ಹೊಸದಿಲ್ಲಿ: ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದಾಗಿ ಎಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ.4.7ಕ್ಕೆ ಇಳಿಕೆಯಾಗಿದ್ದು, ಇದು 18 ತಿಂಗಳಲ್ಲೇ ದಾಖಲಾದ ಕನಿಷ್ಠ ಹಣದುಬ್ಬರ ಎಂದು ಸರಕಾರದ ದತ್ತಾಂಶ ತಿಳಿಸಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ಆಧರಿತ ಹಣದುಬ್ಬರವು ಇದು ಸತತ 2ನೇ ತಿಂಗಳು ಆರ್‌ಬಿಐನ ಶೇ.6ರ ವಲಯಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಈ ಸೂಚ್ಯಂಕ ಶೇ.5.66ರಷ್ಟಿತ್ತು. ಇನ್ನು ಆಹಾರ ಹಣದುಬ್ಬರ ಪ್ರಮಾಣವು ಮಾರ್ಚ್‌ನಲ್ಲಿ ಶೇ.4.79, ಕಳೆದ ವರ್ಷ ಶೇ.8.31 ಹಾಗೂ ಎಪ್ರಿಲ್‌ನಲ್ಲಿ ಶೇ.3.84ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ಭಾರತದ ಕೈಗಾರಿಕ ಉತ್ಪಾದನೆಯು ಮಾರ್ಚ್‌ನಲ್ಲಿ ಶೇ.1.1ರ ಬೆಳವಣಿಗೆ ದಾಖಲಿಸಿದ್ದು, 2022-23ರ ಆರ್ಥಿಕ ವರ್ಷದಲ್ಲಿ ಶೇ.5.1ರಷ್ಟು ಪ್ರಗತಿ ದಾಖಲಿಸಿತ್ತು ಎನ್ನಲಾಗಿದೆ. ಇದೇ ವೇಳೆ ಹಣದುಬ್ಬರ ಇಳಿಕೆಯು ತೃಪ್ತಿದಾಯಕವಾಗಿದ್ದು, ದೇಶದ ಹಣಕಾಸು ನೀತಿ ಸರಿಯಾದ ದಿಕ್ಕಿನಲ್ಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.