Advertisement
ತಾಲೂಕಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ವೈರಸ್ ಇದೀಗ ತಾಲೂಕು ಆಸ್ಪತ್ರೆಯ ಸಿಬ್ಬಂದಿಗೂ ತಗುಲಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ತುರ್ತು ಫೀವರ್ ಕ್ಲಿನಿಕ್ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
Related Articles
Advertisement
ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಆದೇಶ ಇದೆ. ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದರಿಂದಬಿಡುಗಡೆಯಾಗುವವರೆಗೂಒಂದಷ್ಟು ನಿಯಮ ಗಳನ್ನು ಪಾಲಿಸಬೇಕು. ಆ ನಿಯಮ ಗಳನ್ನು ಆಸ್ಪತ್ರೆಗಳು ಕಟ್ಟುನಿಟ್ಟಾಗಿ ಪಾಲಿಸ ದಿದ್ದರೆಅವರ ವಿರುದ್ಧ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಹೇಳಿದರು.
ಸಾಮಾನ್ಯವಾಗಿ ಎಲ್ಲಾ ಸೋಂಕಿತ ರಿಗೂ ವೆಂಟಿಲೇಟರ್ ಬಳಸುವುದಿಲ್ಲ.ಅತ್ಯಂತ ಅವಶ್ಯಕತೆ ಇರುವವರಿಗೆ ಮಾತ್ರ ಬಳಸಲಾಗುತ್ತದೆ. ಯಾರಿಗೆ ಶ್ವಾಸಕೋಶಬಲಹೀನವಾಗಿರುತ್ತದೋಅಂತಹವರಿಗೆ ಮಾತ್ರ ಆಮ್ಲಜನಕ ಪೂರೈಕೆ ಮಾಡ ಬೇಕು. ಆಗ ಮಾತ್ರ ವೆಂಟಿಲೇಟರ್‌ಬಳಕೆಗೆ ಬರುತ್ತದೆ ಎಂದರು.ಸೋಂಕಿತರ ಸಂಖ್ಯೆ ಹೆಚ್ಚು ಮಾಡುತ್ತೇವೋ, ಕಡಿಮೆ ಮಾಡುತ್ತೇವೋ ಎಂಬುದು ನಮ್ಮಕೈಲಿದೆ. ನಾನು ನೋಡಿದ ಹಾಗೆ ಮಾರುಕಟ್ಟೆ ಮತ್ತಿತರ ಕಡೆ ಓಡಾಡುವವರು ಮಾಸ್ಕ್ ಧರಿಸುವುದೇ ಇಲ್ಲ. ಎಲ್ಲರೂ ಕಡ್ಡಾಯವಾಗಿಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಸೋಂಕಿತರಸಂಖ್ಯೆನಿರಂತರವಾಗಿಹೆಚ್ಚಾಗುತ್ತಿರುತ್ತದೆ.ಯಾರೂ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಳ್ಳದೆ ಉದಾಸೀನದಿಂದ ಇರಬೇಡಿ ಎಂದು ಮನವಿ ಮಾಡಿದರು.
ಈ ವರ್ಷ ಚಾಮುಂಡಿ ಬೆಟ್ಟ, ಅರಮನೆ ಆವರಣದಲ್ಲಿ ಮಾತ್ರ ದಸರಾ ನಡೆಯತ್ತದೆ.ಆದಷ್ಟೂಕಡಿಮೆಜನರನ್ನುಸೇರಿಸಿಕೊಂಡು ಕಾರ್ಯಕ್ರಮನಡೆಸುತ್ತೇವೆ. ಎಲ್ಲರಿಗೂ ತಪಾಸಣೆ ಮಾಡಿ ನಂತರ ಒಳಗೆ ಬಿಡಲಾಗುವುದು ಎಂದರು