Advertisement

ಉಡುಪಿ ಜಿ.ಪಂ. ಸಿಬಂದಿಗೆ ಸೋಂಕು ದೃಢ

08:22 AM May 26, 2020 | mahesh |

ಉಡುಪಿ: ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್‌ ಯೋಜನೆಯ ಓರ್ವ ಸಿಬಂದಿಗೆ ಸೋಮವಾರ ಕೊರೊನಾ ಸೋಂಕು ತಗುಲಿದೆ. ಇವರು ಮೇ 19ರ ಬಳಿಕ ಕಚೇರಿಗೆ ಬಂದಿರಲಿಲ್ಲ. ಜ್ವರ ಬಂದ ತತ್‌ಕ್ಷಣ ಇವರನ್ನು ವಾಪಸು ಕಳುಹಿಸಿ ಗಂಟಲು ದ್ರವವನ್ನು ಸಂಗ್ರಹಿಸಲಾಯಿತು. ಮೇ 19ರಂದು ಇವರು ಇದ್ದ ಸ್ಥಳವನ್ನು ಸ್ಯಾನಿಟೈಸ್‌ ಮಾಡಲಾಗಿತ್ತು. ಇವರಿಗೆ ನಾಲ್ವರು ಪ್ರಾಥಮಿಕ ಸಂಪರ್ಕದವರಿದ್ದು ಇತರ ಸಂಪರ್ಕವಿದ್ದವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.

Advertisement

ಇಂದು ಸ್ಯಾನಿಟೈಸ್‌
ವರದಿ ಸೋಮವಾರ ಬಂದ ಕಾರಣ ಇಡೀ ಕಚೇರಿಯನ್ನು ಸ್ಯಾನಿಟೈಸ್‌ ಅಥವಾ ಸೀಲ್‌ ಡೌನ್‌ ಮಾಡಿಲ್ಲ. ಮಂಗಳವಾರ ಜಿಲ್ಲಾ ಪಂಚಾಯತ್‌ನ ಕಚೇರಿ ಬಂದ್‌ ಮಾಡಿ ಸ್ಯಾನಿಟೈಸ್‌ ಮಾಡಲಾಗುತ್ತದೆ ಎಂದು ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್ ತ್‌ ಅವರು ತಿಳಿಸಿದ್ದಾರೆ. ಸಿಬಂದಿಯ ಮನೆ ಇರುವುದು ಕಟಪಾಡಿಯ ಸರಕಾರಿಗುಡ್ಡೆಯಲ್ಲಿ. ಈ ಪ್ರದೇಶದ 1ರಿಂದ 5ನೆಯ ಕ್ರಾಸ್‌ ತನಕ 15 ದಿನದವರೆಗೆ ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಈ ವೇಳೆ ಅಗತ್ಯ ಸಾಮಗ್ರಿ ತರಲು 8 ಗಂಟೆಯ ತನಕ ಅನುಮತಿ ನೀಡಲಾಗಿದೆ. ಜಿ.ಪಂ. ಸಿಬಂದಿ ಮತ್ತು ಡಿಎಆರ್‌ ಸಿಬಂದಿಯ ಸಂಪರ್ಕದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಒಬ್ಬರಿಗೆ ಜ್ವರ ಲಕ್ಷಣ ಕಂಡುಬಂದು ಇವರನ್ನು ಪರೀಕ್ಷಿಸಿದಾಗ ಕೋವಿಡ್ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಇನ್ನೊಂದು ರೀತಿಯ ಭೀತಿಯನ್ನು ಹುಟ್ಟು ಹಾಕಿದೆ. ರವಿವಾರದಂತೆ ಇನ್ನೊಬ್ಬ ಪೊಲೀಸ್‌ ಸಿಬಂದಿಗೂ ಸೋಂಕು ತಗಲಿರುವುದೂ ಕಳವಳ ಉಂಟು ಮಾಡಿದೆ. ಸೋಮವಾರದ ಪ್ರಕರಣ ವಿವರ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 38 ಪ್ರಕರಣಗಳು ಪತ್ತೆಯಾಗಿದೆ.

4,540 ವರದಿ ಬಾಕಿ, ಕಳವಳ
ಸೋಮವಾರದ ಅಂಕಿ ಅಂಶ ಪ್ರಕಾರ 4,540 ವರದಿಗಳು ಬರಲು ಬಾಕಿ ಇವೆ. ಸೋಮವಾರ 1,202 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ನಾಲ್ವರು ಉಸಿರಾಟದ ಸಮಸ್ಯೆಯವರು, 41 ಕೋವಿಡ್ ಸಂಪರ್ಕಿತರು, ಮೂವರು ಜ್ವರ ಬಾಧೆಯವರು, 1,154 ಹಾಟ್‌ಸ್ಪಾಟ್‌ ಸಂಪರ್ಕದವರಾಗಿದ್ದಾರೆ. ಶನಿವಾರ 392 ನೆಗೆಟಿವ್‌ ಪ್ರಕರಣ, 32 ಪಾಸಿಟಿವ್‌ ಪ್ರಕರಣಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next