Advertisement
ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟ 14 ಮಂದಿ ಪೈಕಿ ಒಬ್ಬರು ಸಾವಿಗೀಡಾಗಿದ್ದು, 13 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ 11 ಮಂದಿ ಸೋಂಕಿತರಿದ್ದು, ಐವರು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ, ಆರು ಮಂದಿ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್‌ನಗರ ಜನರಲ್ ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ಬಾಕಿ ಇಬ್ಬರು ಕಲಬುರಗಿ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಥರ್ಮಲ್ ಸ್ಕ್ರೀನ್ ತಪಾಸಣೆಬೆಂಗಳೂರು: ನಗರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪಾಲಿಕೆಯ ಕೇಂದ್ರ ಕಚೇರಿಗೆ ಬರುವವರನ್ನು ತಪಾಸಣೆ ಮಾಡಿಯೇ ಕಚೇರಿಯ ಒಳಗೆ ಬಿಡಲು ಪಾಲಿಕೆ ನಿರ್ಧರಿಸಿದೆ. ಈ ಕುರಿತು ಸುದ್ದಿ ಗಾರರ ಜತೆ ಮಾತನಾಡಿ ದ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಕೇಂದ್ರ ಕಚೇರಿಗೆ ಬರುವವರನ್ನು ಗುರು ವಾರದಿಂದ ಥರ್ಮಲ್‌ಸ್ಕ್ರೀನ್‌ನ ಮೂಲಕ ತಪಾಸಣೆ ಮಾಡಿ ಬಿಡಲಾಗುವುದು. ಎಲ್ಲರಿಗೂ (ಸ್ಯಾನಿಟೈಸರ್)ಸೋಂಕು ನಿರೋಧಕ ದ್ರಾವಣ ನೀಡ ಲಾಗುವುದು. ಕೊರೊನಾ ಸೋಂಕು ಹರಡಂತೆ ಪಾಲಿಕೆಯ ಎಲ್ಲ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿ ಕೊಳ್ಳಲು ನಿರ್ದೇಶನ ನೀಡಲಾಗಿದೆ. ಮಧ್ಯಾಹ್ನ 3ರಿಂದ 5 ಗಂಟೆಯ ವರೆಗೆ ಮಾತ್ರ ಪಾಲಿಕೆಯ ಕೇಂದ್ರ ಕಚೇರಿ ಅವಕಾಶ ನೀಡಲಾಗಿದೆ ಎಂದರು. ಕೊರೊನಾ ಬಗ್ಗೆ ಆತಂಕ ಬೇಡ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಕೆಲ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗಿದ್ದು, ಸೋಂಕು ಹರಡದಂತೆ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಯಾರೂ ಆತಂಕ ಪಡಬೇಕಿಲ್ಲ. ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ. ಈ ಸೋಂಕು ತಡೆಗಟ್ಟಲು ನಾವು, ನೀವೆಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಸೂಚನೆಯಂತೆ ಕೆಲ ಮುನ್ನೆಚ್ಚರಿಕೆ ಕ್ರಮ ಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕು ತಡೆ ಗಟ್ಟಲು ಸಹಕರಿಸಬೇಕು. ಜನಜಂಗುಳಿಯಿಂದ ದೂರ ಉಳಿಯುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕು. ಸಾಧ್ಯವಾದಷ್ಟು ಮನೆಯಲ್ಲೇ ಇರಿ. ಸಭೆ, ಸಮಾರಂಭ ಆಯೋಜಿಸಬೇಡಿ. ಅಂತಹ ಕಾರ್ಯ ಕ್ರಮಗಳಿಂದ ದೂರವಿರಿ ಎಂದು ಹೇಳಿದ್ದಾರೆ. ವಿದೇಶ ಪ್ರಯಾಣದಿಂದ ಹಿಂತಿರುಗಿದವರು ಆರೋಗ್ಯ ಇಲಾ ಖೆಗೆ ತಕ್ಷಣ ಮಾಹಿತಿ ನೀಡಿ, ಕಡ್ಡಾಯವಾಗಿ 14 ದಿನಗಳ ಕಾಲ ಪ್ರತ್ಯೇಕವಾಗಿರಿ. ಮಾರ್ಗದರ್ಶನಕ್ಕಾಗಿ ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಿ. ಸರ್ಕಾ ರದ ಅಧಿಕೃತ ಸೂಚನೆ, ಮಾಹಿತಿ ಹೊರತುಪಡಿಸಿ ಇತರ ಗಾಳಿ ಸುದ್ದಿ, ವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ರಂಗೋಲಿ ಬಿಡಿಸಿ ಕೊರೊನಾ ಜಾಗೃತಿ
