Advertisement
ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಂತಹ ಯಾವುದೇ ಯೋಜನೆಗಳನ್ನು ಗುರುತಿಸಿ, ಪೋಷಿಸಲು ಇನ್ಫೋಸಿಸ್ ಪ್ರತಿಷ್ಠಾನ ಮುಂದಾಗಿದೆ. ಈ ಸಂಬಂಧ “ಆರೋಹಣ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿ’ ಪ್ರಕಟಿಸಿದೆ.
Related Articles
Advertisement
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, ಶಿಕ್ಷಣ ಹಾಗೂ ಕ್ರೀಡೆ, ಸುಸ್ಥಿರತೆ ಸೇರಿದಂತೆ ಆರು ವಿಭಾಗಗಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಡಿ. 31 ಕೊನೆಯ ದಿನ. ಈಗಾಗಲೇ ನೂರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆಸಕ್ತರು ತಮ್ಮ ಕೆಲಸ ಕಾರ್ಯಗಳ ಮಾಹಿತಿಯನ್ನು ವಿಡಿಯೊ ರೂಪದಲ್ಲಿ ಸಿದ್ಧಪಡಿಸಿ ವೆಬ್‌ಸೈಟ್: www.infosys.com/aarohan ನಲ್ಲಿ ಅಪ್‌ಲೋಡ್ ಮಾಡಬಹುದು ಎಂದರು.
ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಲು ಈ ತೀರ್ಪುಗಾರರ ಸಮಿತಿಯಲ್ಲಿ ಐಐಎಂ ಬೆಂಗಳೂರು ಡೀನ್ ಪ್ರೊ.ತ್ರಿಲೋಚನ್ ಶಾಸಿ, ಪದ್ಮಶ್ರೀ ಅರವಿಂದ್ ಗುಪ್ತ, ಐಐಟಿ ಹೈದರಾಬಾದ್‌ನ ಜಿವಿವಿ ಶರ್ಮಾ, ಐಐಎಂ ಹೈದರಾಬಾದ್‌ನ ಪ್ರೊ.ಅನಿಲ್ ಗುಪ್ತ ಇರುತ್ತಾರೆ ಎಂದು ಮಾಹಿತಿ ನೀಡಿದರು.
ಅಸಲೀತನಕ್ಕೆ ಬೆಲೆ: ಈ ಮೊದಲು ಶೌಚಾಲಯಗಳ ನಿರ್ಮಾಣ, ಬರ ಅಥವಾ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವುದು, ಶಾಲೆಗಳ ದತ್ತು ಮತ್ತಿತರ ಯೋಜನೆಗಳಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಸಕ್ರಿಯವಾಗಿತ್ತು. ಆದರೆ, ಇದೇ ಮೊದಲ ಬಾರಿ ಸಮಾಜದ ಪರಿವರ್ತನೆಗೆ ಕಾರಣವಾಗುವಂತಹ ಯೋಜನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪರಿಣಿತ ತೀರ್ಪುಗಾರರು ಅರ್ಜಿಗಳನ್ನು ನಾಲ್ಕು ಮಾನದಂಡಗಳ ಮೂಲಕ ಅಂದರೆ ಜಗತ್ತಿನ ನೈಜ ಸಮಸ್ಯೆಗಳಿಗೆ ಅನ್ವಯಿಸುವುದು, ತಂತ್ರಜ್ಞಾನದ ಬಳಕೆ, ಆಲೋಚನೆಗಳ ಅಸಲಿತನ ಮತ್ತು ಬಳಕೆಯ ಸರಳತೆ ಆಧರಿಸಿ ಆಯ್ಕೆ ಮಾಡುತ್ತಾರೆ ಎಂದು ಸುಧಾಮೂರ್ತಿ ವಿವರಿಸಿದರು.