Advertisement

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

03:52 PM Sep 19, 2024 | Team Udayavani |

ಚೆನ್ನೈ: ಒಂದು ತಿಂಗಳ ವಿರಾಮದ ಬಳಿಕ ಭಾರತೀಯ ಪುರುಷರ ಕ್ರಿಕೆಟ್‌ ತಂಡವು ಇದೀಗ ಮತ್ತೆ ದ್ವಿಪಕ್ಷೀಯ ಸರಣಿ ಆಡುತ್ತಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ದದ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ಗುರುವಾರ (ಸೆ.19) ಆರಂಭವಾಗಿದೆ. ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ನಾಯಕ ನಜ್ಮುಲ್‌ ಹುಸೇನ್‌ ಶಾಂಟೋ ಅವರು ಮೊದಲು ಭಾರತವನ್ನು ಬ್ಯಾಟಿಂಗ್‌ ಗೆ ಆಹ್ವಾನಿಸಿದ್ದಾರೆ.

Advertisement

ಮೊದಲು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲಿಯೇ ಸತತ ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ 6 ರನ್‌ ಗಳಿಸಿದರೆ, ಶುಭಮನ್‌ ಗಿಲ್‌ 0, ವಿರಾಟ್‌ ಕೊಹ್ಲಿ 6 ರನ್‌ ಮಾಡಿ ಪೆವಿಲಿಯನ್‌ ಸೇರಿದರು. ಆದರೆ ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌ ಮತ್ತು ರವಿ ಅಶ್ವಿನ್‌ ತಂಡದವನ್ನು ಭಾರೀ ಕುಸಿತದಿಂದ ಪಾರು ಮಾಡಿದರು.

ಗಿಲ್ ಅವರು ಔಟಾದ ರೀತಿಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ಬಲಗೈ ಬ್ಯಾಟರ್‌ ಗಿಲ್‌ ಅವರು ಭಾರತೀಯ ಕ್ರಿಕೆಟ್‌ನ ಬಾಬರ್ ಆಜಮ್ ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ.

ಲೆಗ್ ಸೈಡ್‌ನಿಂದ ಕೆಳಕ್ಕೆ ಬಂದ ಚೆಂಡನ್ನು ಗಿಲ್‌ ಎಡ್ಜ್‌ ಮಾಡಿದರು. ಈ ಚೆಂಡು ನೇರವಾಗಿ ವಿಕೆಟ್‌ ಕೀಪರ್‌ ಲಿಟ್ಟನ್‌ ದಾಸ್‌ ಗ್ಲೌಸ್‌ ಸೇರಿತು. ಎಂಟು ಎಸೆತ ಎದುರಿಸಿದ ಗಿಲ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು.

Advertisement

ಬಾಂಗ್ಲಾದ ವೇಗಿ ಹಸನ್‌ ಮೆಹಮೂದ್‌ ಆರಂಭದಲ್ಲಿ ಟೀಂ ಇಂಡಿಯಾ ಬ್ಯಾಟರ್‌ ಗಳನ್ನು ಕಾಡಿದರು. ಉರುಳಿದ ಮೊದಲ ನಾಲ್ಕು ವಿಕೆಟ್‌ ಗಳು ಹಸನ್‌ ಪಾಲಾಯಿತು.

ಪಾಕಿಸ್ತಾನದಲ್ಲಿ ಐತಿಹಾಸಿಕ 2-0 ಟೆಸ್ಟ್ ಸ್ವೀಪ್‌ನಿಂದ ಬಾಂಗ್ಲಾದೇಶ ಉತ್ಸಾಹದಲ್ಲಿದೆ. ಆದರೆ ಇದುವರೆಗೆ 13 ಪಂದ್ಯಗಳಲ್ಲಿ ಒಮ್ಮೆಯೂ ಭಾರತ ವಿರುದ್ದ ಗೆಲ್ಲಲಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next