Advertisement
ಪಟ್ಟಣದ ಮೊದಲ ಪ್ರಕರಣ ಇದಾಗಿದೆ. ಸೋಂಕಿತ ಯುವಕ ಬಾಗಲಕೋಟೆ, ಹುನಗುಂದ, ಇಳಕಲ್ಲ ಮೊದಲಾದ ಕಡೆ ಹೋಗಿ ಬಂದಿರುವ ಮಾಹಿತಿ ಇದೆ. ತೀವ್ರ ಗಂಟಲು ನೋವು ಸಹಿಸದೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ. ಸದರಿ ಯುವಕನ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದ್ದು, ಕಳೆದ ಮಂಗಳವಾರ ಕೊಪ್ಪಳ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬುಧವಾರ ಬೆಳಗ್ಗೆ ತಹಶೀಲ್ದಾರ್ ಎಂ.ಸಿದ್ದೇಶ, ತಾಲೂಕು ವೈದ್ಯಾ ಧಿಕಾರಿ ಡಾ.ಆನಂದ ಗೋಟೂರು, ಪುರಸಭೆ ಮುಖ್ಯಾಧಿಕಾರಿ ಆಶೋಕ ಭೇಟಿ ನೀಡಿದರು. 77 ಮನೆಗಳ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಪ್ರದೇಶ ಹಾಗೂ 200 ಮನೆಗಳ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಪುರಸಭೆ ಸದರಿ ಪ್ರದೇಶದಲ್ಲಿ ಪೌರ ಕಾರ್ಮಿಕರು, ಸ್ವಚ್ಛತೆ, ಕ್ರಿಮಿನಾಶಕ ಸಿಂಪಡಣೆ ಕೈಗೊಂಡಿದ್ದು, ಈ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ. ಪ್ರತಿ ಮನೆಯ ಸದಸ್ಯರು ಸ್ವಯಂ ಹೋಂ ಕ್ವಾರಂಟೈನ್ ಮಾಡಿಕೊಂಡಿದ್ದು, ಈ ಪ್ರದೇಶಕ್ಕೆ ಜನ ಹೋಗಲು ಹಿಂಜರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಯ ಸಮೀಕ್ಷೆ ಕೈಗೊಂಡಿದ್ದು, ಪೊಲೀಸ್ ಗಸ್ತು ಹಾಕಲಾಗಿದೆ. Advertisement
ಯುವಕನಿಗೆ ಸೋಂಕು: ಮಾರುತಿ ನಗರ ಸೀಲ್‌ಡೌನ್
03:37 PM Jun 25, 2020 | Suhan S |
Advertisement
Udayavani is now on Telegram. Click here to join our channel and stay updated with the latest news.