ಬೆಂಗಳೂರು: ಪಾಲಿಕೆಯ ಕೇಂದ್ರ ಕಚೇರಿಗೆ ನಿತ್ಯ ನೂರಾರು ಜನ ಸಾರ್ವಜನಿಕರು ಬರುವ ಹಿನ್ನೆಲೆ ಯಲ್ಲಿ ಕೊರೊನಾ ಸಂಬಂಧ ಮುಂಜಾಗ್ರತಾ ಕ್ರಮ ಕೈಗೊಂಡು ಕಚೇರಿಗಳ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮೇಯರ್ ಎಂ. ಗೌತಮ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಬುಧವಾರ ಕೇಂದ್ರ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಮೇಯರ್ ಎಲ್ಲ ವಿಭಾಗಗಳಲ್ಲೂ ಸ್ಯಾನಿ ಟೈಸರ್ ಬಳಸುವಂತೆ ನಿರ್ದೇಶನ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಕೆ ಕೇಂದ್ರ ಕಚೇರಿ ಕೆಂಪೇಗೌಡ ಪೌರಸಭಾಂಗಣ ಆವರಣದಲ್ಲಿ ರಂಗೋಲಿ ಕಲಾವಿದರಾದ ಅಕ್ಷಯ್‌ಜಲಿಹಾಳ್ ಕೊರೊನಾ ಸೋಂಕು ತಡೆಯಲು ಮುಂಜಾಗ್ರತೆ ವಹಿಸಿ, ಭಯ ಬೀಳುವ ಅವಶ್ಯಕತೆ ಇಲ್ಲ ಎಂಬ ಸಂದೇಶವಿರುವ ರಂಗೋಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು. ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ವಿರೋಧ ಪಕ್ಷದ ನಾಯಕರಾದ ಅಬ್ದುಲ್‌ವಾಜಿದ್, ವಿಶೇಷ ಆಯುಕ್ತರು(ಘನತ್ಯಾಜ್ಯ)ಡಿ.ರಂದೀಪ್, ಜಂಟಿ ಆಯುಕ್ತರು(ಘನತ್ಯಾಜ್ಯ) ಸಫ್ìರಾಜ್‌ಖಾನ್ ಇತರರಿದ್ದರು. ವದಂತಿ ಹಬ್ಬಿಸಿದರೆ ಶಿಕ್ಷೆ: “ಬಿಬಿಎಂಪಿ ನಗರದೆಲ್ಲೆಡೆ ಚೀನಾ ಮಾದರಿಯಲ್ಲಿ ಕೊರೊನಾ ಸೋಂಕು ನಿರೋಧಕ ದ್ರಾವಣ ಸಿಂಪಡಣೆ ಮಾಡಲಿದ್ದು, ಬುಧವಾರ ರಾತ್ರಿ 10ರಿಂದ ಗುರುವಾರ ಸಂಜೆ 5ರ ವರೆಗೆ ಯಾರು ಮನೆಯಿಂದ ಹೊರ ಬರದಂತೆ ಪಾಲಿಕೆ ಸೂಚನೆ ನೀಡಿದೆ’ ಎಂಬ ವದಂತಿ ಬುಧವಾರ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು, ಚರ್ಚೆಗೆ ಗ್ರಾಸವಾಯಿತು. ಈ ಸಂಬಂಧ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಪಾಲಿಕೆ ಈ ರೀತಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ವದಂತಿ ಹಬ್ಬಿಸಿ ದರೆ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಸೋಂಕಿತರಿಗೆ ನೀಡುತ್ತಿರುವ ಆಹಾರ ಹೀಗಿದೆ
-ಪೋಷಕಾಂಶಯುಕ್ತ ಸಾತ್ವಿಕ ಆಹಾರಕ್ಕೆ ಆದ್ಯತೆ ನೀಡುತ್ತಿದ್ದು, ಯಾವುದೇ ರೀತಿಯ ಆಹಾರ ಪಥ್ಯ ಇಲ್ಲ. ಕೆಲ ಆಸ್ಪತ್ರೆಗಳಲ್ಲಿ ಅಲ್ಲಿನ ರೋಗಿಗಳಿಗೆಂದು ತಯಾರಿಸಿದ ಆಹಾರವನ್ನೇ ನೀಡಲಾಗುತ್ತಿದೆ. -ಜತೆಗೆ, ಕೆಲ ಸೋಂಕಿತರು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದು, ಕೆಲವರು ವೈದ್ಯರ ಅನುಮತಿ ಪಡೆದು ಝೋಮೋಟೊ, ಸ್ವೀಗಿಯಿಂದ ಬುಕ್ಕಿಂಗ್ ಮಾಡಿ ತಮಗಿಷ್ಟದ ಆಹಾರವನ್ನು ತರಿಸಿಕೊಂಡು ಸೇವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ನೀಡುತ್ತಿರುವ ಆಹಾರ
-ಬೆಳಗ್ಗೆ ಉಪಾಹಾರ -ಇಡ್ಲಿ, ಪೊಂಗಲ್, ಬಿಸಿ ಬೇಳೆ ಬಾತ್, ಉಪ್ಪಿಟ್ಟು, ರವಾ ಇಡ್ಲಿ, ಬ್ರೆಡ್. -ಮಧ್ಯಾಹ್ನದ ಊಟ – ಎರಡು ಮೊಟ್ಟೆ, ರಾಗಿ ಮುದ್ದೆ, ಅನ್ನ, ತರಕಾರಿ ಸಾಂಬಾರ್, ಮೊಸರು ಮತ್ತು ಹಣ್ಣು. -ರಾತ್ರಿ ಊಟ – ಅನ್ನ, ಎರಡು ಚಪಾತಿ, ತರಕಾರಿ ಪಲ್ಯ, ತರಕಾರಿ ಸಾಂಬಾರ್. -ದಿನಕ್ಕೆ ಒಂದು ಬಾರಿ ತುಳಸಿ ದಳಗಳನ್ನು ಹಾಕಿ ಸಿದ್ಧಪಡಿಸಿದ ಜ್ಯೂಸ್, ಬೆಲ್ಲ ಒಳಗೊಂಡ ರಾಗಿ ಗಂಜಿ, ಹಾಲು. -ತಟ್ಟೆಗಳಲ್ಲಿ ಪ್ರತ್ಯೇಕ ನೀರಿನ ಬಾಟಲ್, ಟಿಶ್ಯೂ ಒಳಗೊಂಡ ಪ್ಯಾಕಿಂಗ್ ವ್ಯವಸ್ಥೆ