Advertisement

ಕೋವಿಡ್ ನಂತೆಯೇ ಹರಡುತ್ತದೆ ‘ಎಚ್3ಎನ್2 ವೈರಸ್’; ಮಾಸ್ಕ್- ಅಂತರ ಮತ್ತೆ ಜಾರಿ ಸಾಧ್ಯತೆ!

11:41 AM Mar 07, 2023 | Team Udayavani |

ಹೊಸದಿಲ್ಲಿ: ಇನ್‌ಫ್ಲುಯೆಂಜಾ ವೈರಸ್ ಎಚ್3ಎನ್2 ಕೋವಿಡ್‌ ನಂತೆ ಹರಡುತ್ತದೆ. ಹೀಗಾಗಿ ವಯಸ್ಸಾದವರು ಜಾಗರೂಕರಾಗಿರಬೇಕು ಎಂದು ಏಮ್ಸ್ ದೆಹಲಿ ಮಾಜಿ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಹೇಳಿದರು.

Advertisement

ಎಎನ್ಐ ಜೊತೆ ಮಾತನಾಡಿದ ಅವರು, ಇದು ಪ್ರತಿ ವರ್ಷ ಈ ಸಮಯದಲ್ಲಿ ರೂಪಾಂತರಗಳ ಮೂಲಕ ಹರಡುತ್ತದೆ ಎಂದು ಹೇಳಿದರು. ಹಬ್ಬ ಹರಿದಿನಗಳು ಸಮೀಪಿಸುತ್ತಿರುವುದರಿಂದ ಜನರು. ವಿಶೇಷವಾಗಿ ವಯಸ್ಸಾದವರು ಮತ್ತು ಸಹವರ್ತಿ ಕಾಯಿಲೆ ಇರುವವರು ಜಾಗರೂಕರಾಗಿರಬೇಕು ಎಂದಿದ್ದಾರೆ.

ಇನ್ಫ್ಲುಯೆನ್ಸ ಪ್ರಕರಣಗಳು ನೋಯುತ್ತಿರುವ ಗಂಟಲು, ಕೆಮ್ಮು, ದೇಹದ ನೋವು ಮತ್ತು ಶೀತದೊಂದಿಗೆ ಜ್ವರದಿಂದ ಕಂಡುಬರುತ್ತವೆ. ವೈರಸ್ ರೂಪಾಂತರಗೊಂಡ ಕಾರಣದಿಂದ ಮತ್ತು ಅದರ ವಿರುದ್ಧ ಜನರ ರೋಗನಿರೋಧಕ ಶಕ್ತಿ ಕಡಿಮೆಯಾದ ಕಾರಣ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆ; ಟಿ20 ತಂಡಕ್ಕೆ ನೂತನ ನಾಯಕನ ನೇಮಕ

“ನಾವು ಹಲವು ವರ್ಷಗಳ ಹಿಂದೆ ಎಚ್1ಎನ್1 ಸಾಂಕ್ರಾಮಿಕ ರೋಗವನ್ನು ಕಂಡಿದ್ದೇವೆ. ಆ ವೈರಸ್ ಮುಂದುವರಿದು ಈಗ H3N2 ಆಗಿದೆ ಮತ್ತು ಆದ್ದರಿಂದ, ಇದು ಸಾಮಾನ್ಯ ಇನ್ಫ್ಲುಯೆನ್ಸ ಸ್ಟ್ರೈನ್ ಆಗಿದೆ. ಹೆಚ್ಚಿನ ಪ್ರಕರಣಗಳನ್ನು ನೋಡುತ್ತಿದ್ದೇವೆ ಏಕೆಂದರೆ ವೈರಸ್ ಸ್ವಲ್ಪಮಟ್ಟಿಗೆ ರೂಪಾಂತರಗೊಳ್ಳುತ್ತಿದೆ.  ವೈರಸ್ ವಿರುದ್ಧ ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಜನರು ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ” ಎಂದು ಡಾ ಗುಲೇರಿಯಾ ಎಎನ್‌ ಐಗೆ ತಿಳಿಸಿದರು.

Advertisement

ಇದರ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಜನಸಂದಣಿ ಇರುವ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವುದು ವೈರಸ್‌ ನಿಂದ ನಮ್ಮನ್ನು ತಡೆಯುವ ಮಾರ್ಗವಾಗಿದೆ ಎಂದು ಡಾ ರಂದೀಪ್ ಗುಲೇರಿಯಾ ಹೇಳಿದ್ದಾರೆ.

“ನಾವು ನಮ್ಮ ಕೈಗಳನ್ನು ಆಗಾಗ್ಗೆ ತೊಳೆಯಬೇಕು. ದೈಹಿಕ ಅಂತರವನ್ನು ಹೊಂದಿರಬೇಕು. ವರ್ಷದ ಈ ಸಮಯದಲ್ಲಿ ಹವಾಮಾನ ಬದಲಾದಾಗ ಮತ್ತು ಜನಸಂದಣಿಯ ಸ್ಥಳಗಳಲ್ಲಿ ಇನ್ಫ್ಲುಯೆನ್ಸ ಬರುವ ಸಾಧ್ಯತೆ ಹೆಚ್ಚು” ಎಂದು ಗುಲೇರಿಯಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next