Advertisement

ಕಾಸರಗೋಡಿನಲ್ಲಿ ಮತ್ತೆ ಒಬ್ಬರಿಗೆ ಸೋಂಕು

02:32 AM Mar 29, 2020 | Sriram |

ಕಾಸರಗೋಡು: ಜಿಲ್ಲೆಯಲ್ಲಿ ಒಬ್ಬರ ಸಹಿತ ರಾಜ್ಯದಲ್ಲಿ ಒಟ್ಟು ಆರು ಮಂದಿಗೆ ಶನಿವಾರ ಕೋವಿಡ್ 19ಸೋಂಕು ದೃಢವಾಗಿದೆ. ತಿರುವನಂತಪುರ ಜಿಲ್ಲೆಯಲ್ಲಿ-2, ಕೊಲ್ಲಂ, ಪಾಲಾ^ಟ್‌, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ. ಒಟ್ಟು ರಾಜ್ಯದಲ್ಲಿ ಸೋಂಕು ಬಾಧಿತ 165 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಮಾತ್ರ 148 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ರಾಜ್ಯದಲ್ಲಿ ಒಟ್ಟು 1,34,370 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,33,750 ಮಂದಿ ಮನೆ ಗಳಲ್ಲೂ, 620 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಒಟ್ಟು 6,067 ಸ್ಯಾಂಪಲ್‌ ಪರಿ ಶೋಧನೆ ಯಲ್ಲಿ 5,276 ಮಂದಿ ಫಲಿತಾಂಶ ನೆಗೆಟಿವ್‌ ಆಗಿದೆ. ನಾಲ್ವರು ವಿದೇಶಿಯರು ಕೋವಿಡ್ 19 ವೈರಸ್‌ ಸೋಂಕಿನಿಂದ ಮುಕ್ತರಾಗಿದ್ದಾರೆ.

ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6,511 ಮಂದಿ ನಿಗಾ ದಲ್ಲಿದ್ದಾರೆ. ಇವರಲ್ಲಿ 127 ಮಂದಿ ಆಸ್ಪತ್ರೆಗಳಲ್ಲೂ, 6,384 ಮಂದಿ ಮನೆ ಗಳಲ್ಲೂ ನಿಗಾದಲ್ಲಿದ್ದಾರೆ. ರಾಜ್ಯದಲ್ಲಿ ಎಂಟ್ರೆನ್ಸ್‌ ಪರೀಕ್ಷೆಯನ್ನು ಮುಂದೂಡಲಾಗಿದೆ. ಶೀಘ್ರದಲ್ಲಿ ಫಲಿತಾಂಶ ಲಭಿಸುವ ರ್ಯಾಪಿಡ್‌ ಟೆಸ್ಟ್‌ಗಳನ್ನು ನಡೆಸಲಾಗುವುದು. ಕೋಟ್ಟಯಂನಲ್ಲಿ ಇಬ್ಬರು, ತಿರುವನಂತಪುರ ಮತ್ತು ಎರ್ನಾಕುಳಂ ಜಿಲ್ಲೆಯಲ್ಲಿ ತಲಾ ಒಬ್ಬರು ರೋಗ ಮುಕ್ತರಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

55 ಮಂದಿಯ ಬಂಧನ
ಕಾಸರಗೋಡು: ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 34 ಪ್ರಕರಣಗಳನ್ನು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಲಾಗಿದೆ. 55 ಮಂದಿ ಯನ್ನು ಬಂಧಿಸಲಾಗಿದೆ. 18 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾರಡ್ಕಗೇಟ್‌ ತೆರೆಸಲು
ಕೇರಳದ ಹರಸಾಹಸ
ವಿಟ್ಲ: ಕರ್ನಾಟಕ ಪ್ರವೇಶಿಸಲು ಮಾರ್ಗವೇ ಇಲ್ಲದಂತೆ ಆಗಿರುವುದು ಕೇರಳ ಸರಕಾರದ ನಿದ್ದೆಗೆಡಿಸಿದೆ. ಶನಿವಾರ ಸಾರಡ್ಕಕ್ಕೆ ಆಗಮಿಸಿರುವ ಕೇರಳದ ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳದ ಛಾಯಾಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದು, ಉಭಯ ರಾಜ್ಯಗಳ ಎಲ್ಲ ಗಡಿಗಳನ್ನು ಮುಚ್ಚಿರುವುದು ಸರಿಯಲ್ಲ , ಸಾರಡ್ಕ ಗೇಟನ್ನಾದರೂ ತೆರೆಯಬೇಕೆಂದು ಕರ್ನಾಟಕ ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿದೆ.

Advertisement

ಕಾಸರಗೋಡಿನಲ್ಲಿ ಕೋವಿಡ್ 19 ಸೋಂಕು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಸಾರಡ್ಕ ಗೇಟನ್ನು ತೆರೆಯಬಾರದು ಎಂದು ಸ್ಥಳೀಯರು ಪಟ್ಟು ಹಿಡಿದು ಕಾದು ಕುಳಿತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next