Advertisement

13,000 ಕೋಟಿ ರೂ. ಶೇರು ಮರು ಖರೀದಿಸುವ ಇನ್‌ಫೋಸಿಸ್‌

03:18 PM Aug 19, 2017 | |

ಹೊಸದಿಲ್ಲಿ : ದೇಶದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್‌ ಸೇವೆಗಳ ಸಂಸ್ಥೆಯಾಗಿರುವ ಇನ್‌ಫೋಸಿಸ್‌ ಇಂದು ಶನಿವಾರ 13.000 ಕೋಟಿ ರೂ. ಮೌಲ್ಯದ ತನ್ನ ಶೇರುಗಳನ್ನು  ತಲಾ ಶೇರಿಗೆ 1,150 ರೂ. ಬೆಲೆಯಲ್ಲಿ ಮರು ಖರೀದಿಸಲು ನಿರ್ಧರಿಸಿದೆ. ಕಂಪೆನಿಯ ಆಡಳಿತ ಮಂಡಳಿಯು ಈ ಶೇರು ಮರುಖರೀದಿ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. 

Advertisement

ಮಾರುಕಟ್ಟೆಯಲ್ಲಿ  ಈಗ ಇನ್‌ಫೋಸಿಸ್‌ ಶೇರು ದರ 923.10 ರೂ. ಇದೆ. ಎಂದರೆ ಇನ್‌ಫೋಸಿಸ್‌ ನಿಗದಿಸಿರುವ ಮರು ಖರೀದಿ ದರವು (ರೂ.1,150) ನಿನ್ನೆ ಶುಕ್ರವಾರದ ಮಾರುಕಟ್ಟೆ ದರಕ್ಕಿಂತ ಶೇ.25ರಷ್ಟು ಹೆಚ್ಚು.

ತನ್ನ ಶೇರು ದಾರರಿಂದ 13,000 ಕೋಟಿ ರೂ. ಮೌಲ್ಯದ ಶೇರುಗಳನ್ನು ಮರು ಖರೀದಿಸುವ ಕೊಡುಗೆಯ ಅನುಷ್ಠಾನ ಪ್ರಕ್ರಿಯೆಯ ಉಸ್ತುವಾರಿಗೆ ಇನ್‌ಫೋಸಿಸ್‌ ಏಳು ಸದಸ್ಯರ ಸಮಿತಿಯೊಂದನ್ನು ರೂಪಿಸಿದೆ. ಈ ಸಮಿತಿಯಲ್ಲಿ ಕಂಪೆನಿಯ ಸಹ-ಅಧ್ಯಕ್ಷ ರವಿ ವೆಂಕಟೇಶನ್‌, ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಶಾಲ್‌ ಸಿಕ್ಕಾ, ಮಧ್ಯಾವಧಿ ಸಿಇಓ ಮತ್ತು ಎಂಡಿ ಆಗಿರುವ ಯು ಬಿ ಪ್ರವೀಣ್‌ ರಾವ್‌ ಇದ್ದಾರೆ. 

2017ರ ಜೂನ್‌ 30ರ ಪ್ರಕಾರ ಇನ್‌ಫೋಸಿಸ್‌ ಬಳಿ ನಗದು ಅಥವಾ ನಗದಿಗೆ ಸಮಾನವಾಗಿರುವ 3.5 ಶತಕೋಟಿ ಡಾಲರ್‌ ಹಣ ಇದೆ.

Advertisement

Udayavani is now on Telegram. Click here to join our channel and stay updated with the latest news.

Next