ಕೊಲಂಬೊ: ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ- ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯ ಮೀಸಲು ದಿನದಲ್ಲಿ ಕೊನೆಗೂ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವು ಮಳೆಯ ಕಾರಣದಿಂದ 4.40ಕ್ಕೆ ಆರಂಭವಾಗಿದೆ.
ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ರವಿವಾರ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಅರಂಭವಾಗಿತ್ತು. ಆದರೆ 24 ಓವರ್ ಮುಗಿಯುತ್ತಿದ್ದಂತೆ ಆರಂಭವಾದ ಮಳೆ ನಿಲ್ಲದ ಕಾರಣ ಪಂದ್ಯವನ್ನು ಮೀಸಲು ದಿನವಾದ ಇಂದಿಗೆ ಮುಂದೂಡಲಾಗಿತ್ತು.
ಮೊದಲ ದಿನದಲ್ಲಿ ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು 24.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಲಾ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಗಿಲ್ 58 ರನ್ ಮಾಡಿದರೆ, ರೋಹಿತ್ 56 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ ಎಂಟು ರನ್ ಗಳಿಸಿದ ವಿರಾಟ್ ಕೊಹ್ಲಿ ಮತ್ತು 17 ರನ್ ಗಳಿಸಿರುವ ಕೆಎಲ್ ರಾಹುಲ್ ವಿಕೆಟ್ ಕಾಯ್ದುಕೊಂಡಿದ್ದರು.
ಇದನ್ನೂ ಓದಿ:Delhi- Goa ವಿಮಾನದೊಳಗೆ ನಾಯಿಯ ಕಿರಿಕ್!; ಮಹಿಳೆಯ ವಿರುದ್ಧ ಕೇಸ್
ಹ್ಯಾರಿಸ್ ರೌಫ್ ಇಲ್ಲ: ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು ಪಂದ್ಯದ ಉಳಿದ ಭಾಗದಿಂದ ಹೊರಬಿದ್ದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಹ್ಯಾರಿಸ್ ರೌಫ್ ಇಂದು ಬೌಲಿಂಗ್ ಮಾಡುವುದಿಲ್ಲ ಎಂದು ಪಾಕಿಸ್ತಾನ ಕ್ಯಾಂಪ್ ಮಾಹಿತಿ ನೀಡಿದೆ. ರವಿವಾರ ಐದು ಓವರ್ ಬೌಲಿಂಗ್ ಮಾಡಿದ್ದ ಹ್ಯಾರಿಸ್ 27 ರನ್ ನೀಡಿದ್ದರು.