Advertisement

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

11:11 AM Oct 06, 2024 | Team Udayavani |

ಗ್ವಾಲಿಯರ್:‌ ಸುದೀರ್ಘ ಟೆಸ್ಟ್‌ ಪಂದ್ಯಗಳ ಸರಣಿಗಳ ನಡುವೆ ಟೀಂ ಇಂಡಿಯಾ ಟಿ20 ಸರಣಿಗೆ ಅಣಿಯಾಗಿದೆ. ಬಾಂಗ್ಲಾದೇಶ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯು ರವಿವಾರ (ಅ.06) ದಂದು ಆರಂಭವಾಗಲಿದೆ. ಗ್ವಾಲಿಯರ್‌ ನಲ್ಲಿ ದಶಕದ ಬಳಿಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸೂರ್ಯಕುಮಾರ್‌ ಪಡೆ ಸಜ್ಜಾಗಿದೆ.

Advertisement

ಯುವ ಆಟಗಾರರನ್ನು ಹೊಂದಿರುವ ಸೂರ್ಯಕುಮಾರ್‌ ಪಡೆ ಗೆಲುವಿನೊಂದಿಗೆ ಸರಣಿ ಆರಂಭಕ್ಕೆ ಮುಂದಾಗಿದೆ.

ಗ್ವಾಲಿಯರ್‌ ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತವು ಹೊಸ ಆರಂಭಿಕ ಜೋಡಿಯನ್ನು ಪರಿಚಯಿಸಲು ಮುಂದಾಗಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಅವರು, ಸಂಜು ಸ್ಯಾಮ್ಸನ್ ಅವರು ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ಎಂದರು.

ಸಂಜು ಸ್ಯಾಮ್ಸನ್ ಸುಮಾರು 10 ವರ್ಷಗಳ ವೃತ್ತಿಜೀವನದಲ್ಲಿ 30 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಕೇರಳದ ಆಟಗಾರ ಇನ್ನೂ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ.

Advertisement

ಅವರ 30-ಪಂದ್ಯಗಳ ವೃತ್ತಿಜೀವನದಲ್ಲಿ, ಸ್ಯಾಮ್ಸನ್ ಎಂಟು ವಿಭಿನ್ನ ಸ್ಥಾನಗಳಲ್ಲಿ ಬ್ಯಾಟ್ ಮಾಡಿದ್ದಾರೆ, 11 ಪಂದ್ಯಗಳಲ್ಲಿ ನಂ. 4 ರಲ್ಲಿ ಆಡಿರುವ ಅವರು, ಐದು ಬಾರಿ ಆರಂಭಿಕರಾಗಿ ಆಡಿದ್ದಾರೆ. ಆರಂಭಿಕರಾಗಿ ಅವರು ಒಂದು ಟಿ20I ಅರ್ಧಶತಕ ಗಳಿಸಿದ್ದಾರೆ.

ಪದಾರ್ಪಣೆ ಮಾಡುತ್ತಾರಾ ಎಕ್ಸ್‌ ಪ್ರೆಸ್‌ ವೇಗಿ?

ಐಪಿಎಲ್‌ ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಪರವಾಗಿ ಆಡಿರುವ ಎಕ್ಸ್‌ ಪ್ರೆಸ್‌ ವೇಗಿ ಮಯಾಂಕ್‌ ಯಾದವ್‌ ಅವರು ಮೊದಲ ಬಾರಿಗೆ ರಾಷ್ಟ್ರೀಯ ಕರೆ ಪಡೆದಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next