Advertisement

ಸೋಂಕಿತ ಇದ್ದ ಮಂಡಿ ಸೀಲ್‌ಡೌನ್‌

06:23 AM May 29, 2020 | Lakshmi GovindaRaj |

ಕೋಲಾರ: ಎಪಿಎಂಸಿ ವ್ಯಾಪ್ತಿಯಲ್ಲಿನ ಮಂಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿಯಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆ ಮಂಡಿ ಯನ್ನು ಮೂರು ದಿನ ಸೀಲ್‌ಡೌನ್‌ ಮಾಡುತ್ತಿರುವುದಾಗಿ ತಾಲೂಕು  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಡಗೂರು ಡಿ.ಎಲ್‌.ನಾಗರಾಜ್‌ ತಿಳಿಸಿದರು.

Advertisement

ಈ ಸಂಬಂಧ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೋಂಕು ತಡೆಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿದೆ.  ಸೋಂಕಿತ ಇದ್ದ ಮಂಡಿಯು ಎಪಿಎಂಸಿ ಪ್ರಾಂಗಣ ದಲ್ಲಿಲ್ಲ, ಆದರೂ, ಸೋಂಕಿನ ಆತಂಕದಿಂ ದಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಸೀಲ್‌ಡೌನ್‌ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸೋಂಕಿತ ವ್ಯಕ್ತಿ ಕೊವಿಡ್‌ ಆಸ್ಪತ್ರೆಗೆ: ಸೋಂಕಿತ ವ್ಯಕ್ತಿ ಬೇರೆ ಜಿಲ್ಲೆಗೆ ಹೋಗಿ ಬಂದ ಟ್ರಾವೆಲ್‌ ಹಿಸ್ಟರಿ ಹೊಂದಿದವ ರಾಗಿದ್ದು, ಸ್ಥಳೀಯನಲ್ಲ. ರೈತರು ಟೊಮೆಟೋ ಮಂಡಿಗೆ ಬರದಂತೆ ಎಲ್ಲಾ ರೀತಿಯ ಸೂಚನೆ ನೀಡಲಾಗಿದೆ. ಗುರುವಾರ  ಬೆಳಗ್ಗೆ ಹರಾಜು ಪ್ರಕ್ರಿಯೆ ನಡೆಸಿರುವುದು ತಪ್ಪಾಗಿದ್ದು, ಇದು ನನ್ನ ಗಮನಕ್ಕೆ ಬಂದಿಲ್ಲ. ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕೋವಿಡ್‌ 19ದಿಂದಾಗಿ ಆತಂಕ ಎಲ್ಲೆಡೆ ಸಾಮಾನ್ಯವಾಗಿದೆ. ರೈತರು ಯಾವುದೇ ಕಾರಣಕ್ಕೂ ಎಪಿ ಎಂಸಿ ಮಾರುಕಟ್ಟೆಗೆ ಖುದ್ದು ಬರಬೇಡಿ. ತರಕಾರಿ ಟೆಂಪೋ, ಟ್ರ್ಯಾಕ್ಟರ್‌ಗಳಲ್ಲಿ ಕಳುಹಿಸಿಕೊಡಿ, ನಿಮ್ಮ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಪೇಮೆಂಟ್‌ ಮಾಡುತ್ತೇವೆ ಎಂದು ಮನವಿ ಮಾಡಿದರು. ಎಪಿಎಂಸಿ ನಿರ್ದೇಶಕರಾದ ದೇವರಾಜ್‌,  ಅಪ್ಪಯ್ಯಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next