Advertisement

ಪೂಜಾರ- ಕೊಹ್ಲಿ ವಿಫಲ: ಸೋಲಿನತ್ತ ಮುಖಮಾಡಿದ ತಂಡವನ್ನು ಆಧರಿಸುವರೇ ಆಜಿಂಕ್ಯಾ- ಹನುಮ

10:11 AM Feb 24, 2020 | keerthan |

ವೆಲ್ಲಿಂಗ್ಟನ್: ಆತಿಥೇಯ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಅಪಾಯವನ್ನು ಎದುರಿಸುತ್ತಿದೆ. ಮೊದಲ ಇನ್ನಿಂಗ್ಸ್ ಭಾರಿ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕುಂಟುತ್ತಾ ಸಾಗಿದೆ.

Advertisement

216 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಇಂದು ಬ್ಯಾಟಿಂಗ್ ಆರಂಭಿಸಿ 348 ರನ್ ಗಳಿಸಿತು. ಇಂದು ಕಾಲಿನ್ ಡಿ ಗ್ರಾಂಡ್ ಹೋಮ್ 43 ರನ್ ಕೈಲ್ ಜ್ಯಾಮಿಸನ್ 44 ರನ್ ಮತ್ತು ಟ್ರೆಂಟ್ ಬೌಲ್ಟ್ 38 ರನ್ ಗಳಿಸಿ ಕಿವೀಸ್ ಲೀಡ್ ಅನ್ನು ಹೆಚ್ಚಿಸುವಂತೆ ಮಾಡಿದರು.

ಭಾರತ ಪರ ವೇಗಿ ಇಶಾಂತ್ ಶರ್ಮಾ ಐದು ವಿಕೆಟ್ ಪಡೆದರೆ, ಅಶ್ವಿನ್ ಮೂರು ವಿಕೆಟ್ ಪಡೆದರು. ಬುಮ್ರಾ ಮತ್ತು ಶಮಿ ತಲಾ ಒಂದು ವಿಕೆಟ್ ಪಡೆದರು.

183 ರನ್ ಗಳ ಬೃಹತ್ ಹಿನ್ನಡೆ ಪಡೆದ ಟೀಂ ಇಂಡಿಯಾದ ಬ್ಯಾಟ್ಸಮನ್ ಗಳು ಮತ್ತೆ ಪರದಾಡಿದರು. ಪೃಥ್ವಿ ಶಾ 14 ರನ್ ಗಳಿಸಿದರೆ ಪೂಜಾರ 11 ರನ್ ಗಳಿಸಲಷ್ಟೇ ಶಕ್ತರಾದರು. ಅರ್ಧಶಕತ ಸಿಡಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್ 58 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು.

ತನ್ನ ಕಳಪೆ ಫಾರ್ಮನ್ನು ಇಲ್ಲಿಯೂ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ 19 ರನ್ ಗಳಿಸಿ ಅನಗತ್ಯ ಶಾಟ್ ಗೆ ಕೈ ಹಾಕಿ ಔಟಾದರು. ನಂತರ ಜೊತೆಯಾದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ 118 ಎಸೆತಗಳಲ್ಲಿ 31 ರನ್ ಜೊತೆಯಾಟ ನಡೆಸಿದ್ದಾರೆ. ರಹಾನೆ 25 ರನ್ ಮತ್ತು ವಿಹಾರಿ 15 ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

Advertisement

ಬ್ಯಾಟಿಂಗ್ ನಲ್ಲಿ ಕಾಡಿದ್ದ ಬೌಲ್ಟ್ ಬೌಲಿಂಗ್ ನಲ್ಲೂ ಕಂಟಕವಾದರು. ಬೌಲ್ಟ್ ಮೂರು ವಿಕೆಟ್ ಪಡೆದರು. ಭಾರತ ಇನ್ನೂ 39 ರನ್ ಹಿನ್ನಡೆಯಲ್ಲಿದೆ.  ರಹಾನೆ- ವಿಹಾರಿ ಜೋಡಿಯ ಜೊತೆಯಾಟದ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ.

ಸಂಕ್ಷಿಪ್ತ ಸ್ಕೋರ್
ಭಾರತ: 165 ಮತ್ತು 144ಕ್ಕೆ 4
ಕಿವೀಸ್: 348

Advertisement

Udayavani is now on Telegram. Click here to join our channel and stay updated with the latest news.

Next