Advertisement

INDvsPAK; ಕೊಹ್ಲಿ,ರಾಹುಲ್ ಶತಕದ ಜುಗಲ್ಬಂದಿ; ಪಾಕ್ ಎದುರು ಸವಾಲಿನ ಮೊತ್ತ

06:46 PM Sep 11, 2023 | Team Udayavani |

ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ- ಪಾಕಿಸ್ಥಾನ ನಡುವಿನ ಏಷ್ಯಾ ಕಪ್ ಸೂಪರ್‌ ಫೋರ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅತ್ಯಮೋಘ ಶತಕಗಳನ್ನು ಸಿಡಿಸಿ ಭಾರತದ ಬ್ಯಾಟಿಂಗ್ ಬಲ ಸಾಬೀತುಪಡಿಸಿದ್ದಾರೆ. ಭಾರತ 50 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 356 ರನ್ ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.

Advertisement

ಕೊಹ್ಲಿ 122 ರನ್ ಗಳಿಸಿ ಅಜೇಯರಾಗಿ ಉಳಿದರು.93 ಎಸೆತಗಳಲ್ಲಿ ಆಕರ್ಷಕ 9 ಬೌಂಡರಿ ಮತ್ತು 3 ಸಿಕ್ಸರ್ ಅವರ ಇನ್ನಿಂಗ್ಸ್ ನ ಆಕರ್ಷಣೆಯಾಗಿತ್ತು. ಜವಾಬ್ದಾರಿಯುತ ಆಟವಾಡಿದ ರಾಹುಲ್ ಅಜೇಯ 111 ರನ್ ಗಳಿಸಿದರು.106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಅವರ ಆಟದ ಆಕರ್ಷಣೆಯಾಗಿತ್ತು. 3 ನೇ ವಿಕೆಟ್ ಗೆ ಇಬ್ಬರು 233 ರನ್ ಜತೆಯಾಟವಾಡಿದ್ದು ಇದು ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತೀ ದೊಡ್ಡ ಜತೆಯಾಟವಾಗಿದೆ.

ನಿನ್ನೆ ಭಾರಿ ಮಳೆಯಿಂದ ಪಂದ್ಯ ಮುಂದೂಡಿಕೆಯಾದ ವೇಳೆ 24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. 8 ರನ್ ಗಳಿಸಿದ್ದ ಕೊಹ್ಲಿ ಮತ್ತು 17 ರನ್ ಗಳಿಸಿದ್ದ ರಾಹುಲ್ ಆಕರ್ಷಕ ಜತೆಯಾಟವನ್ನು ಆಡಿದರು.

ಪಾಕಿಸ್ಥಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ ಮತ್ತು ರಾಹುಲ್ ಕ್ರೀಸ್ ಆಕ್ರಮಿಸಿಕೊಂಡರು ಕೊನೆಯವರೆಗೂ ಆಡಿದರು. ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ 13000 ರನ್ ಗಳನ್ನು ಗಳಿಸಿದ ದಾಖಲೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರರಾಗಿದ್ದು, ವಿಶ್ವದ ಎಂಟನೇ ಆಟಗಾರರಾಗಿದ್ದಾರೆ.

ಭರ್ಜರಿ ಪುನರಾಗಮನ ಮಾಡಿದ ಕೆ.ಎಲ್. ರಾಹುಲ್ ಶತಕವನ್ನು ಭಾವುಕವಾಗಿ ಸಂಭ್ರಮಿಸಿದರು. ವಿಶ್ವಕಪ್ ಗೂ ಮುನ್ನ ಪಾಕ್ ಬೌಲರ್ ಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಬ್ಯಾಟಿಂಗ್ ಬಲವನ್ನು ತೋರಿದರು.

Advertisement

ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ 56 ರನ್ ಶುಭಮನ್ ಗಿಲ್ 58 ರನ್ ಗಳಿಸಿ ಔಟಾಗಿದ್ದರು. ಭಾರಿ ಮಳೆಯ ಕಾರಣದಿಂದಾಗಿ ಭಾನುವಾರ ನಡೆಯಬೇಕಾಗಿದ್ದ ಪಂದ್ಯ ಮೀಸಲು ದಿನವಾದ ಸೋಮವಾರ ಆಡಲಾಗುತ್ತಿದೆ.

357 ರನ್ ಗಳ ಸವಾಲು ಪಡೆದಿರುವ ಪಾಕಿಸ್ಥಾನದ ಪಡೆಯಲ್ಲಿ ಬ್ಯಾಟ್ಸ್ ಮ್ಯಾನ್ ಗಳ ಬಲವಿದ್ದು, ಮಳೆಯ ಅಡ್ಡಿಯಿಂದ ತೇವವಾಗಿರುವ ಕ್ರೀಡಾಂಗಣದಲ್ಲಿ ಭಾರತದ ಬೌಲಿಂಗ್ ನಿರ್ಣಾಯಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next