ನವದೆಹಲಿ: 2019ರಲ್ಲಿ ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಇಡೀ ಜಗತ್ತಿಗೆ ಬಹಿರಂಗಪಡಿಸುವ ಮೊದಲು ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಇದನ್ನೂ ಓದಿ:Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಬಾಗಲಕೋಟೆಯಲ್ಲಿ ಬೃಹತ್ ರಾಲಿಯನ್ನ ಉದ್ಶೇಶಿಸಿ ಮಾತನಾಡಿದ ಅವರು, ಮೋದಿಗೆ ಹಿಂಬದಿಯಿಂದ ಹೋರಾಟ ಮಾಡಿ ಗೊತ್ತಿಲ್ಲಾ. ನೇರ ಹೋರಾಟ ನಮ್ಮ ಧ್ಯೇಯವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು, ಮಾಧ್ಯಮದವರನ್ನು ಕರೆಯಿಸಿ, ಮಾಹಿತಿ ನೀಡಿ ಎಂದಿದ್ದೆ. ಆದರೆ ಅದಕ್ಕೂ ಮೊದಲು ನಾನು ದೂರವಾಣಿ ಮೂಲಕ ಬಲೂಚಿಸ್ತಾನ್ ಮೇಲಿನ ವೈಮಾನಿಕ ದಾಳಿ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸುತ್ತೇನೆ ಎಂದರು. ಆದರೆ ಪಾಕ್ ಅಧಿಕಾರಿಗಳು ಕರೆಯನ್ನು ಸ್ವೀಕರಿಸಿಲ್ಲವಾಗಿತ್ತು. ಮತ್ತೆ ಕಾಯುವಂತೆ ನಮ್ಮ ಪಡೆಗಳಿಗೆ ತಿಳಿಸಿದ್ದೆ. ಮೊದಲು ಪಾಕ್ ಗೆ ಮಾಹಿತಿ ನೀಡಿ, ನಂತರ ಇಡೀ ಜಗತ್ತಿಗೆ ಮಾಹಿತಿ ನೀಡಲಾಗಿತ್ತು.
ಭಾರತ ಪಾಕಿಸ್ತಾನದೊಳಕ್ಕೆ ವೈಮಾನಿಕ ದಾಳಿ ನಡೆಸಿದ್ದ ಸಂದರ್ಭದಲ್ಲಿ ಹಲವು ಜನರು ಆರಂಭಿವಾಗಿ ಬಾಗಲಕೋಟ್ ಎಂದೇ ಗ್ರಹಿಸಿದ್ದರು. ನಂತರ ನಾವು ಪತ್ರಿಕಾಗೋಷ್ಠಿ ಕರೆದು ಮಾಹಿತಿ ಬಹಿರಂಗಪಡಿಸಿದ ನಂತರ ಇದು ಪಾಕ್ ನ ಬಾಲಾಕೋಟ್ ಎಂಬುದು ಸ್ಪಷ್ಟವಾಗಿತ್ತು ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.
ಪ್ರಧಾನಿ ಮೋದಿ ವಸ್ತುಗಳನ್ನಾಗಲಿ, ದಾಳಿಯನ್ನಾಗಲಿ ಮುಚ್ಚಿಡುವುದಿಲ್ಲ. ಅವೆಲ್ಲವೂ ಮುಕ್ತವಾಗಿರುವ ವಿಷಯವಾಗಿದೆ. ದೇಶದ ಅಮಾಯಕ ಜನರನ್ನು ಯಾರು ಕೊಲ್ಲಲು ಪ್ರಯತ್ನಿಸುತ್ತಿದ್ದಾರೋ ಅಂತಹವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ನವ ಭಾರತದಲ್ಲಿ ಯಾರು ನಮ್ಮ ಗಡಿಯೊಳಗೆ ಬರುತ್ತಾರೋ ಅವರನ್ನು ಸದೆ ಬಡಿಯದೆ ಬಿಡುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.