಮಾಡಿಕೊಡುವುದು ಯಾಕೆ? ಅಂತಹ ಅನಿವಾರ್ಯತೆ ಏನಿದೆ ಎಂದು ಎಂಜಿನಿಯರ್‌ಗಳು ಕೇಳುತ್ತಾರೆ.
ದಶಕದಿಂದ ನಿಯೋಜನೆ!: ಸಾಮಾನ್ಯವಾಗಿ ತೆರವಾದ ಯಾವುದೇ ಹುದ್ದೆಗೆ ಎಷ್ಟು ದಿನಗಳು ಪ್ರಭಾರರನ್ನು ನಿಯೋಜಿಸಬಹುದು. ಒಂದೆರಡು ತಿಂಗಳು, ಅಬ್ಬಬ್ಟಾ ಎಂದರೆ ವರ್ಷ. ಆದರೆ, ಹತ್ತು ವರ್ಷಗಟ್ಟಲೆ ಅವರೇ ಇಲ್ಲಿ ಕೆಲಸ ಮಾಡುತ್ತಿದ್ದಾರೆ. – ಬಿಎಂಆರ್‌ಸಿಯಲ್ಲಿ ಈ ಅಚ್ಚರಿ ಕಾಣಬಹುದು. ಒಬ್ಬಿಬ್ಬರಲ್ಲ, ಇಂತಹ ಹತ್ತಾರು ಜನರನ್ನು ನಿಗಮದಲ್ಲಿ ಕಾಣಬಹುದು. ರೈಲ್ವೆ, ಕೆಪಿಟಿಸಿಎಲ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10-12 ವರ್ಷಗಳ ಹಿಂದೆಯೇ ಇಲ್ಲಿ ನಿಯೋಜನೆ ಮೇರೆಗೆ ಬಂದವರು ಕಾಯಂ ಆಗಿ ಬೀಡುಬಿಟ್ಟಿದ್ದಾರೆ. ಇದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.
ಮೆಟ್ರೋ: ಸಂಧಾನ ಸಭೆ ವಿಫಲ ಅನಿರ್ದಿಷ್ಟಾವಧಿ ಮುಷ್ಕರ ಸಾಧ್ಯತೆಬೆಂಗಳೂರು: ಮೆಟ್ರೋ ಸಿಬ್ಬಂದಿಯ ಮತ್ತು ಬಿಎಂಆರ್‌ಸಿ ನಡುವಿನ ಸತತ ಮೂರನೇ ಸಂಧಾನ ಸಭೆಯೂ ವಿಫಲವಾಗಿದ್ದು, ಅನಿರ್ದಿಷ್ಟಾವಧಿ ಮುಷ್ಕರ ನಡೆಯುವ ಸಾಧ್ಯತೆ ಹೆಚ್ಚಿದೆ. ಸೋಮವಾರ ಕೇಂದ್ರ ಕಾರ್ಮಿಕ ಆಯುಕ್ತ ಗಣಪತಿ ಭಟ್ ಅಧ್ಯಕ್ಷತೆಯಲ್ಲಿ ಸುದೀರ್ಘ ಮಾತುಕತೆ ಫಲಿ ನೀಡಲಿಲ್ಲ. ಸಿಬ್ಬಂದಿ ಮತ್ತು ನಿಗಮದ ಆಡಳಿತ ಮಂಡಳಿ ಇಬ್ಬರೂ ಪಟ್ಟುಸಡಿಲಿಸಲಿಲ್ಲ. ಪರಿಣಾಮ ಸಂಧಾನ ಸಭೆ ಯಶಸ್ವಿಯಾಗಲಿಲ್ಲ. ಬೆಳಿಗ್ಗೆ 11.30ಕ್ಕೆ ಶುರುವಾದ ಸಭೆ ಸಂಜೆ 6.30ರವರೆಗೂ ನಡೆಯಿತು. ನಿಗಮವು ಹಲವು ಬೇಡಿಕೆಗಳ ಈಡೇರಿಕೆಗೆ ಮೌಖೀಕವಾಗಿ ಒಪ್ಪಿತು. ಆದರೆ, ಬಿಎಂಆರ್‌ಸಿ ನೌಕರರ ಸಂಘಕ್ಕೆ ಮಾನ್ಯತೆ ನೀಡುವ ವಿಚಾರಕ್ಕೆ ಮಾತ್ರ ನಿರಾಕರಿಸಿತು. ಅದರೆ ಸಿಬ್ಬಂದಿ ಪಟ್ಟುಹಿಡಿದರು. ಇದಕ್ಕೆ ಒಪ್ಪದ ಬಿಎಂಆರ್‌ಸಿ ಆಡಳಿತ ಮಂಡಳಿಯು ಸಭೆಯಲ್ಲಿನ ತೀರ್ಮಾನಗಳನ್ನು ಲಿಖೀತವಾಗಿ ದಾಖಲಿಸುವಾಗ ನಿಗಮದ ಆಡಳಿತ ಮಂಡಳಿಯು “ಬೇಡಿಕೆಗಳ ಈಡೇರಿಕೆಗೆ ಒಪ್ಪಿದೆ’ ಎಂದು ದಾಖಲಿಸುವುದು ಬೇಡ ಎಂದಾಗ ಸಂಘದ ಮುಖಂಡರು ಸಭೆಯಿಂದ ಹೊರ ನಡೆದರು ಎನ್ನಲಾಗಿದೆ. ಇದರಿಂದ ಕೇಂದ್ರ ಕಾರ್ಮಿಕ ಆಯುಕ್ತರ ನೇತೃತ್ವದ 2ನೇ ಸಭೆಯೂ ಫಲಪ್ರದವಾಗಲಿಲ್ಲ. * ವಿಜಯಕುಮಾರ್ ಚಂದರಗಿ