ಹೊಸದಿಲ್ಲಿ : 2016-17ರ ಹಾಲಿ ಹಣಕಾಸು ವರ್ಷ ಮೂರನೇ ತ್ತೈಮಾಸಿಕದಲ್ಲಿ ದೇಶದ ಐಟಿ ಕ್ಷೇತ್ರದ ದಿಗ್ಗಜಗಳಲ್ಲಿ ಒಂದಾಗಿರುವ ಇನ್‌ಫೋಸಿಸ್ ಎಲ್ಲರ ನಿರೀಕ್ಷೆಗೂ ಮೀರಿ ಶೇ.2.3ರ ಹೆಚ್ಚಳದೊಂದಿಗೆ 37.08 ಶತಕೋಟಿ ರೂ.ಗಳ ಸಂಯುಕ್ತ ನಿವ್ವಳ ಲಾಭವನ್ನು ಗಳಿಸಿದೆ.
ಹಾಗಿದ್ದರೂ ಹಾಲಿ ಪರಿಸ್ಥಿತಿಯನ್ನು ಲೆಕ್ಕಿಸಿ ಕಂಪೆನಿಯು 2016-17 ಪೂರ್ಣ ಹಣಕಾಸು ವರ್ಷದಲ್ಲಿನ ತನ್ನ ಅಂದಾಜು ಆದಾಯ ಗಳಿಕೆ ಪ್ರಮಾಣವನ್ನು ಶೇ.8.6 – ಶೇ.9ರಿಂದ ಶೇ.7.2- ಶೇ.7.6ರ ಪ್ರಮಾಣದಕ್ಕೆ ಇಳಿಸಿರವುದು ಗಮನಾರ್ಹವಾಗಿದೆ.
ಇನ್‌ಫೋಸಿಸ್ ತ್ತೈಮಾಸಿಕ ಫಲಿತಾಂಶ ಪ್ರಕಟವಾದೊಡನೆಯೇ ಅದರ ಶೇರು ಧಾರಣೆ ಮುಂಬಯಿ ಶೇರು ಪೇಟೆಯಲ್ಲಿ ಉತ್ತಮ ಮುನ್ನಡೆಯನ್ನು ಕಂಡಿತಾದರೂ ಕ್ರಮೇಣ ಅದು ಇಳಿದು 979 ರೂ.ಗಳಿಗೆ ಜಾರಿತು.
ಹಾಲಿ ಹಣಕಾಸು ವರ್ಷದಲ್ಲಿನ ಮೂರನೇ ತ್ತೈಮಾಸಿಕದಲ್ಲಿ ಕಂಪೆನಿಯು ಗಳಿಸಿರುವ ಸಂಯುಕ್ತ ನಿವ್ವಳ ಲಾಭವು ನಮ್ಮ ನಿರೀಕ್ಷೆಗೆ ತಕ್ಕುದಾಗಿದೆ ಎಂದು ಇನ್‌ಫೋಸಿಸ್ ಸಿಇಞ ಮತ್ತು ಎಂ ಡಿ ಆಗಿರುವ ವಿಶಾಲ್ ಸಿಕ್ಕಾ ಹೇಳಿದ್ದಾರೆ.
ಕಳೆದ ವರ್ಷ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲಂಡ್ ಇನ್‌ಫೋಸಿಸ್‌ಗೆ ನೀಡಿದ್ದ 300 ದಶಲಕ್ಷ ಪೌಂಡರ್ ಐದು ವರ್ಷಗಳ ಪ್ರಮುಖ ಗುತ್ತಿಗೆಯನ್ನು ರದ್ದು ಪಡಿಸಿತ್ತು. ಇದರಿಂದ ಕಂಪೆನಿಗೆ ಭಾರೀ ದೊಡ್ಡ ಹೊಡೆತ ಉಂಟಾಗಿತ್ತು ಮಾತ್ರವಲ್ಲದೆ ಕಂಪೆನಿಯ 3,000 ಉದ್ಯೋಗಿಗಳನ್ನು ತೀವ್ರವಾಗಿ ಬಾಧಿಸಿತ್ತು. ಜತೆಗೆ ಕಂಪೆನಿಯ ಆದಾಯವು 40 ದಶಲಕ್ಷ ಡಾಲರ್‌ಗಳಷ್ಟು ಕುಂಠಿತಗೊಂಡಿತ್ತು.