Advertisement

ಅಮೆರಿಕದ ವಿವಿಧ ಸಂಸ್ಥೆಗಳ ಮಾಹಿತಿ ಕದ್ದ ಹ್ಯಾಕರ್‌ಗಳು

12:31 AM Mar 12, 2021 | Team Udayavani |

ವಾಷಿಂಗ್ಟನ್‌: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಹ್ಯಾಕರ್‌ಗಳ ಪಡೆಯೊಂದು ಅಮೆರಿಕದ ವಿವಿಧ ಆಸ್ಪತ್ರೆಗಳು, ಕಂಪೆನಿಗಳು, ಪೊಲೀಸ್‌ ಇಲಾಖೆ, ಜೈಲುಗಳು ಹಾಗೂ ಶಾಲೆಗಳಲ್ಲಿರುವ ಸುಮಾರು 1.50 ಲಕ್ಷ ಸೆಕ್ಯುರಿಟಿ ಕೆಮರಾಗಳು ಸೆರೆಹಿಡಿದಿರುವ ದೃಶ್ಯಾವಳಿಗಳನ್ನು ಕದ್ದಿರುವುದಾಗಿ ಘೋಷಿಸಿದೆ.

Advertisement

ಅಮೆರಿಕದ ಸಿಲಿಕಾನ್‌ ವ್ಯಾಲಿಯಲ್ಲಿರುವ “ವರ್ಕಾಡಾ ಇಂಕ್‌’ ಎಂಬ ಸ್ಟಾರ್ಟ್‌ಅಪ್‌ ಕಂಪೆನಿಯಲ್ಲಿ ಸಂಗ್ರಹವಾಗಿದ್ದ ದತ್ತಾಂಶಗಳ ಮೂಲಕ ಹೀಗೆ ಸೆಕ್ಯುರಿಟಿ ಕೆಮರಾಗಳ ಮೂಲಕ ಸರ್ವರ್‌ಗಳಿಗೆ ರವಾನೆಯಾಗುತ್ತಿದ್ದ ದೃಶ್ಯಗಳನ್ನು ಸೋರಿಕೆ ಮಾಡಿರುವುದಾಗಿ ಹ್ಯಾಕರ್‌ಗಳು ತಿಳಿಸಿದ್ದಾರೆ. ವರ್ಕಾಡಾ ಇನ್‌ಕಾರ್ಪೋರೆಟ್‌ ಕಂಪೆನಿ, ವಿವಿಧ ಸಂಸ್ಥೆಗಳಿಗೆ ಸೆಕ್ಯುರಿಟಿ ಕೆಮರಾದ ಹಾರ್ಡ್‌ವೇರ್‌ ಹಾಗೂ ಸಾಫ್ಟ್ವೇರ್‌ ರವಾನಿಸುವ ಕಂಪೆನಿಯಾಗಿದೆ.

ಪ್ರಮುಖ ಕಂಪೆನಿಗಳಾದ ಟೆಸ್ಲಾ, ಕ್ಲೌಡ್‌ವೇರ್‌, ವರ್ಕಾಡಾ ಇಂಕ್‌ ಸೇರಿದಂತೆ ಅನೇಕ ಕಂಪೆನಿಗಳು, ಆಸ್ಪತ್ರೆಗಳು, ಮಹಿಳಾ ಆರೋಗ್ಯ ಕೇಂದ್ರಗಳು, ಮಾನಸಿಕ ಚಿಕಿತ್ಸಾ ಕೇಂದ್ರ ಗಳು, ಕಚೇರಿಗಳ ಒಳಾಂಗಣ, ಅಲ್ಲಿನ ಸಿಬಂದಿ, ಅಲ್ಲಿ ನಡೆಯುವ ಚಟುವಟಿಕೆ ಗಳು ಇತ್ಯಾದಿಗಳೆಲ್ಲವನ್ನೂ ಹ್ಯಾಕರ್‌ಗಳು ಗಮನಿಸಿರುವುದು ಸ್ಪಷ್ಟವಾಗಿದೆ. ಇದು ಜಗತ್ತಿನ ಇತರ ರಾಷ್ಟ್ರಗಳ ಭದ್ರತಾ ವ್ಯವಸ್ಥೆಗೇ ಧಕ್ಕೆ ತರುವಂಥದ್ದಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next