Advertisement

Kanpur; ಗ್ರೀನ್‌ ಪಾರ್ಕ್‌ ಪಿಚ್‌ ಗೆ ಬಳಸುವುದು ಉನ್ನಾವೊ ಕೊಳದ ಮಣ್ಣು: ಕಾರಣವೇನು?

11:00 AM Sep 26, 2024 | Team Udayavani |

ಕಾನ್ಪುರ: ಇಲ್ಲಿನ ಐಕಾನಿಕ್ ಗ್ರೀನ್ ಪಾರ್ಕ್ ಸ್ಟೇಡಿಯಂ (Green Park Stadium, Kanpur) ತನ್ನ 24 ನೇ ಟೆಸ್ಟ್‌ ಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿಯ ಎರಡನೇ ಪಂದ್ಯವು ಕಾನ್ಪುರದಲ್ಲಿ ಸೆ.27ರಂದು ನಡೆಯಲಿದೆ.

Advertisement

ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಟೇಡಿಯಂ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಶೇಷತೆ ಏನೆಂದರೆ ಇಲ್ಲಿನ ಪಿಚ್ ಕಾನ್ಪುರದ ಮಣ್ಣಿನಿಂದ ಮಾಡಲ್ಪಟ್ಟಿಲ್ಲ. ಬದಲಾಗಿ, ಇದು 20 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಉನ್ನಾವೊದಲ್ಲಿನ ಕೊಳದ ಮಣ್ಣಿನಿಂದ ಮಾಡಲಾಗಿದೆ.

ಗ್ರೀನ್ ಪಾರ್ಕ್ ಸ್ಟೇಡಿಯಂ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ವಿಶೇಷ ಸ್ಥಳವಾಗಿದೆ. ಇದರ ಮೊದಲ ಟೆಸ್ಟ್ ಪಂದ್ಯವು ಜನವರಿ 1952 ರಲ್ಲಿ ನಡೆದಿತ್ತು.

ಉನ್ನಾವೊದ ಕೊಳದಿಂದ ಕಾನ್ಪುರ ಪಿಚ್‌ ಗೆ ಮಣ್ಣು ತರಿಸಲಾಗಿದೆ. ಇಲ್ಲಿನ ಪಿಚ್ ಸ್ಪಿನ್ನರ್‌ ಗಳಿಗೆ ಸಹಾಯ ಮಾಡುತ್ತದೆ. ಹೀಗಾಗಿ ಎರಡೂ ತಂಡಗಳು ಭಾರಿ ಸ್ಪಿನ್ ತಂತ್ರಗಳನ್ನು ನಿಯೋಜಿಸಬಹುದು ಎಂದು ಅಂದಾಜಿಸಲಾಗಿದೆ.

Advertisement

ಕಾನ್ಪುರ ಟೆಸ್ಟ್‌ ಗೆ ಭಾರತವು ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬಾಂಗ್ಲಾದೇಶಕ್ಕೆ, ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಫಿಟ್ ಆಗದಿದ್ದರೆ, ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಅವರ ಸ್ಥಾನವನ್ನು ತುಂಬಬಹುದು.

Advertisement

Udayavani is now on Telegram. Click here to join our channel and stay updated with the latest news.

Next