Advertisement

ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನ

05:59 PM Jun 22, 2020 | Naveen |

ಇಂಡಿ: ಪ್ರತಿಯೊಂದು ಗ್ರಾಮದಲ್ಲಿ ಜನರಿಗೆ ಕೋವಿಡ್ ಬಗ್ಗೆ ತಿಳಿಹೇಳಲು ಹಗಲು ಇರುಳು ಶ್ರಮಿಸುತ್ತಿರುವ ಕೋವಿಡ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಪೊಲೀಸ್‌ ಮತ್ತು ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನಿಯವಾಗಿದೆ ಎಂದು ಬಸವೇಶ್ವರ ಕೋ-ಆಪ್‌ ಕ್ರೇಡಿಟ್‌ ಸೊಸೈಟಿ ಸಂಸ್ಥಾಪಕ ಎಂ.ಆರ್‌. ಪಾಟೀಲ ಹೇಳಿದರು.

Advertisement

ತಾಲೂಕಿನ ಬಳ್ಳೊಳ್ಳಿ ಗ್ರಾಮದ ವೀರಭದ್ರೇಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆದ ಬಸವೇಶ್ವರ ಕೋ-ಆಪ್‌ ಕ್ರೆಡಿಟ್‌ ಸೊಸೈಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಬಳ್ಳೊಳ್ಳಿ ಗ್ರಾಪಂ ಆಶ್ರಯದಲ್ಲಿ ಹಮ್ಮಿಕೊಂಡ ಆಶಾ ಕಾರ್ಯಕರ್ತೆಯರಿಗೆ, ವೈದ್ಯರಿಗೆ ಹಾಗೂ ಪೊಲೀಸ್‌ ಸಿಬ್ಬಂದಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಭಾರತ ಹಳ್ಳಿಗಳ ದೇಶ. ನಮ್ಮಲ್ಲಿ ಪೌಷ್ಠಿಕ ಆಹಾರ ಹೆಚ್ಚು ಸೇವಿಸುತ್ತೇವೆ. ಬೇರೆ-ಬೇರೆ ದೇಶಗಳಲ್ಲಿನ ಜನರು ಸುಖಕರ ಜೀವನ ನಡೆಸುತ್ತಾ ಮನೆಯಲ್ಲಿಯೇ ಇರುವುದರಿಂದ ಅಂತಹ ಜನರಿಗೆ ಮಹಾಮಾರಿ ರೋಗ ಹೆಚ್ಚು ಕಂಡು ಬರುತ್ತದೆ. ಆದ್ದರಿಂದ ದೇಶೀಯ ಜನರು ಭಯಪಡದೇ ಕೋವಿಡ್ ವಿರುದ್ಧ ಹೋರಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಲ್ಲನಗೌಡ ಬಿರಾದಾರ, ಅಣ್ಣಪ್ಪ ಪೂಜಾರಿ, ಎಸ್‌.ಆರ್‌. ನಾಯಕ, ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಅವರಾ , ಡಿ.ಎಸ್‌. ಉಮದಿ, ನಿಥಿನ್‌ ಸುರಪೂರ, ಬಸವೇಶ್ವರ ಸೊಸೈಟಿ ಅಧ್ಯಕ್ಷ ಶ್ರೀದೇವಿ ಬಿರಾದಾರ, ಅಶೋಕ ತೋಟದಾರ, ಎ.ಡಿ. ಕುಲಕರ್ಣಿ, ಶಿವನಿಂಗ ತುಪ್ಪದ, ಮಲ್ಲನಗೌಡ ಬಿರಾದಾರ, ಪ್ರಕಾಶ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next