ಪುಣೆ: ಭಾರತ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ (Ravichandran Ashwin) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ (WTC) ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಲು ಅವರಿಗೆ ಎರಡು ವಿಕೆಟ್‌ಗಳ ಅಗತ್ಯವಿತ್ತು. ನ್ಯೂಜಿಲ್ಯಾಂಡ್ ನ ಇನ್ನಿಂಗ್ಸ್ ನ ಮೊದಲ ಎರಡು ವಿಕೆಟ್ ಗಳನ್ನು ಅಶ್ವಿನ್ ಪಡೆಯುವ ಮೂಲಕ ಈ ದಾಖಲೆ ಬರೆದರು.
ಅಶ್ವಿನ್ ಈಗ ಡಬ್ಲ್ಯುಟಿಸಿಯಲ್ಲಿ 74 ಇನ್ನಿಂಗ್ಸ್‌ಗಳಲ್ಲಿ 20.75 ಸರಾಸರಿಯಲ್ಲಿ 188 ವಿಕೆಟ್ ಗಳನ್ನು ಪಡೆದಿದ್ದಾರೆ. 11 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಮತ್ತೊಂದೆಡೆ, ಆಸೀಸ್ ಸ್ಪಿನ್ನರ್ ಲಿಯಾನ್ ಅವರು78 ಇನ್ನಿಂಗ್ಸ್‌ಗಳಲ್ಲಿ 26.70 ಸರಾಸರಿಯಲ್ಲಿ 187 ವಿಕೆಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮತ್ತೊಂದು ಕುತೂಹಲದ ವಿಚಾರವೆಂದರೆ, ಅಶ್ವಿನ್ ಅವರು ಈ ಅವಧಿಯಲ್ಲಿ ಲಿಯಾನ್ ಗಿಂತ 2500 ಎಸೆತಗಳನ್ನು ಕಡಿಮೆ ಬೌಲಿಂಗ್ ಮಾಡಿದ್ದರೂ ಈ ವಿಕೆಟ್ ಸಾಧನೆಯಲ್ಲಿ ಮುಂದಿದ್ದಾರೆ.
ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
ರವಿ ಅಶ್ವಿನ್: 188
ನಾಥನ್ ಲಿಯಾನ್: 187
ಪ್ಯಾಟ್ ಕಮಿನ್ಸ್: 175
ಮಿಚೆಲ್ ಸ್ಟಾರ್ಕ್: 147
ಸ್ಟುವರ್ಡ್ ಬ್ರಾಡ್: 134