Advertisement
ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ 30 ಕೃಷಿ ಸಖಿಯರಿಗೆ ಮೊದಲನೇ ಹಂತದ 6 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಒಂದು ಗ್ರಾಮ ಪಂಚಾಯಿತಿಗೆ ಒಬ್ಬ ಕೃಷಿ ಸಖೀಯರಂತೆ ನೇಮಿಸಲಾಗಿದೆ. ಹಳ್ಳಿಗಳಲ್ಲಿ ಮನೆ ಮನೆಗೂ ತೆರಳಿ ಕೃಷಿ ಮತ್ತು ಪಶು ವಲಯಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆಯಿಂದ ಜಾರಿಗೊಳಿಸಲಾಗುವ ಯೋಜನೆಗಳು, ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಕುರಿತು ಸಲಹೆಗಳನ್ನು ಕೃಷಿ ಸಖಿಯರು ನೀಡಲಿದ್ದಾರೆ. ಪ್ರತಿ ಪಂಚಾಯಿತಿ ವ್ಯಾಪ್ತಿ ಯಲ್ಲಿ ಐವರು ಸಖಿಯರನ್ನು ನೇಮಕ ಮಾಡಲಾಗುತ್ತದೆ.
Related Articles
Advertisement
ಜಮೀನಿನಲ್ಲಿ ಮಣ್ಣಿನ ಪರೀಕ್ಷೆ: ರೈತರು ತಮ್ಮ ಜಮೀನುಗಳ ಬೆಳೆ ಬಗ್ಗೆ ತಿಳಿಯಲು ರೈತರ ಹೊಲಗಳಲ್ಲಿ ಮಣ್ಣಿನ ಪರೀಕ್ಷೆ, ಕೀಟನಾಶಕ, ರಸಗೊಬ್ಬರ ಪ್ರಮಾಣ ಬಗ್ಗೆ ನೇರವಾಗಿ ರೈತರ ಜಮೀನುಗಳಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ತಿಳಿಸುವ ಸಂಪೂರ್ಣ ಜವಾಬ್ದಾರಿ ಕೃಷಿ ಸಖಿಯರದ್ದಾಗಿರುತ್ತದೆ ಎಂದು ಹೇಳಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಮಲ್ಲಿಕಾರ್ಜು ನಗೌಡ, ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ, ಜಿಪಂ ಯೋಜನಾ ನಿರ್ದೇಶಕ ವಿಠಲ್ ಕಾವಲೇ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿಗೆ ಕೃಷಿ ಸಖಿಯರಂತೆ ನೇಮಕ● ರೈತರ ಮನೆಗೆ ತೆರಳಿ ಕೃಷಿ, ಪಶು, ತೋಟಗಾರಿಕೆ ಇಲಾಖೆಯ ಯೋಜನೆ ಕುರಿತು ಅರಿವು.
● ರಾಜ್ಯದ ಎಲ್ಲೆಡೆ ಏಕಕಾಲದಲ್ಲಿ ಮೊದಲನೇ ಹಂತದಲ್ಲಿ 6 ದಿನಗಳ ತರಬೇತಿ
● ಎನ್‌ಆರ್‌ಎಲ್‌ಎಂ-ಸಂಜೀವಿನಿ ಯೋಜನೆಯಡಿ 101 ಕೃಷಿ ಸಖಿಯರ ಆಯ್ಕೆ
● ತಾಂತ್ರಿಕ ಜ್ಞಾನ ಹೆಚ್ಚಿಸಲು ವಿವಿಧ ವಿಷಯಾಧಾರಿತ ತರಬೇತಿ
● ರೈತರ ಮನೆ ಬಾಗಿಲಿಗೆ ಸೇವೆ ವಿಸ್ತರಿಸಲು ಕಾರ್ಯತಂತ್ರ ರೂಪಿಸಲು ಕ್ರಮ