Advertisement

11 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್‌

04:18 PM May 03, 2020 | Naveen |

ಇಂಡಿ: ಕೋವಿಡ್‌ ಲಾಕ್‌ಡೌನ್‌ ದಿಂದಾಗಿ ಸಂಕಷ್ಟದಲ್ಲಿರುವ ಕ್ಷೇತ್ರದ ಬಡ ಜನರ ನೆರವಿಗೆ ಶಾಸಕ ಯಶವಂತ್ರಾಯ ಗೌಡ ಪಾಟೀಲ ಮುಂದಾಗಿದ್ದಾರೆ. ಮತಕ್ಷೇತ್ರದ ಪ್ರತಿ ಹಳ್ಳಿಗಳ ಬಡ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆಗೆ ಮುಂದಾಗಿದ್ದು, 11 ಸಾವಿರ ಕಿಟ್‌ ತಯಾರಿ ಭರದಿಂದ ಸಾಗಿದೆ.

Advertisement

ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ಆಹಾರ ಸಾಮಗ್ರಿಗಳ ಪ್ಯಾಕಿಂಗ್‌ ಕಾರ್ಯ ನಡೆದಿದ್ದು ರವಿವಾರ ಮತ್ತು ಸೋಮವಾರ ಎರಡು ದಿನಗಳಲ್ಲಿ ಇಡೀ ಕ್ಷೇತ್ರದ ಬಡ ಜನರಿಗೆ ಕಿಟ್‌ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ರವಿವಾರ ಸಾಂಕೇತಿಕವಾಗಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಸಿ ವಿತರಣೆಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ದಿನಸಿ ಕಿಟ್‌ನಲ್ಲಿ 2 ಕೆಜಿ ಗೋದಿ  ಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿ ತೊಗರಿಬೇಳೆ, 1 ಕೆಜಿ ಒಳ್ಳೆಣ್ಣೆ, ಚಹಾಪುಡಿ, ಅರಿಷಿಣ, ಸಾಸಿವೆ, ಜೀರಿಗೆ ಇದೆ. ಅಂದಾಜು 33 ಲಕ್ಷ ರೂಪಾಯಿ ವೆಚ್ಚದ ಕಿಟ್‌ ತಯಾರಾಗಿದ್ದು ಅದನ್ನು ವಿತರಿಸುವ ಕಾರ್ಯ ರವಿವಾರ ಪ್ರಾರಂಭವಾಗಲಿದೆ.

80 ಹಳ್ಳಿಗಳಿಗೆ 8 ಸಾವಿರ ಕಿಟ್‌, ಇಂಡಿ ನಗರಕ್ಕೆ 1 ಸಾವಿರ ಕಿಟ್‌, ತಾಂಡಾಗಳಿಗೆ 1 ಸಾವಿರ ಕಿಟ್‌ ವಿತರಿಸಲು ಯೋಜಿಸ ಲಾಗಿದ್ದು, ಹೆಚ್ಚುವರಿಯಾಗಿ 1 ಸಾವಿರ ಕಿಟ್‌ ಸೇರಿ ಒಟ್ಟು 11 ಸಾವಿರ ಕಿಟ್‌ ತಯಾರಿಸಲಾಗುತ್ತಿದೆ. ಈ ಕಿಟ್‌ ನೀಡುವ ಸಲುವಾಗಿ ಕಾರ್ಯಕರ್ತರ ಸಭೆ ಕರೆದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಬಡ ಜನರ ಅಂಕಿ ಅಂಶವನ್ನು ಅಂದಾಜಿಸಿ ಈ ಕಿಟ್‌ ತಯಾರಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಜೂನ್‌ ತಿಂಗಳಲ್ಲಿ ಲಾಕ್‌ ಡೌನ್‌ ಮುಂದುವರಿದರೆ ಇನ್ನೊಮ್ಮೆ ಇಂತಹ ಕಿಟ್‌ ತಯಾರಿಸಿ ಬಡ ಜನರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next