Advertisement

ಕುಟುಂಬದ ಸದಸ್ಯರಿಗೆ ಸೋಂಕು; ಐಸೊಲೇಶನ್‌ನಲ್ಲಿ ರಿಕಿ ಪಾಂಟಿಂಗ್‌

11:17 PM Apr 22, 2022 | Team Udayavani |

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಅವರ ಕುಟುಂಬ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಾಂಟಿಂಗ್‌ 5 ದಿನಗಳ ಐಶೊಲೇಶನ್‌ನಲ್ಲಿ ಇರಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ತಿಳಿಸಿದೆ.

Advertisement

ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಂಟಿಂಗ್‌ ಅವರ ವರದಿ ನೆಗೆಟಿವ್‌ ಬಂದಿದೆ. ಆದರೆ ಇತರರ ಜತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪಾಂಟಿಂಗ್‌ ಅವರನ್ನು 5 ದಿನ ಐಶೊಲೇಶನ್‌ನಲ್ಲಿ ಇಡಲು ನಿರ್ಧರಿಸಲಾಗಿದೆ. ಅವರ ಕುಟುಂಬ ಸದಸ್ಯರನ್ನೂ ಐಶೊಲೇಶನ್‌ನಲ್ಲಿ ಇಡಲಾಗಿದೆ ಎಂದು ಡೆಲ್ಲಿ ತಿಳಿಸಿದೆ.

ರಾಜಸ್ಥಾನ್‌ ವಿರುದ್ಧದ ಶುಕ್ರವಾರದ ಪಂದ್ಯದ ವೇಳೆ ಪಾಂಟಿಂಗ್‌ ಮೈದಾನದಲ್ಲಿ ಉಪಸ್ಥಿತರಿರಲಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಪಾಂಟಿಂಗ್‌ ಮತ್ತು ಅವರ ಕುಟುಂಬದ ಗೌಪ್ಯತೆಯನ್ನು ಫ್ರಾಂಚೈಸಿ ಗೌರವಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ:ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಬೆಳ್ಳಿ  ಗೆದ್ದ ಅನ್ಶು ಮಲಿಕ್‌, ರಾಧಿಕಾ

ಪಂದ್ಯಕ್ಕೆ ಅಡ್ಡಿ ಆಗಲಿಲ್ಲ
ಪಂಜಾಬ್‌ ಎದುರಿನ ಬುಧವಾರದ ಪಂದ್ಯಕ್ಕೂ ಮೊದಲು ಡೆಲ್ಲಿ ತಂಡದ ಇಬ್ಬರು ಆಟಗಾರರ ಸಹಿತ 6 ಮಂದಿಗೆ ಸೋಂಕು ದೃಢಪಟ್ಟಿತ್ತು. ಮಿಚೆಲ್‌ ಮಾರ್ಷ್‌ ಮತ್ತು ಟಿಮ್‌ ಸೀಫ‌ರ್ಟ್‌ ಫ‌ಲಿತಾಂಶ ಪಾಸಿಟಿವ್‌ ಬಂದಿತ್ತು. ಇವರೆಲ್ಲರ ಆರೋಗ್ಯವನ್ನು ತಮ್ಮ ವೈದ್ಯಕೀಯ ತಂಡ ಪರಿಶೀಲಿಸುತ್ತಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ಡೆಲ್ಲಿ ಫ್ರಾಂಚೈಸಿಯಲ್ಲಿ ಬಹಳಷ್ಟು ಕೋವಿಡ್‌ ಪ್ರಕರಣ ಕಂಡುಬಂದಿದ್ದರಿಂದ ಪಂಜಾಬ್‌ ವಿರುದ್ಧದ ಪಂದ್ಯ ನಡೆಯುವುದು ಅನುಮಾನವಾಗಿತ್ತು. ಆದರೆ ತಂಡದ ಇಬ್ಬರೇ ಆಟಗಾರರಿಗೆ ಸೋಂಕು ದೃಢಪಟ್ಟಿದ್ದರಿಂದ ಪಂದ್ಯಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next