Advertisement

ಅಮೆರಿಕದಲ್ಲಿ ಇನ್ಫಿಯಿಂದ 10 ಸಾವಿರ ಮಂದಿ ನೇಮಕ

11:07 AM May 03, 2017 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಅಮೆರಿಕದಲ್ಲಿ ಅಮೆರಿಕದವರಿಗೇ ಉದ್ಯೋಗ ನೀಡಬೇಕು ಮತ್ತು ಎಚ್‌-1ಬಿ ವೀಸಾ ನಿಯಂತ್ರಣಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿರುವಂತೆಯೇ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಟಿ ದಿಗ್ಗಜ ಇನ್ಫೋಸಿಸ್‌ 10 ಸಾವಿರ ಮಂದಿಯ ನೇಮಕಕ್ಕೆ ಯೋಜನೆ ಹಾಕಿಕೊಂಡಿದೆ. 

Advertisement

ಮುಂದಿನ 2 ವರ್ಷಗಳಲ್ಲಿ ಅಮೆರಿಕಕ್ಕೆ ಅಗತ್ಯವಾಗಿರುವ ತಂತ್ರಜ್ಞರನ್ನು ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಲಿದೆ. ಇದರಿಂದಾಗಿ ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆ 2 ಲಕ್ಷ ಆಗುವ ಸಾಧ್ಯತೆಗಳಿವೆ.

ಅದಕ್ಕೆ ಪೂರಕವಾಗಿ ಇನ್ಫೋಸಿಸ್‌ ಅಮೆರಿಕದ ತಂತ್ರಜ್ಞಾನ ಹಬ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಆಗಸ್ಟ್‌ನಲ್ಲಿ ಇಂಡಿಯಾನಾದಲ್ಲಿ ಮೊದಲ ಕೇಂದ್ರ ತೆರೆದುಕೊಳ್ಳಲಿದೆ. ಈ ಬಗ್ಗೆ ಮಾತನಾಡಿದ ಇನ್ಫೋಸಿಸ್‌ ಅಧ್ಯಕ್ಷ ವಿಶಾಲ್‌ ಸಿಕ್ಕಾ, ಅಮೆರಿಕದ ಸ್ಥಳೀಯ ಗ್ರಾಹಕರಿಗೆ ಸಾಫ್ಟವೇರ್‌ ಸೇವೆಗಳನ್ನು ನೀಡುವ ಉದ್ದೇಶದಿಂದ ನೇಮಕಾತಿ ನಡೆಯಲಿದೆ ಎಂದಿದ್ದಾರೆ. ಜತೆಗೆ ಅಮೆರಿಕದ ಅರ್ಥವ್ಯವಸ್ಥೆ ಜತೆಗೆ ಕಂಪನಿ 35 ವರ್ಷಗಳಿಂದ ಇದೆ. ಅಲ್ಲಿನ ನಿಯಮ ಜಾರಿಗೆ ಬದ್ಧವಾಗಿದೆ ಎಂದಿದ್ದಾರೆ. ಇದರೊಂದಿಗೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷೀನ್‌ ಲರ್ನಿಂಗ್‌ನಂತಹ ಡಿಜಿಟಲ್‌ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next