Advertisement

INDvsENG; 90 ವರ್ಷಗಳ ಭಾರತೀಯ ಇತಿಹಾಸದಲ್ಲಿ ದಾಖಲೆ ಬರೆದ ಧ್ರುವ್ ಜುರೆಲ್

02:32 PM Feb 16, 2024 | Team Udayavani |

ರಾಜ್ ಕೋಟ್: ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಯುವ ಕ್ರಿಕೆಟಿಗ ಧ್ರುವ್ ಜುರೆಲ್ ಅವರು ಪದಾರ್ಪಣೆ ಮಾಡಿದರು. 23 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟರ್ ಜುರೆಲ್ ಶುಕ್ರವಾರ ದಾಖಲೆಯೊಂದನ್ನು ಬರೆದರು.

Advertisement

ಜುರೆಲ್ ಚೊಚ್ಚಲ ಅರ್ಧಶತಕದ ಅವಕಾಶವನ್ನು ಕಳೆದುಕೊಂಡರು, ಆದರೆ ಯುವ ವಿಕೆಟ್‌ಕೀಪರ್ ಅವರು ಹಿರಿಯ ರಾಷ್ಟ್ರೀಯ ತಂಡಕ್ಕಾಗಿ ಟೆಸ್ಟ್ ನ ಅವರ ಮೊದಲ ಆಟದಲ್ಲಿ ಭಾರತೀಯ ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದರು.

ಧ್ರುವ್ ಜುರೆಲ್ ಅವರು ಇಂದು ಗಳಿಸಿದ 46 ರನ್, ಕಳೆದ 90 ವರ್ಷಗಳಲ್ಲಿ ಟೆಸ್ಟ್ ಪದಾರ್ಪಣೆಯಲ್ಲಿ ಭಾರತೀಯ ವಿಕೆಟ್ ಕೀಪರ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.

ಕೇವಲ ಒಬ್ಬ ಭಾರತೀಯ ವಿಕೆಟ್‌ ಕೀಪರ್ ತನ್ನ ಚೊಚ್ಚಲ ಟೆಸ್ಟ್‌ ನಲ್ಲಿ ಅರ್ಧಶತಕ ಬಾರಿಸಿದ್ದಾರೆ. 1934 ರಲ್ಲಿ ದಿಲಾವರ್ ಹುಸೇನ್ ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದಲ್ಲಿ ತಮ್ಮ ಚೊಚ್ಚಲ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು.

Advertisement

ಭಾರತೀಯ ಇನ್ನಿಂಗ್ಸ್‌ನ 124 ನೇ ಓವರ್‌ನಲ್ಲಿ ಲೇಟ್ ಕಟ್ ಮಾಡಲು ಪ್ರಯತ್ನಿಸಿದ ಜುರೆಲ್ ಔಟಾದರು. 46 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಜುರೆಲ್ ರೆಹಾನ್ ಅಹ್ಮದ್ ಎಸೆತದಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್ ಗೆ ಕ್ಯಾಚ್ ನೀಡಿ ಔಟಾದರು.

ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 131 ರನ್, ರವೀಂದ್ರ ಜಡೇಜಾ 112 ರನ್ ಗಳ ಕೊಡುಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next