Advertisement
ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ನ 4 ನೇ ದಿನದಂದು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ ಬುಮ್ರಾ 200 ವಿಕೆಟ್ ಸಾಧನೆ ಮಾಡಿದರು. ಸರಣಿಯಲ್ಲಿ ಈಗಾಗಲೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಬುಮ್ರಾ, ಮಾಲ್ಕಮ್ ಮಾರ್ಷಲ್, ಜೋಯಲ್ ಗಾರ್ನರ್ ಮತ್ತು ಕರ್ಟ್ಲಿ ಆಂಬ್ರೋಸ್ ಅವರಂತಹ ಕೆಲವು ಸಾರ್ವಕಾಲಿಕ ಶ್ರೇಷ್ಠರನ್ನು ಹಿಂದಿಕ್ಕಿ 200 ವಿಕೆಟ್ ಮೈಲಿಗಲ್ಲನ್ನು ತಲುಪಿದರು.
Related Articles
Advertisement
ಅಲ್ಲದೆ, ಬುಮ್ರಾ ಅವರು 20 ಕ್ಕಿಂತ ಕಡಿಮೆ ಸರಾಸರಿಯನ್ನು ಕಾಯ್ದುಕೊಂಡು ಟೆಸ್ಟ್ನಲ್ಲಿ 200 ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ.
ಟೆಸ್ಟ್ ಸ್ವರೂಪದಲ್ಲಿ 200 ವಿಕೆಟ್ ಗಳನ್ನು ಪಡೆದ ಬುಮ್ರಾ ಇನ್ನೂ ಕೆಲವು ದಾಖಲೆಗಳನ್ನು ಸಾಧಿಸಿದ್ದಾರೆ. ಅವರು ಟೆಸ್ಟ್ ನಲ್ಲಿ 200 ವಿಕೆಟ್ ಗಳನ್ನು ಗಳಿಸಿದ ಎರಡನೇ ವೇಗದ ಭಾರತೀಯರಾಗಿ ಜಡೇಜಾ ಅವರನ್ನು ಸೇರಿಕೊಂಡರು. ಬುಮ್ರಾ ಮತ್ತು ಜಡೇಜಾ ಇಬ್ಬರೂ ತಮ್ಮ 44 ನೇ ಟೆಸ್ಟ್ನಲ್ಲಿ ಈ ಸಾಧನೆಯನ್ನು ಮಾಡಿದರು. ಒಟ್ಟಾರೆಯಾಗಿ ಬುಮ್ರಾ ಈ ಮೈಲಿಗಲ್ಲನ್ನು ಪೂರ್ಣಗೊಳಿಸಿದ 12 ನೇ ಭಾರತೀಯ ಬೌಲರ್ ಆಗಿದ್ದಾರೆ.